Advertisement

ಪಡುಬಿದ್ರಿ ಹೆದ್ದಾರಿ: ಈ ಮಳೆಗಾಲದಲ್ಲೂ ಸಮಸ್ಯೆ ಭೀತಿ

11:06 PM May 05, 2019 | sudhir |

ಪಡುಬಿದ್ರಿ: ಇಲ್ಲಿನ ಪೇಟೆಗೆ ಶಾಪವಾಗಿ ಪರಿಣಮಿಸಿರುವ, ಕುಂಟುತ್ತಿರುವ ಹೆದ್ದಾರಿ ಚತುಃಷ್ಪಥ ಕಾಮಗಾರಿ ಈ ಮಳೆಗಾಲಕ್ಕು ಮೊದಲು ಮುಗಿಯುವ ಲಕ್ಷಣವಿಲ್ಲ. ಪಡುಬಿದ್ರಿಯ ಸರ್ವಿಸ್‌ ರಸ್ತೆಗಳು ಮತ್ತು ಎರ್ಮಾಳು ಕಲ್ಸಂಕ ಭಾಗದ ನಿರ್ಮಾಣ ಹಂತದಲ್ಲಿರುವ ಎರಡು ಕಿರು ಸೇತುವೆಗಳ ಕಾಮಗಾರಿ ಇನ್ನೂ ತೆವಳುತ್ತಿವೆ.

Advertisement

ಕಳೆದ ವರ್ಷ ಮಳೆಗಾಲದಲ್ಲಿ ಕಲ್ಸಂಕ ಭಾಗದಲ್ಲಿ ನೆರೆ ನೀರು ಏರಿಕೆಯಾಗಿ ಪಾದೆಬೆಟ್ಟು ಪಟ್ಲ ಪ್ರದೇಶದಲ್ಲಿ ಶಾಲಾ ಬಾಲಕಿಯ ದುರಂತ ಅಂತ್ಯಕ್ಕೆ ಕಾರಣವಾಗಿತ್ತು. ಈ ಬಾರಿಯೂ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ. ಹೊಸ ಸೇತುವೆಗಳಿಗಾಗಿ ಮಾಡಿರುವ ಅರ್ಧಂಬರ್ಧ ಕಾಮಗಾರಿಯಿಂದಾಗಿ ಕೃತಕ ನೆರೆ ಸೃಷ್ಟಿ ಸಾಧ್ಯತೆ ಇದೆ.

ರಂಗೋಲಿ ಅಡಿಯಿಂದ ಜಾರಿ ಕೊಳ್ಳುವ ಕಂಪೆನಿ ಜಾಯಮಾನ ಕಳೆದ ಡಿಸೆಂಬರ್‌, ಮಾರ್ಚ್‌ ಮತ್ತಿತರ ಗಡುವುಗಳನ್ನು ಹೇಳುತ್ತಲೇ ಸಾಗಿಬಂದ ಕಂಪೆನಿಗೆ ಹಿಂದಿನ ಕುಂದಾಪುರದ ಸಹಾಯಕ ಕಮಿಶನರ್‌ ಒಬ್ಬರು ಸಮನ್ಸ್‌ ಜಾರಿಗೊಳಿಸಿ ಕ್ರಮಕ್ಕೆ ಮುಂದಾದರೂ ಯಾವುದೇ ಫಲಿತವುಂಟಾಗಿಲ್ಲ. ಜತೆಗೆ ಹಣಕಾಸಿನ ತೊಂದರೆಯಿದೆ ಎಂದು ಕಂಪೆನಿ ರಂಗೋಲಿ ಅಡಿ
ತೂರಿಕೊಳ್ಳುತ್ತಿದೆ ಎಂದು ನಾಗರಿಕರು ಆರೋಪಿಸುತ್ತಾರೆ. ಈ ಬಗ್ಗೆ ಮಾತನಡಲು ನವಯುಗ ಅಧಿಕಾರಿ ಶಂಕರ್‌ ರಾವ್‌ ಸಂಪರ್ಕಕ್ಕೆ ಸಿಕ್ಕಿಲ್ಲ.

ಕಂಪೆನಿ ಜತೆ ಚರ್ಚೆ: ಕುಂದಾಪುರ ಎಸಿ ಈ ಕುರಿತಾಗಿ ಕುಂದಾಪುರದ ಸಹಾಯಕ ಕಮಿಶನರ್‌ ಅವರೊಂದಿಗೆ ಕೇಳಿದಾಗ ಕಂಪೆನಿಯವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next