Advertisement

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

12:40 AM Sep 17, 2024 | Team Udayavani |

ಪಡುಬಿದ್ರಿ: ಇಲ್ಲಿನ ಬೇಂಗ್ರೆ ನಿವಾಸಿ ಶ್ರೀಧರ ಪೂಜಾರಿ (67) ಅವರು ತನ್ನ ಮನೆಯ ಬಚ್ಚಲು ಕೋಣೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಸೆ. 15ರಂದು ಸಂಜೆಯ ವೇಳೆ ಕುತ್ತಿಗೆಗೆ ನೈಲಾನ್‌ ಹಗ್ಗ ಬಿಗಿದು ಕೊಂಡು ಬಚ್ಚಲು ಕೋಣೆಯಲ್ಲಿ ವಿಷ ಸೇವಿಸಿ ಬಿದ್ದಿದ್ದವರನ್ನು ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ಅವರು ಸಾವನ್ನಪ್ಪಿದ್ದಾರೆ. ಮನೆಯ ಕೋಣೆಯಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ಮೃತರಿಗೆ ರಕ್ತದೊತ್ತಡ ಹಾಗೂ ಕಾಲು ನೋವು ಇದ್ದು, ಇದರ ಕೊರಗಿನಿಂದ ಅಥವಾ ಇನ್ಯಾವುದೋ ಕಾರಣದಿಂದ ಕೃತ್ಯವೆಸಗಿರಬಹುದು ಎಂದು ಅವರ ಪುತ್ರ ಸುಧೀರ್‌ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ಅವರು ಪಡುಬಿದ್ರಿ ಯಲ್ಲಿ ಕಬ್ಬಿನ ಜ್ಯೂಸ್‌ ಅಂಗಡಿಯನ್ನು ಹೊಂದಿದ್ದರು. ಅನಂತರ ಕ್ಯಾಂಟೀನ್‌ ವ್ಯವಹಾರ ನಡೆಸಿಕೊಂಡಿದ್ದು, ಬಳಿಕ ಅವರು ಕೋಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅನಾರೋಗ್ಯದ ಹಿನ್ನೆಲೆಯಿಂದಾಗಿ ಕೆಲವು ಸಮಯದಿಂದ ಮನೆಯಲ್ಲೇ ಇದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next