Advertisement

ಪಡುಬಿದ್ರಿ: 1 ವರ್ಷದಿಂದ ಉರಿಯದ ಹೈಮಾಸ್ಟ್‌ ದೀಪಗಳು

11:33 PM Feb 15, 2020 | Team Udayavani |

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಭಾಗದಲ್ಲಿ ಅಳವಡಿಸಲಾಗಿರುವ ಹೈ ಮಾಸ್ಟ್‌ ದೀಪಗಳು ಉರಿಯದೆ ವರ್ಷವೇ ಉರುಳಿದೆ. ಕತ್ತಲಾಗುತ್ತಿದ್ದಂತೆಯೇ ಸಂಚಾರಿಗಳು, ಪಾದಾಚಾರಿಗಳು ಸಂಚಾರಕ್ಕೆ ಪರದಾಡಬೇಕಾಗಿದೆ. ಆದ್ದರಿಂದ ರಾತ್ರಿ ಸಂಚಾರ ಇಲ್ಲಿ ಅಪಾಯಕಾರಿಯಾಗಿದೆ. ಈಗಾಗಲೇ ವಿದ್ಯುತ್‌ ಕಂಬಕ್ಕೂ ವಾಹನ ಬಡಿದು ಅಪಘಾತ ಸಂಭವಿಸಿದ ನಿದರ್ಶನಗಳಿವೆ.

Advertisement

ಬೀದಿದೀಪಗಳು ಇಲ್ಲದ್ದ ರಿಂದ ಪಡುಬಿದ್ರಿ ಕಲ್ಸಂಕದಿಂದ ಪೇಟೆಯ ಪ್ರದೇಶ ಹಾಗೂ ಪೇಟೆಯಿಂದ ಪಡುಬಿದ್ರಿ ಬೀಡುವರೆಗೆ ಸುಗಮ ಸಂಚಾರಕ್ಕೆ ಅನುಕೂಲವಾಗಿಲ್ಲ. ಸವೀಸ್‌ ರಸ್ತೆಗಳೂ ಪೂರ್ಣಗೊಳ್ಳದೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕಾಮಗಾರಿಯಲ್ಲಿನ ವಿಫ‌ಲತೆ, ವಿಳಂಬ ಜನರನ್ನು ಅಸುರಕ್ಷಿತ ಪರಿಸರಕ್ಕೆ ದೂಡಿದೆ. ಹೆದ್ದಾರಿಯ ಅಂಚೂ ಹೊಂಡಗಳಿಂದ ಕೂಡಿದ್ದು ಅಪಾಯವನ್ನು ಆಹ್ವಾನಿಸುತ್ತಿವೆ. ವಾಹನಗಳು ಬಂದಾಗ ಸರ್ವೀಸ್‌ ರಸ್ತೆ ನಿರ್ಮಾಣಕ್ಕಾಗಿ ಅಗೆದು ತೆರೆದಿರಿಸಿದ ಹೊಂಡಗಳು ಗಮನಕ್ಕೆ ಬಾರದೇ ಅಪಾಯ ಉಂಟಾಗುತ್ತಿದೆ. ಹೈಮಾಸ್ಟ್‌ ದೀಪಗಳನ್ನು ಸ್ಥಾಪಿಸಿದ್ದು ಬಿಟ್ಟರೆ ಅವುಗಳ ನಿರ್ವಹಣೆಯನ್ನು ಸಂಬಂಧಪಟ್ಟವರು ಮರೆತಂತಿದೆ ಎಂದು ಜನರು ಆರೋಪಿಸುತ್ತಾರೆ.

ಇದ್ದ ಸವಲತ್ತುಗಳೂ ಇಲ್ಲ
ವರ್ಷಾನುಗಟ್ಟಲೆ ಚತುಃಷ್ಪಥ ಹೆದ್ದಾರಿ ಮತ್ತು ಸರ್ವೀಸ್‌ ರಸ್ತೆಗಳನ್ನು ಮುಗಿಸದೇ ಇರುವುದು ಪಡುಬಿದ್ರಿ ಜನತೆಗೆ ಇನ್ನಿಲ್ಲದ ಸಮಸ್ಯೆಯಾಗಿ ಕಾಡುತ್ತಿದೆ. ಹೆದ್ದಾರಿ ಅವ್ಯವಸ್ಥೆಗೆ ಕಾರಣವಾದ ನವಯುಗ ನಿರ್ಮಾಣ ಕಂಪೆನಿಯನ್ನು ಕಪ್ಪು ಪಟ್ಟಿಗೂ ಸೇರಿಸಿಲ್ಲ. ಹೆದ್ದಾರಿಯಾಗಲಿದೆ, ಸರ್ವಿಸ್‌ ರಸ್ತೆ, ಉತ್ತಮ ದೀಪಗಳ ಕನಸನ್ನು ಅಂದು ಕಾಮಗಾರಿ ಆರಂಭದ ವೇಳೆ ಜನತೆ ಕಂಡಿದ್ದರು. ಆದರೆ ಈಗ ಹೆದ್ದಾರಿ ಕೆಲಸವೂ ಆಗಿಲ್ಲ. ಸ್ಥಳೀಯಾಡಳಿತ ಒದಗಿಸಿದ್ದ ಬೀದಿದೀಪಗಳನ್ನೂ ಕಿತ್ತು ಹಾಕಿ ಇದ್ದ ಸವಲತ್ತೂ ಇಲ್ಲದಂತಾಗಿದೆ. ಹಳೆಯದೇ ಒಳ್ಳೆಯದಿತ್ತು ಎಂದು ಜನತೆ ಮರು ನನೆನಪಿಸುವಂತಾಗಿದೆ. ಇನ್ನಾದರೂ ಸಂಬಂಧ±ಟ್ಟವರು ಎಚ್ಚೆತ್ತುಕೊಳ್ಳಬೇಕು ಎಂಬುದು ಆಗ್ರಹವಾಗಿದೆ.

ಕಾಮಗಾರಿ ಬಳಿಕ ಟೋಲ್‌ಗೆ ಸೇರ್ಪಡೆ
ಪಡುಬಿದ್ರಿಯ ಸುಮಾರು 3ಕಿ. ಮೀ ರಸ್ತೆಯು ಇನ್ನೂ ಪೂರ್ಣಗೊಂಡಿಲ್ಲ. ಕಲ್ಸಂಕ ಸೇತುವೆಯ ಕಾಮಗಾರಿ ಈಗಷ್ಟೇ ಆರಂಭಗೊಂಡಿದೆ. ಸರ್ವಿಸ್‌ ರಸ್ತೆ, ಸೇತುವೆ ಕಾಮಗಾರಿಗಳೆಲ್ಲವೂ ಪೂರ್ಣಗೊಂಡಾಗ ಈ ಹೈ ಮಾಸ್ಟ್‌ ದೀಪಗಳಿಗೆ ಕನೆಕ್ಷನ್‌ ನೀಡಬಹುದು. ಅಲ್ಲಿವರೆಗೂ ಪಡುಬಿದ್ರಿಯ 3 ಕಿ.ಮೀ. ಹೆದ್ದಾರಿಯು ಹೆಜಮಾಡಿ ಟೋಲ್‌ಗೆ ಒಳಪಡುತ್ತಿಲ್ಲ ಎಂದು ಹೆಜಮಾಡಿ ಟೋಲ್‌ಗೇಟ್‌ ಪ್ರಬಂಧಕ ಶಿವಪ್ರಸಾದ್‌ ರೈ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next