Advertisement

ನವ ವೃಂದಾವನದಲ್ಲಿ ಉತ್ತರಾದಿ ಮಠದಿಂದ ಪದ್ಮನಾಭ ತೀರ್ಥರ ಪೂರ್ವಾರಾಧನೆ

06:30 PM Dec 02, 2021 | Team Udayavani |

ಗಂಗಾವತಿ :ತಾಲೂಕಿನ ಆನೆಗೊಂದಿ ನವವೃಂದಾವನ ಗಡ್ಡಿಯಲ್ಲಿ ಮಧ್ವಾಚಾರ್ಯರ ನೇರ ಶಿಷ್ಯರಾದ ಪದ್ಮನಾಭ ತೀರ್ಥರ ಪೂರ್ವಾರಾಧನೆ ಕಾರ್ಯಕ್ರಮವನ್ನು ಉತ್ತರಾದಿ ಮಠದಿಂದ ಗುರುವಾರ ನೆರವೇರಿಸಲಾಯಿತು.

Advertisement

ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಆದೇಶದ ಮೇರೆಗೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು .
ಪೂರ್ವಾರಾಧನೆ ನೇತೃತ್ವವನ್ನು ಶ್ರೀ ವಿದ್ಯಾಧೀಶಾಚಾರ್ಯ ಗುತ್ತಲ ವಹಿಸಿದ್ದರು . ಸುಪ್ರಭಾತ ನಿರ್ಮಾಲ್ಯ ವಿಸರ್ಜನೆ ಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶ್ರೀಪದ್ಮನಾಭತೀರ್ಥರ ಗ್ರಂಥ ಸನ್ನ್ಯಾಯರತ್ನಾವಲಿ ಕುರಿತು ,ಪಂಡಿತ ವಿದ್ಯಾಧೀಶಾಚಾರ್ಯ ಗುತ್ತಲ ಇವರಿಂದ ಪ್ರವಚನ ಜರುಗಿತು.

ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಜರುಗಿತು . ವಿವಿಧ ಹೂವುಗಳು ಮತ್ತು ರೇಷ್ಮೆ ವಸ್ತ್ರದಿಂದ ಪದ್ಮನಾಭ ತೀರ್ಥರ ಬೃಂದಾವನ ಅಲಂಕರಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಆನಂದ ತೀರ್ಥಾಚಾರ್ ಮಹಿಷಿ ಶ್ರೀಕರಾಚಾರ್ಯ ಹೊಸಪೇಟೆ, ಆನಂದತೀರ್ಥಾಚಾರ್, ಅಕ್ಕಲಕೋಟ್ ಪ್ರಸನ್ನಾಚಾರ್ ಕಟ್ಟಿ , ಶ್ರೀ ವೆಂಕಟಗಿರಿ ಅನ್ವರಿ , ಫಣೀಂದ್ರಾಚಾರ್ಯ, ವರದಾಚಾರ್ ಹೊಸಪೇಟೆ ಅಡವಿರಾವ್ ಕಲಾಲಬಂಡಿ, ವಿಷ್ಣುತೀರ್ಥ ಪೇಟೆ ಮುಂತಾದವರಿದ್ದರು . ಸಾಯಂಕಾಲ ಕಾರ್ತಿಕ ಮಾಸದ ನಿಮಿತ್ಯ ವಿಶೇಷ ದೀಪಾಲಂಕಾರ ಶ್ರೀಪದ್ಮನಾಭ ತೀರ್ಥರ ಮೂಲ ಬೃಂದಾವನಕ್ಕೆ ಜರುಗಿತು .

Advertisement

Udayavani is now on Telegram. Click here to join our channel and stay updated with the latest news.

Next