Advertisement
ಅವರು ಮಲ್ಪೆ ಪಡುಕರೆಯ ನಾಗರಿಕರ ಬಹುಕಾಲದ ಬೇಡಿಕೆಗಳ ಲ್ಲೊಂದಾದ ಮಲ್ಪೆ ಪಡುಕರೆ ಸಂಪರ್ಕ ಸೇತುವೆ ಕಾಮಗಾರಿಯನ್ನು ಬುಧವಾರ ಇಲಾಖೆಯ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತ ನಾಡಿದರು.ವಿನ್ಯಾಸ ಬದಲಾವಣೆ ಹಿಂದಿನ ಸರಕಾರ ಸೇತುವೆಗೆ ಮಂಜೂರಾತಿ ನೀಡಿದ್ದರೂ ಸಿದ್ದರಾಮಯ್ಯ ಸರಕಾರ ಬಂದ ಮೇಲೆ 2013ರಲ್ಲಿ ತಾನು ಶಾಸಕನಾಗಿ ಬಂದ ಬಳಿಕ ಹಣಕಾಸು ಬಿಡುಗಡೆ ಮಾಡಿಸ ಲಾಗಿದೆ. ವಿನ್ಯಾಸದ ಬದಲಾವಣೆ, ಡಿಸೈನ್ ಅನುಮೋದನೆ, ಪಿಎಂಸಿ ಸಮಿತಿ ರಚನೆ ಮಾಡಿ ಯೋಜನೆಗೆ ಸುಮಾರು 13.5 ಕೋ.ರೂ. ಖರ್ಚು ಮಾಡಲಾಗಿದೆ. ಸೇತುವೆಯ ಈ ಹಿಂದೆ ಇದ್ದ ಅಗಲ 4.25 ಮೀ.ನಿಂದ 5.25 ಮೀ. ಏರಿಸಲಾಗಿದೆ ಎಂದರು.
ಸುಮಾರು 16.5 ಕೋ. ರೂ. ಮೊತ್ತದ ಈ ಸೇತುವೆ ಕಾಮಗಾರಿ ಶೇ. 80ರಷ್ಟು ಮೊತ್ತವನ್ನು ಈಗಾಗಲೇ ಗುತ್ತಿಗೆದಾರರಿಗೆ ಪಾವತಿ ಮಾಡಲಾಗಿದೆ. ಇಷ್ಟು ದೊಡ್ಡ ಮೊತ್ತದ ಸೇತುವೆ ಆಗುವಾಗ ಇಷ್ಟು ಮೊತ್ತದ ಪಾವತಿ ಆಗಿರುವ ಇನ್ನೊಂದು ಸೇತುವೆ ಭಾರತದಲ್ಲಿ ಇಲ್ಲ. ಅಷ್ಟು ವೇಗವಾಗಿ ನಾವು ಪಾವತಿ ಮಾಡಿಕೊಂಡು ಬಂದಿದ್ದೇವೆ. ಕೆಲವರು ರಾಜಕೀಯ ಉದ್ದೇಶಕ್ಕಾಗಿ ಬೇಳೆ ಬೇಯಿಸಲು ನೋಡುತ್ತಿದ್ದಾರೆ. ಅವರ ಶ್ರಮ ವಿಫಲವಾಗುತ್ತದೆ ಎಂದರು.
Related Articles
ಪಡುಕರೆ ಮುಖ್ಯರಸ್ತೆಯನ್ನು 50 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಇಲ್ಲಿನ ದೇಗುಲ ಉತ್ಸವದ ಬಳಿಕ ಕಾಮಗಾರಿ ಆರಂಭ ವಾಗುತ್ತದೆ. ವಿಶೇಷವಾಗಿ ಪಡುಕರೆ ಬೀಚ್‌ನ್ನು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅಧೀನಕ್ಕೆ ತರಲು ಈಗಾಗಲೇ ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಪಡುಕರೆ ಬೀಚನ್ನು ಮಲ್ಪೆ ಬೀಚ್‌ನಂತೆ ಪ್ರವಾಸೋದ್ಯಮ ತಾಣವನ್ನಾಗಿ ಅಭಿ
ವೃದ್ಧಿಪಡಿಸಲಾಗುವುದು ಎಂದರು.
Advertisement
ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ ತೋನ್ಸೆ, ನಗರಸಭೆಯ ಆಯುಕ್ತ ಡಿ. ಮಂಜುನಾಥಯ್ಯ, ಎಂಜಿನಿಯರ್ ಗಣೇಶ್, ಬಂದರು ಇಲಾಖೆಯ ಎಂಜಿನಿಯರ್ ನಾಗರಾಜ್, ನಗರ ಸಭಾ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ನಗರಸಭಾ ಸದಸ್ಯರಾದ ಗಣೇಶ್ ನೆರ್ಗಿ, ನಾರಾಯಣ ಪಿ. ಕುಂದರ್, ಸತೀಶ್ ಅಮೀನ್ ಪಡುಕರೆ, ಕೇಶವ ಎಂ. ಕೋಟ್ಯಾನ್, ಶೇಖರ ಜಿ. ಕೋಟ್ಯಾನ್, ಸುರೇಶ್ ಮೆಂಡನ್, ಪ್ರಶಾಂತ್ ಪೂಜಾರಿ, ನವೀನ್ ಸಾಲ್ಯಾನ್, ಬಾಬು ಕೊಳ, ವೆಂಕಪ್ಪ ಮೆಂಡನ್, ಜಗನ್ನಾಥ ಕಡೆಕಾರ್, ಜಯಕರ ಅಮೀನ್, ಆನಂದ ಕಾಂಚನ್, ನಾಗೇಶ್ ಬಂಗೇರ, ವಸಂತ ಸುವರ್ಣ, ಸತೀಶ್ ಎನ್. ಕೋಟ್ಯಾನ್, ರಾಘವ ಜಿ.ಕೆ., ಕೃಷ್ಣ ಜಿ. ಕೋಟ್ಯಾನ್, ಗುತ್ತಿಗೆದಾರ ಯೋಜಕ ಇಂಡಿಯಾದ ವಿನಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.