ಪಡುಬಿದ್ರಿ: ವರ್ಷಗಳ ಹಿಂದೆಯೇ ಹೆದ್ದಾರಿ ಚತುಃಷ್ಪಥದ ಮಧ್ಯೆ ನೆಲೆಗೊಳಿಸಲಾಗಿದ್ದ ವಿದ್ಯುತ್ ದೀಪಗಳಿಗೆ ಕೊನೆಗೂ ಮೋಕ್ಷ ದೊರೆತು ಮಂಗಳವಾರದಿಂದ ಅರೆಬರೆಯಾಗಿ ಉರಿಯಲಾರಂಭಿಸಿದೆ.
ಹೆದ್ದಾರಿ ಕಾಮಗಾರಿಯು 90 ಶೇಕಡಾ ಪೂರ್ಣವಾದಾಗಲೇ ಕಳೆದ ಮೇ 15 ರೊಳಗಾಗಿ ದೀಪಗಳು ಉರಿಯಲಿವೆ ಎಂದು ನವಯುಗ ಕಂಪೆನಿ ಅಧಿಕಾರಿ ಪಂಚಾಯತ್ ನಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಹೇಳಿದ್ದರು. ಅದು ಈಗಷ್ಟೇ ಜೂನ್ ಅಂತ್ಯದಲ್ಲಿ ನಿಜವಾಗಿದೆ.
ಆದರೂ ಇಂದು ಕೆಲವೇ ದೀಪಗಳು ಉರಿದಿವೆ. ಹಲವಾರು ಬಲ್ಬ್ ಗಳು ವರ್ಷದಷ್ಟು ಹಳೆಯದಾಗಿ ಹಾಳಾಗಿರುವುದರಿಂದ ಇಂದು ಉರಿದಿರಲಿಲ್ಲ.
ನವಯುಗ ಮೆಸ್ಕಾಂ ಬಿಲ್ ಬಾಕಿಯೂ ಹೆದ್ದಾರಿ ದೀಪ ಬೆಳಗಲು ಆದ ವಿಳಂಬಕ್ಕೆ ಇನ್ನೊಂದು ಪರೋಕ್ಷ ಕಾರಣವೆನಿಸಿದೆ.