ನವರಸ ನಾಯಕ ಜಗ್ಗೇಶ್, ಪ್ರಮೋದ್, ಮಧುಬಾಲಾ, ಹಿತಾ ಚಂದ್ರಶೇಖರ್, ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ “ಪ್ರೀಮಿಯರ್ ಪದ್ಮಿನಿ’ ಚಿತ್ರ ಸದ್ದಿಲ್ಲದೆ 50 ದಿನಗಳ ಪ್ರದರ್ಶನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ತಮ್ಮ ಮೊದಲ ನಿರ್ಮಾಣ ಚಿತ್ರಕ್ಕೆ ಪ್ರೇಕ್ಷಕರು ಮತ್ತು ಚಿತ್ರರಂಗದಿಂದ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಖುಷಿಯಾಗಿರುವ ನಿರ್ಮಾಪಕಿ ಶ್ರುತಿ ನಾಯ್ಡು, “ಪ್ರೀಮಿಯರ್ ಪದ್ಮಿನಿ’ ಚಿತ್ರಕ್ಕೆ ನಾವು ನಿರೀಕ್ಷಿಸಿದಂತೆ ಪ್ರೇಕ್ಷಕರಿಂದ, ಚಿತ್ರರಂಗದಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅದರಲ್ಲೂ ಮಲ್ಟಿಫ್ಲೆಕ್ಸ್‌ಗಳಲ್ಲಿ ಚಿತ್ರ ಚೆನ್ನಾಗಿ ಓಡುತ್ತಿದೆ. ಒಂದೊಳ್ಳೆ ಚಿತ್ರವನ್ನು ಪ್ರೇಕ್ಷಕರಿಗೆ ಕೊಟ್ಟಿರುವ ತೃಪ್ತಿಯನ್ನು ಚಿತ್ರ ಕೊಟ್ಟಿದೆ. ಸದ್ಯ ಚಿತ್ರ ಯಶಸ್ವಿಯಾಗಿ ಐವತ್ತು ದಿನಗಳನ್ನು ಪೂರ್ಣಗೊಳಿಸುತ್ತಿದ್ದು, ಈ ಯಶಸ್ಸಿಗೆ ಕಾರಣರಾದ ಪ್ರೇಕ್ಷಕರು, ಚಿತ್ರರಂಗ ಮತ್ತು ಮಾಧ್ಯಮಗಳೇ ಕಾರಣ. ಈ ಸಂಭ್ರಮವನ್ನು ಎಲ್ಲರೊಂದಿಗೂ ಹಂಚಿಕೊಳ್ಳಲು ವಿಶೇಷವಾದ ಕಾರ್ಯಕ್ರಮವನ್ನು ಆಯೋಜಿಸುವ ಯೋಚನೆ ಇದೆ ಎಂದಿದ್ದಾರೆ. ಚಿತ್ರಕ್ಕೆ ರಮೇಶ್ ಇಂದಿರಾ ನಿರ್ದೇಶನವಿದ್ದು, ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಒಟ್ಟಾರೆ ಪ್ರೀಮಿಯರ್ ಪದ್ಮಿನಿಯ ಹಾಫ್ ಸೆಂಚುರಿಯ ಖುಷಿಯಲ್ಲಿರುವ ನಿರ್ಮಾಪಕಿ ಶ್ರುತಿ ನಾಯ್ಡು ಮತ್ತೂಂದೆಡೆ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ತೆರೆಮರೆಯಲ್ಲಿ ತಯಾರಿ ನಡೆಸುತ್ತಿದ್ದಾರೆ.