Advertisement

ವಿವಾದಿತ ಪದ್ಮಾವತಿಗೆ ಸೆನ್ಸಾರ್‌ ಸರ್ಟಿಫಿಕೇಟ್‌ ಬೇಗನೆ ಇಲ್ಲ

03:46 PM Nov 20, 2017 | udayavani editorial |

ಮುಂಬಯಿ : ಪದ್ಮಾವತಿ ಚಿತ್ರಕ್ಕೆ ಸೆನ್ಸಾರ್‌ ಸರ್ಟಿಫಿಕೇಟ್‌ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕೆಂಬ ಚಿತ್ರ ನಿರ್ಮಾಪಕರ ಮನವಿಯನ್ನು  ಗೀತ ರಚನಕಾರ ಪ್ರಸೂನ್‌ ಜೋಷಿ ನೇತೃತ್ವದ ಸೆಂಟ್ರಲ್‌ ಬೋರ್ಡ್‌ ಆಫ್ ಫಿಲ್ಮ್ ಸರ್ಟಿಫಿಕೇಶನ್‌ ತಿರಸ್ಕರಿಸಿದೆ.

Advertisement

ಸೆನ್ಸಾರ್‌ ಸರ್ಟಿಫಿಕೇಟ್‌ಗಾಗಿ ಸಲ್ಲಿಸಲಾಗಿರುವ ಅರ್ಜಿಗಳನ್ನು ದಿನಾಂಕದ ಅನುಕ್ರಮಣಿಕೆಯ ಪ್ರಕಾರ ಪರಾಮರ್ಶಿಸಿದ ಬಳಿಕವೇ ಸಂಜಯ್‌ ಲೀಲಾ ಭನ್ಸಾಲಿ ಅವರ ಚಿತ್ರಕ್ಕೆ  ಸರ್ಟಿಫಿಕೇಟ್‌ ನೀಡಲಾಗುವುದು ಎಂದು ಸಿಬಿಎಫ್ಸಿ ಹೇಳಿದೆ.

ಕಳೆದ ನ.19ರಂದು ಪದ್ಮಾವತಿ ಚಿತ್ರ ನಿರ್ಮಾಪಕರು ಹೇಳಿಕೆ ನೀಡಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದರು. 

ಪದ್ಮಾವತಿ ಚಿತ್ರದ ಹಿಂದಿರುವ ವಯಾಕಾಮ್‌ 8 ಮೋಷನ್‌ ಪಿಕ್ಚರ್‌ಸ್‌ ಸ್ಟುಡಿಯೋ  ತನ್ನ ಸ್ವಯಂ ಪ್ರೇರಣೆಯ ಹೇಳಿಕೆಯಲ್ಲಿ “ಡಿ.1, 2017ಕ್ಕೆ ನಿಗದಿಸಲಾಗಿದ್ದ ಪದ್ಮಾವತಿ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ; ಚಿತ್ರ ಬಿಡುಗಡೆಯ ಮುಂದಿನ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು’ ಎಂದು ಹೇಳಿತ್ತು.

ರಣವೀರ್‌ ಸಿಂಗ್‌, ಶಾಹೀದ್‌ ಕಪೂರ್‌ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರ ಕಳೆದ ವರ್ಷ ಸೆಟ್‌ಗೆ ಹೋದಂದಿನಿಂದಲೂ ವಿವಾದಗಳಿಗೆ ಗುರಿಯಾಗುತ್ತಾ ಬಂದಿತ್ತು. 

Advertisement

ಚಿತ್ರದಲ್ಲಿ ರಾಣಿ ಪದ್ಮಾವತಿ (ದೀಪಿಕಾ) ಮತ್ತು ಅಲಾವುದ್ದೀನ್‌ ಖಿಲ್ಜಿ (ರಣವೀರ್‌ ಸಿಂಗ್‌) ನಡುವೆ ರೊಮ್ಯಾಂಟಿಕ್‌ ಕನಸಿನ ದೃಶ್ಯಗಳಿರುವೆ ಎಂಬ ಕಾರಣಕ್ಕೆ ರಾಜಪೂತ ಸಂಘಟನೆಯನ್ನು ಅದು ಕೆರಳಿಸಿತ್ತು. 

ಡಿ.1ಕ್ಕೆ ಚಿತ್ರ ಬಿಡುಗಡೆ ಮಾಡದಂತೆ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು. ದೀಪಿಕಾಳನ್ನು ‘ನಾಚ್‌ನೇ ವಾಲಿ’ ಎಂದು ರಾಜಪೂತ ಕರಣಿ ಸೇನೆ ಛೇಡಿಸಿತ್ತು.  ಆಕೆಯ ಶಿರಚ್ಛೇದನ ಮಾಡುವವರಿಗೆ ಒಂದೆಡೆ 1 ಕೋಟಿ ಇನಾಮು ಘೋಷಿಸಿತ್ತು. ಅನಂತರದಲ್ಲಿ ಆಕೆಯನ್ನು ಜೀವಂತ ಸುಟ್ಟರೆ 5 ಕೋಟಿ ಇನಾಮು ಕೊಡಲಾಗುವುದೆಂಬ ಮಾತು ಕೇಳಿ ಬಂದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next