ಹೊನ್ನಾವರ: ಲೋಕಪ್ರಸಿದ್ಧ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಭುದೇಂದ್ರ ತೀರ್ಥ ಸ್ವಾಮಿಗಳು ಉತ್ತರ ಕನ್ನಡ ಜಿಲ್ಲೆಗೆ ಪ್ರಥಮ ಬಾರಿ ಆಗಮಿಸಿ ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಹೂಡಿದ್ದರು. ನಂತರ ಮುರ್ಡೇಶ್ವರಕ್ಕೂ ಭೇಟಿ ನೀಡಿ ಮುರ್ಡೇಶ್ವರನ ದರ್ಶನ ಪಡೆದರು.
Advertisement
ಎಸ್‌ಆರ್‌ಎಲ್ ಸಾರಿಗೆ ಸಂಸ್ಥೆ ಮಾಲಕ ವೆಂಕಟ್ರಮಣ ಹೆಗಡೆ ಮತ್ತು ಕರಿಕಾನ ಪರಮೇಶ್ವರಿ ದೇವಾಲಯದ ಮುಖ್ಯ ಅರ್ಚಕ ಸುಬ್ರಹ್ಮಣ್ಯ ಭಟ್ ಮತ್ತು ಗಣ್ಯರ ಸ್ವಾಗತ ಸಮಿತಿ ಬಾಳೆಗದ್ದೆಯಿಂದ ಮೆರವಣಿಗೆಯಲ್ಲಿ ಮಯೂರ ಮಂಟಪಕ್ಕೆ ಕರೆದೊಯ್ಯಿತು. ಸ್ಥಳೀಯ ಸುಗ್ಗಿ ಕಲಾವಿದರು, ವಾದ್ಯ ವೃಂದದವರು ಮೆರವಣಿಗೆ ಚಂದಗೊಳಿಸಿದ್ದರು. ಸರಳ ವ್ಯಕ್ತಿತ್ವದ ಶ್ರೀಗಳು ತಮ್ಮ ಆರಾಧ್ಯದೇವರ ಸಹಿತ ದೇವಸ್ಥಾನದಲ್ಲಿಯೇ ಬಿಡಾರ ಹೂಡಿದ್ದರು.
ನಡೆಯಿತು. ಶ್ರೀಗಳಿಗೆ ಸೇವಾ ಸಮೀತಿ ಅರ್ಪಿಸಿದ ಲಕ್ಷ ರೂ. ಗಳನ್ನು ಮಂತ್ರಾಲಯದ ಪ್ರಸಾದವಾಗಿ 10 ಸಾವಿರ ರೂ. ಸೇರಿಸಿ ಒಟ್ಟೂ ಮೊತ್ತವನ್ನು ದೇವಸ್ಥಾನಕ್ಕೆ ಬಳಸಿಕೊಳ್ಳಲು ಶ್ರೀಗಳು ಮರಳಿ ಒಪ್ಪಿಸಿದರು. ನಂತರ ಶ್ರೀಗಳು ಮುರ್ಡೇಶ್ವರದ ಟ್ರಸ್ಟಿಗಳಾದ ಸತೀಶ ಶೆಟ್ಟಿ ಅವರ ವಿನಂತಿಯಂತೆ ಮುರ್ಡೇಶ್ವರದಲ್ಲಿ ನಡೆದ ಅಭಿವೃದ್ಧಿ
ಕಾರ್ಯಗಳನ್ನು ಕಂಡು ಸಂತೋಷಪಟ್ಟರು. ಸುಬ್ರಹ್ಮಣ್ಯ ಮತ್ತು ಮುಡೇìಶ್ವರ ದೇವರಿಗೆ ಶ್ರೀಗಳು ಪೂಜೆ ಸಲ್ಲಿಸಿದರು. ಮಂತ್ರಾಲಯ ಮಹಿಮೆಯಂತೆ ಸುಭುದೇಂದ್ರ ತೀರ್ಥರ ಆಗಮನ, ಆಶೀರ್ವಾದ ಈ ಭಾಗದಲ್ಲಿ ಸಂಚಲನ ಮೂಡಿಸಿದೆ. ಶ್ರೀಗಳ ಕಾರ್ಯಕ್ರಮದ ವ್ಯವಸ್ಥೆ ಮಾಡಿದ ವೆಂಕಟ್ರಮಣ ಹೆಗಡೆ ಮಂತ್ರಾಲಯದ ಭಕ್ತರ ಅಭಿನಂದನೆಗೆ ಪಾತ್ರರಾದರು.