Advertisement
ಇಲ್ಲಿನ ಬೀಚ್ ಸರ್ವ ವ್ಯವಸ್ಥೆ ಹೊಂದಿದ್ದು ನಿರ್ವಹಣೆಯನ್ನು ಸಾಯಿರಾಧಾ ಸಮೂಹ ಮಾಡುತ್ತಿದೆ. ಹತ್ತು ಮಂದಿ ನಿರ್ವಹಣೆಯಲ್ಲಿ ತೊಡಗಿದ್ದು, ಸ್ವತ್ಛತೆ, ವಿದ್ಯುದೀಕರಣ, ಜೀವ ರಕ್ಷಕರಿಗೆ ಆದ್ಯತೆ ನೀಡಲಾಗಿದೆ. ಸೌಕರ್ಯಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ 2019ರಲ್ಲಿ ಬೀಚ್ ನಿರ್ವಹಣೆಯಿಂದ ಮುಕ್ತಗೊಳಿಸಲು ಈಗಿನ ನಿರ್ವಹಣೆದಾರರು ಕೇಳಿದ್ದರು. ಆದರೆ ಈವರೆಗೂ ಪರ್ಯಾಯ ನಿರ್ವಹಣೆದಾರರನ್ನು ನೇಮಿಸಿಲ್ಲ.
ಮನೋಹರ ಶೆಟ್ಟಿ ಅವರ ಪತ್ರದ ಬಗ್ಗೆ ಜಿ.ಪಂ. ಹಿಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಟೆಂಡರು ಕರೆದು ನಿರ್ವಹಣೆ ದಾರರನ್ನು ನೇಮಿಸಲು ಇಲಾಖೆ ಉತ್ಸುಕವಾಗಿದೆ. ದರ ಪಟ್ಟಿ ಇತ್ಯಾದಿಗಳನ್ನೂ ಅಂತಿಮಗೊಳಿಸುತ್ತಿದ್ದರೂ ಟೆಂಡರು ಕರೆಯಲು ಇನ್ನೂ ಕಾಲ ಕೂಡಿಬಂದಿಲ್ಲ. ಈ ಮೊದಲು ವಿನಯಕುಮಾರ್ ಸೊರಕೆಯವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ಜಿಲ್ಲಾಡಳಿತದಿಂದ 2 ಲಕ್ಷ ರೂ. ವಾರ್ಷಿಕವಾಗಿ ಭರಿಸಿಕೊಂಡು ನಿರ್ವಹಣೆ ನಡೆಸಲು ಸಾಯಿರಾಧಾ ಸಮೂಹಕ್ಕೆ ಹೊಣೆ ಒಪ್ಪಿಸಿದ್ದರು. ಇಲ್ಲಿ ಒಂದು ತಿಂಗಳಿಗೆ ಲಕ್ಷ ರೂ. ಗೆ ಮಿಕ್ಕಿ ಸಂಬಳ, ವಿದ್ಯುತ್ ಬಿಲ್, ನಿರ್ವಹಣೆಗೆ ಹಣ ಬೇಕು. ಆದರೆ ಪ್ರವಾಸಿಗರಿಂದ ಶುಲ್ಕ ಪಡೆಯುವ ಕೆಲಸ ಇನ್ನೂ ಆಗಿಲ್ಲ. ಆದ್ದರಿಂದ ಟೆಂಡರುದಾರರಿಗೆ ಸದ್ಯ ಹೊರೆಯಾಗಿದೆ. ಈ ಕುರಿತಾಗಿ ಷರತ್ತುಗಳನ್ನು ಟೆಂಡರ್‌ನಲ್ಲಿ ನಮೂದಿಸಬೇಕೆಂಬ ಮಾತುಗಳೂ ಇವೆ.
Related Articles
ಪಡುಬಿದ್ರಿ ಬೀಚ್ ನಿರ್ವಹಣೆ ಕುರಿತಾದ ಟೆಂಡರನ್ನು ಇನ್ನೊಂದು ವಾರದೊಳಗಾಗಿ ಕರೆಯಲಾಗುತ್ತದೆ. ಮನೋಹರ ಶೆಟ್ಟಿ ಅವರ ಮೂರು ವರ್ಷಗಳ ಅವಧಿ ಮುಗಿದಿದ್ದು ಇನ್ನೆರಡು ವರ್ಷಗಳಿಗೆ ಅವರು ಮುಂದುವರಿಸಲು ಒಪ್ಪದಿರುವುದರಿಂದ ಅನಿವಾರ್ಯವಾಗಿ ಟೆಂಡರ್ ಕರೆಯಬೇಕಿದೆ.
-ಚಂದ್ರಶೇಖರ್ ನಾಯ್ಕ, ಸ.ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ
Advertisement
ಸ್ಥಳೀಯರಿಗೆ ನೀಡಿನಾನು ಬೀಚ್ ನಿರ್ವಹಣೆಯನ್ನು ಕಳೆದ ನವೆಂಬರ್‌ನಲ್ಲಿ ಇಲಾಖೆಗೆ ಪತ್ರ ಬರೆದು ತೊರೆದಿದ್ದರೂ ಮಗದೊಂದು ವ್ಯವಸ್ಥೆ ಆಗುವಲ್ಲಿಯವರೆಗೆ ಇಂದಿಗೂ ಉಸ್ತುವಾರಿಯನ್ನು ಮುಂದುವರಿಸಿದ್ದೇನೆ. ನಿರ್ವಹಣೆಯನ್ನು ಸ್ಥಳೀಯರು ನಿರ್ವಹಿಸಿದಲ್ಲಿ ಉತ್ತಮ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದೇನೆ.
-ಮನೋಹರ ಶೆಟ್ಟಿ ಎಸ್.,ಸಾಯಿರಾಧ ಸಮೂಹ