Advertisement

Missing Case ಪಡುಬಿದ್ರಿ: ವ್ಯಕ್ತಿ ನಾಪತ್ತೆ; ದೂರು ದಾಖಲು

11:40 PM Sep 05, 2023 | Team Udayavani |

ಪಡುಬಿದ್ರಿ: ತೆಂಕ ಗ್ರಾಮದ ಪುಚ್ಚೊಟ್ಟು ನಿವಾಸಿ, ಮನೆಯಲ್ಲಿ ಒಬ್ಬರೇ ವಾಸವಿದ್ದ ಕರಿಯ ಪೂಜಾರಿ (67) ಅವರು ಆ. 29ರಂದು ಸಂಜೆ ಮನೆಯಿಂದ ಹೊರಟು ಹೋದವರು ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಎಣ್ಣೆಕಪ್ಪು ಮೈಬಣ್ಣ, ದಪ್ಪ ಶರೀರ, ಎದುರಲ್ಲಿ ಭಾಗಶಃ ಬೊಕ್ಕತಲೆಯವರಾದ ಅವರು ತುಳು, ಕನ್ನಡ, ಹಿಂದಿ, ಮರಾಠಿ ಭಾಷೆಗಳನ್ನು ಮಾತಾಡಬಲ್ಲವರಾಗಿದ್ದಾರೆ. ಇವರ ಕುರಿತಾಗಿ ಯಾರಿಗಾದರೂ ತಿಳಿದು ಬಂದಲ್ಲಿ ಪಡುಬಿದ್ರಿ ಪೊಲೀಸ್‌ ಠಾಣೆ (08202555452)ಯನ್ನು ಸಂಪರ್ಕಿಸಬೇಕಾಗಿ ಎಎಸ್‌ಐ ದಿವಾಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next