Advertisement

ಪಡುಬಿದ್ರಿ: ವರ್ಕ್ ಫ್ರಂ ಹೋಮ್ ಮಾಡಿಕೊಂಡಿದ್ದ ಯುವತಿ ಅತ್ಮಹತ್ಯೆ

11:35 AM Feb 11, 2022 | Team Udayavani |

ಪಡುಬಿದ್ರಿ: ಇಲ್ಲಿನ ಬ್ರಹ್ಮಸ್ಥಾನ ರಸ್ತೆ ಬಳಿಯ ನಿವಾಸಿ ಸೌಜನ್ಯಾ (22) ಅವರು ಫೆ. 10ರಂದು ಮನೆಯ ಸೀಲಿಂಗ್‌ನ ಕಬ್ಬಿಣದ ಕೊಕ್ಕೆಗೆ ಸೀರೆಯನ್ನು ಹಾಕಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Advertisement

ಆಕೆ ಹೈದರಾಬಾದ್‌ನ ಖಾಸಗಿ ಕಂಪೆನಿಯಲ್ಲಿ ದುಡಿಯುತ್ತಿದ್ದು, ಕೊರೊನಾ ಕಾರಣದಿಂದ ಕಳೆದ 10 ತಿಂಗಳುಗಳಿಂದ “ವರ್ಕ್‌ ಫ್ರಂ ಹೋಮ್‌’ ಕೆಲಸ ಮಾಡಿಕೊಂಡಿದ್ದಳು. ಗುರುವಾರ ತಂದೆ-ತಾಯಿ ಸುರತ್ಕಲ್‌ಗೆ ಹೋಗಿದ್ದ ಸಂದರ್ಭ ಮನೆಯಲ್ಲಿ ತಾನು ಕೆಲಸ ಮಾಡಿಕೊಂಡಿದ್ದ ಕೋಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಧ್ಯಾಹ್ನದ ವೇಳೆ ಹೆತ್ತವರು ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.

ಯುವತಿಯ ಅಜ್ಜಿ ಮನೆಯಲ್ಲೇ ಇದ್ದರೂ ಅವರ ಗಮನಕ್ಕೆ ಬಂದಿರಲಿಲ್ಲ. ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next