Advertisement

ಸೂಪರ್‌ ಹೀರೋ ಅಕ್ಷಯ್‌ : ಪ್ಯಾಡ್‌-ಮ್ಯಾನ್‌ ಟ್ರೇಲರ್‌, Watch

11:35 AM Dec 15, 2017 | Team Udayavani |

ಮುಂಬಯಿ : ಚಿತ್ರ ಕಥೆ ಹೇಗೇ ಇರಲಿ;  ತನ್ನ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸುವ ಪ್ರತಿಭಾವಂತ ನಟ ಅಕ್ಷಯ್‌ ಕುಮಾರ್‌ ಒಬ್ಬ ವಿಲಕ್ಷಣ ಸೂಪರ್‌ ಹೀರೋ ಎಂಬುದಕ್ಕೆ ಇದೀಗ ಬಿಡುಗಡೆಗೊಂಡಿರುವ ಅವರ “ಪ್ಯಾಡ್‌-ಮ್ಯಾನ್‌” ಎಂಬ ಹೊಸ ಚಿತ್ರದ ಟ್ರೇಲರ್‌ ಸಾಕ್ಷಿಯಾಗಿದೆ.

Advertisement

ಅಕ್ಷಯ್‌ ಕುಮಾರ್‌ ಅತೀಂದ್ರಿಯ ಶಕ್ತಿ ಹೊಂದಿರುವುದನ್ನು  ಪ್ಯಾಡ್‌-ಮ್ಯಾನ್‌ ನಲ್ಲಿ ಕಾಣಬಹುದಾಗಿದೆ. ಅಕ್ಷಯ್‌ ಜತೆಗೆ ಸೋನಮ್‌ ಕಪೂರ್‌ ಹೀರೋಯಿನ್‌ ಆಗಿ ನಟಿಸಿದ್ದಾಳೆ. ಆರ್‌ ಬಾಲ್ಕಿ ಈ ಚಿತ್ರದ ನಿರ್ದೇಶಕರು.

ಪದ್ಮಶ್ರೀ ಪುರಸ್ಕೃತ ಅರುಣಾಚಲಂ ಮುರುಗನಾಥಂ ಅವರು ಗ್ರಾಮೀಣ ಭಾರತದಲ್ಲಿ ಹುಡುಗಿಯರ ಮುಟ್ಟಿನ ದಿನಗಳಲ್ಲಿ ಅಗತ್ಯವಿರುವ ಶುಚಿತ್ವದ ಕುರಿತಾಗಿ ಜಾಗೃತಿ ಮೂಡಿಸುವಲ್ಲಿ ಮತ್ತು ಪಾಕೆಟ್‌ ಫ್ರೆಂಡ್‌ಲೀ ಸ್ಯಾನಿಟರಿ ಪ್ಯಾಡ್‌ಗಳನ್ನು ಉತ್ಪಾದಿಸಿಸುವಲ್ಲಿ ಅದ್ಭುತ ಕ್ರಾಂತಿಕಾರಕ ಕೆಲಸ ಮಾಡಿ ಪ್ರಸಿದ್ಧರಾಗಿರುವರು. ಅವರ ಸಾಮಾಜಿಕ ಕಳಕಳಿಯ ಸಾಹಸಗಾಥೆಯನ್ನು “ಪ್ಯಾಡ್‌-ಮ್ಯಾನ್‌’ ಚಿತ್ರ ಆಧರಿಸಿದೆ.

ಈ ಚಿತ್ರದ ನಿದೇಶಕ ಆರ್‌ ಬಾಲ್ಕಿ ಅವರು ಈ ಹಿಂದೆ ಚೀನೀ ಕಮ್‌ ಮತ್ತು ಪಾ ಚಿತ್ರದ ಮೂಲಕ ಪ್ರಸಿದ್ಧಿಗೆ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next