Advertisement
ಚಾಲಕ ಹುಬ್ಬಳ್ಳಿಯ ಕಲಂದರ್ (33) ಮತ್ತು ಕ್ಲೀನರ್ ಕಲಘಟಗಿಯ ಅಬ್ದುಲ್ ರೆಹಮಾನ್ (35) ನನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಆರಿಫ್ ಪರಾರಿಯಾಗಿದ್ದಾನೆ.
ಹರಿಯಾಣ ನೋಂದಣಿಯ ಲಾರಿ ಹುಬ್ಬಳ್ಳಿಯಿಂದ ಬರುತ್ತಿದ್ದು, ಪೊಲೀಸರು ಹೆಜಮಾಡಿ ಟೋಲ್‌ಗೇಟ್ ಬಳಿ ತಡೆದು ನಿಲ್ಲಿಸಿ ಚಾಲಕನಲ್ಲಿ ವಿಚಾರಿಸಿದಾಗ ಅದರಲ್ಲಿ ಬಟಾಟೆ ಹಾಗೂ ಈರುಳ್ಳಿ ಮೂಟೆಗಳು ಇರುವುದಾಗಿ ತಿಳಿಸಿದ್ದ. ಮತ್ತೆ ಅನುಮಾನಗೊಂಡ ಪೊಲೀಸರು ಚಾಲಕನನ್ನು ವಿಚಾರಿಸಿದಾಗ ಜಾನುವಾರುಗಳು ಇರುವುದು ಪತ್ತೆಯಾಗಿದೆ. ಬಳಿಕ ಲಾರಿಯನ್ನು ಪಡುಬಿದ್ರಿ ಠಾಣೆಗೆ ತರಲಾಯಿತು.
Related Articles
ಲಾರಿಯಲ್ಲಿ 5 ಎಮ್ಮೆ, 3 ಕೋಣ ಹಾಗೂ 10 ಎತ್ತುಗಳಿದ್ದು, ಅದರಲ್ಲಿ ಒಂದು ಎತ್ತು ಸಾವನ್ನಪ್ಪಿದೆ. ಸ್ಥಳೀಯ ಪಶು ವೈದ್ಯಾಧಿಕಾರಿ ಮೂಲಕ ಚಿಕಿತ್ಸೆ ಕೊಡಿಸಲಾಗಿದೆ. ಸಾವನ್ನಪ್ಪಿದ ಎತ್ತಿನ ಮರಣೋತ್ತರ ಪರೀಕ್ಷೆ ಮಾಡಿ ದಫನ ಮಾಡಲಾಯಿತು. ಘಟನೆಯ ವೇಳೆ ಲಾರಿಯಲ್ಲಿದ್ದ ಕೋಣವೊಂದು ತಪ್ಪಿಸಿಕೊಂಡು ಪರಾರಿಯಾಗಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.
Advertisement
ಇದನ್ನೂ ಓದಿ:ಸಾರಿಗೆ ನೌಕರರ ಪರ ಅನಿರ್ಧಿಷ್ಟಾವಧಿ ಧರಣಿ
ಸಂಘಟನೆ, ಸ್ಥಳೀಯರ ಸಹಕಾರಪೊಲೀಸರು ವಶಪಡಿಸಿಕೊಂಡಿರುವ ಜಾನುವಾರು ಗಳನ್ನು ವಿಎಚ್‌ಪಿ, ಬಜರಂಗ ದಳ ಹಾಗೂ ಭಗವತಿ ಫ್ರೆಂಡ್ಸ್‌ನ ಕಾರ್ಯಕರ್ತರ ಸಹಾಯದೊಂದಿಗೆ ಪಡುಬಿದ್ರಿ ಮೀನು ಮಾರುಕಟ್ಟೆಯ ಬಳಿ ಟ್ರಕ್‌ನಿಂದ ಕೆಳಗಿಳಿಸಿ ಉಪಚರಿಸಲಾಗಿದ್ದು, ಚೇತರಿಸಿಕೊಂಡ ಬಳಿಕ ಅವುಗಳನ್ನು ನೀಲಾವರ ಗೋಶಾಲೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾನುವಾರು ನಿರಂತರ ಸಾಗಾಟ
ಪೊಲೀಸರು ವಶಪಡಿಸಿಕೊಂಡ ಜಾನುವಾರುಗಳ ಪೈಕಿ ನಾಲ್ಕು ಜಾನುವಾರುಗಳಲ್ಲಿ ಸಾಲ ಮಾಡಿ ಖರೀದಿಸಿದ ಗುರುತುಗಳು ಪತ್ತೆಯಾಗಿದ್ದು, ಅವುಗಳನ್ನು ಕದ್ದು ಕೇರಳಕ್ಕೆ ಸಾಗಿಸುತ್ತಿರಬಹುದೆನ್ನುವ ಶಂಕೆ ವ್ಯಕ್ತವಾಗಿದೆ. ಹರಿಯಾಣ ನೊಂದಾವಣೆ ಹೊಂದಿರುವ ಈ ಲಾರಿಯಲ್ಲಿ ಜಾನುವಾರುಗಳನ್ನು ಕಟ್ಟಲು ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ನಿರಂತರವಾಗಿ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿತ್ತೇ ಎನ್ನುವ ಸಂಶಯ ಮೂಡುವಂತಾಗಿದೆ.