Advertisement
ಪಡುಬಿದ್ರಿಯ ಕಾರ್ಕಳ ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಈ ಜಾಗದಲ್ಲಿ ಮುಂದಿನ 2-3 ವರ್ಷಗಳಲ್ಲಿ ಸಹಸ್ರಾರು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ. ಇಲ್ಲೇ ಟೋಲ್ಗೇಟ್ ಕೂಡಾ ನಿರ್ಮಾಣವಾಗುವ ನಿಖರ ಸುದ್ದಿಯೂ ಹರಿದಾಡಿದೆ.
Related Articles
Advertisement
ಜ ಪಾರ್ಕಿಂಗ್ ಸಹಿತ ಉತ್ತಮ ಜೀನಸಿ ಮಾಲುಗಳು, ಸೊಪ್ಪುಗಳು, ತರಕಾರಿಗಳು ಏಕಗವಾಕ್ಷಿ ಯೋಜನೆಯಡಿ ಸಿಗುವಂತೆ ಆಗಬೇಕಾಗಿದೆ.
ಜ. ಉತ್ತಮ ರಸ್ತೆ ಸಂಪರ್ಕ, ಕೈಗಾರಿಕಾ ಪಾರ್ಕ್ಗೆ ಸಮೀಪದಲ್ಲೇ ವಾಸ್ತವ್ಯದ ತಾಣಗಳ ಬೇಡಿಕೆ ಇದೆ.
ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿ
ಎಲ್ಲೂರು ಮತ್ತು ಸಾಂತೂರು ಗ್ರಾಮಗಳಲ್ಲಿ ಇದೀಗ ಯೋಜನಾ ಪ್ರಸ್ತಾವವು ಸ್ಥಗಿತಗೊಂಡಿರುವ ಅದಾನಿ ಯುಪಿಸಿಎಲ್ಗಾಗಿ ಕೆಐಎಡಿಬಿಯು ಸುಮಾರು 600 ಎಕ್ರೆಗಳಷ್ಟು ಭೂಮಿಯಲ್ಲಿ ಭೂಸ್ವಾಧೀನತೆಯ ಹಂತದಲ್ಲಿದೆ. ಇಲ್ಲಿ ಕೆಐಎಡಿಬಿ ಮೂಲಕ ಯಾವುದಾರೂ ಕೈಗಾರಿಕಾ ಸ್ಥಾವರ ಅಥವಾ ಸಣ್ಣ ಕೈಗಾರಿಕಾಗಳ ಪಾರ್ಕ್ ಬರಬಹುದೆಂಬ ನಿರೀಕ್ಷೆಯಿದೆ. ಪಲಿಮಾರು ಸಮೀಪದ ಬಳ್ಕುಂಜೆ, ಕೊಲ್ಲೂರು ಭಾಗಗಳಲ್ಲೂ ಸುಮಾರು 900ಎಕ್ರೆ ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಕೆ. ರಾಜು ತಿಳಿಸಿದ್ದಾರೆ.
ನಾನ್ ಎಸ್ಇಝಡ್ ವಲಯದ ಕಂಪೆನಿ, ಉದ್ಯೋಗ
ಪ್ರಜ್ ಜೆನೆಕ್ಸ್ ಎಂಬ ಕಂಪನಿಯ ಸ್ಥಾವರ ಸ್ಥಾಪನೆ ನಡೆಯುತ್ತಿದೆ. 300 – 400 ಕಾರ್ಮಿಕರು ಕಾಮಗಾರಿ ನಡೆಸುತ್ತಿದ್ದಾರೆ. 50ರಷ್ಟು ಕಂಪೆನಿ ಮ್ಯಾನೇಜರ್, ಎಂಜಿನಿಯರ್ಗಳು, ತಾಂತ್ರಿಕ ಪರಿಣಿತರು ನಿಯೋಜಿತಗೊಂಡಿದ್ದಾರೆ. ಪೂರ್ಣಗೊಂಡಾಗ ಇಲ್ಲಿನ ಉದ್ಯೋಗಿಗಳ ಸಂಖ್ಯೆ 2000 ಆಗಬಹುದು ಎಂದು ಅಂದಾಜಿಸಲಾಗಿದೆ. ಪ್ರಜ್ ಜೆನೆಕ್ಸ್ ಕಂಪೆನಿಯು ಭಾರೀ ಯಂತ್ರೋಪಕರಣಗಳ ಉತ್ಪಾದನಾ ಘಟಕವಾಗಿದ್ದು, ರಫ್ತನ್ನೂ ನಿರ್ವಹಿಸಲಿದೆ. ಪ್ರಥಮ ಹಂತದಲ್ಲಿ ಸುಮಾರು 450ಕೋಟಿ ರೂ. ಗಳ ಹೂಡಿಕೆ ಆಗಿದ್ದು, 2ನೇ ಹಂತದಲ್ಲಿ ಇನ್ನೂ 450 ಕೋಟಿ ರೂ. ಹೂಡಿಕೆ ನಿರೀಕ್ಷೆ ಇದೆ.
ತ್ರಿಶೂಲ್ ಇನ್ಫ್ರಾಟೆಕ್ ಜಾಗದಲ್ಲಿ ಆರಂಭವಾಗಿರುವ ಜೈ ಹಿಂದ್ ಸ್ಟೀಲ್ ಟ್ಯೂಬ್ ತಯಾರಿಕೆ ಕಂಪನಿಯು ಈಗಾಗಲೇ ಸ್ಟೀಲ್ ಟ್ಯೂಬ್, ಪೈಪ್ ತಯಾರಿಕೆ ಯನ್ನು ಆರಂಭಿಸಿದೆ. 250 ಮಂದಿಗೆ ಉದ್ಯೋಗಾವಕಾಶಗಳ ನಿರೀಕ್ಷೆ ಇದೆ.
ನ್ಯಾಚುರಲ್ ಫಿಶ್ ಪೌಡರ್ ಘಟಕದಲ್ಲಿ 100 ಮಂದಿಗೆ ಉದ್ಯೋಗ ಅವಕಾಶಗಳಿವೆ.
ತ್ರಿಶೂಲ್ ಇನ್ಫ್ರಾಟೆಕ್ ಕಂಪೆನಿಯು ಸದ್ಯವೇ ಇಂಡಸ್ಟ್ರಿಯಲ್ ಪಾರ್ಕ್ ಹೊಂದಲಿದ್ದು 1000ದಷ್ಟು ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ.
ನಂದಿಕೂರಿನಲ್ಲಿ ಎಂಕೆ ಗ್ರೂಪ್ನ ಎಂ11 ಇಂಡಸ್ಟ್ರೀಸ್ ಪ್ರೈ. ಲಿ. ಕಂಪೆನಿಯು 100 ಎಕ್ರೆ ನಾನ್ ಎಸ್ಇಝಡ್ ಜಾಗಕ್ಕೆ ಪ್ರವೇಶ ಮಾಡಿದೆ. ಬಯೋ ಡೀಸೆಲ್, ಪಾಮ್ ಆಯಿಲ್ ಕಂಪೆನಿ, ಸನ್ ಫ್ಲವರ್ ಆಯಿಲ್ ಘಟಕಗಳೂ ಆರಂಭವಾಗಲಿದ್ದು 300ರಿಂದ 500 ಉದ್ಯೋಗ ಸೃಷ್ಟಿಯ ಅವಕಾಶಗಳಿವೆ. ಇದು ಪರಿಸರವಾದಿಗಳ ಪ್ರತಿಭಟನೆಗೂ ಸಿಲುಕಿದೆ.
ಹೈಡ್ರೋಜನ್ ಮತ್ತು ನೈಟ್ರೋಜನ್ ಉತ್ಪಾದನಾ ಘಟಕಗಳೂ ಜಿಲ್ಲೆಗೆ ಅಡಿಯಿಡುವ ಸಾಧ್ಯತೆ ಇದೆ.
ನಂದಿಕೂರಿನಲ್ಲಿನ ಸ್ಟೀಲ್ ಸ್ಟ್ರಾಂಗ್ ಕಂಪೆನಿ ಕಾಮಗಾರಿ ಪ್ರಾರಂಭಗೊಂಡಿದೆ. 250 ಮಂದಿಗೆ ಉದ್ಯೋಗ ಅವಕಾಶಗಳಿವೆ.
– ಆರಾಮ