ಸುಮಾರು ಐದರಿಂದ ಆರು ಕಿಮೀ. ದೂರದ ಈ ರಸ್ತೆಯಲ್ಲಿ ಒಂದು ಬಸ್ ಸಂಚರಿಸುತ್ತಿದ್ದು ಅನಂತರ ನಡೆದುಕೊಂಡು ಹೋಗಬೇಕಿದೆ. ಈ ಪ್ರಮುಖ ರಸ್ತೆಯಲ್ಲಿ ದಾರಿ ದೀಪ ಅಳವಡಿಸಿದ್ದರೂ ಅವುಗಳು ಉರಿಯುವುದಿಲ್ಲ. ಇದರ ಹತ್ತಿರದಲ್ಲಿ ಇರುವ ಮೆಸ್ಕಾಂ ಇಲಾಖೆಗೆ ಕಾಯ್ದಿರಿಸಿದ್ದ ಜಮೀನು ಪಾಳು ಬಿದ್ದಿದ್ದು, ವಿಷಜಂತುಗಳ ವಾಸ ಸ್ಥಾನವಾಗಿದೆ.
Advertisement
ದುರಸ್ತಿಯಾಗದ ಮೋರಿ ಈ ರಸ್ತೆಯಲ್ಲಿ ಮೋರಿಯೊಂದು ಕುಸಿದು ವರ್ಷವಾಗುತ್ತಾ ಬಂದರೂ ಇನ್ನೂ ದುರಸ್ತಿಯಾಗಿಲ್ಲ. ಕಳೆದ ಎರಡು ತಿಂಗಳ ಹಿಂದೆ ಮೋರಿ ದುರಸ್ತಿಗಾಗಿ ಜಲ್ಲಿಕಲ್ಲನ್ನು ತಂದು ರಸ್ತೆಯಲ್ಲಿಯೇ ಸುರಿಯಲಾಗಿದ್ದು ಅದು ರಸ್ತೆ ಎಲ್ಲÉ ಹರಡಿದೆೆ. ಇದರಿಂದ ಪಾದಚಾರಿಗಳ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.
ದಾರಿ ದೀಪ ಕೆಟ್ಟು ಹೋಗಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಬೀದಿ ದೀಪಗಳ ಸರಬರಾಜು ವಿಳಂಬದಿಂದ ತೊಂದರೆಯಾಗಿತ್ತು. ಬೀದಿ ದೀಪಗಳು ಇದೀಗ ಬಂದಿದ್ದು, ಗುತ್ತಿಗೆದಾರರಿಗೆ ತಿಳಿಸಿ ಅದನ್ನು ಶೀಘ್ರ ಅಳವಡಿಸಲಾಗುವುದು.
-ಪಂಚಾಕ್ಷರಿ ಸ್ವಾಮಿ ಕೆರಿಮಠ, ಪಡುಬಿದ್ರಿ ಗ್ರಾ.ಪಂ. ಪಿಡಿಒ