Advertisement

“ಪೇಜಾವರ ಶ್ರೀಗಳಿಗೆ ಪದ್ಮವಿಭೂಷಣ ನಾಡಿಗೆ ಗೌರವ’

12:28 AM Jan 27, 2020 | Sriram |

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಲಭಿಸಿದ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಇಡೀ ನಾಡಿಗೆ ಸಂದ ಗೌರವ ಎಂದು ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

Advertisement

ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿ,ಶ್ರೀಪಾದರು ಧರ್ಮ ಜಾಗೃತಿ ಮೂಡಿಸಿದ ಶಾಂತಿದೂತ. ಅವರು ಪ್ರತಿಪಾದಿಸಿದ ವಿಚಾರ, ಸಿದ್ಧಾಂತಗಳಿಗೆ ಗೌರವ ಕೊಟ್ಟು, ನಾವೂ ಆ ಹಾದಿಯಲ್ಲಿಯೇ ಮುನ್ನ ಡೆಯುವ ಮೂಲಕ ಪ್ರಶಸ್ತಿಯ ಮೌಲ್ಯ ವನ್ನು ಹೆಚ್ಚಿಸಬೇಕು ಎಂದರು.

ನ್ಯಾಯಸಮ್ಮತ ತನಿಖೆ
ಬಾಂಬ್‌ ಪ್ರಕರಣಕ್ಕೆ ಸಂಬಂಧಿಸಿ ದಂತೆ ಯಾರೇ ತಪ್ಪಿತಸ್ಥರಿದ್ದರೂ ನ್ಯಾಯಸಮ್ಮತ ತನಿಖೆ ಮಾಡುತ್ತೇವೆ. ಇಲ್ಲಿ ಯಾವುದೇ ಸಂಘಟನೆ, ವ್ಯಕ್ತಿಯ ಬಗ್ಗೆ ಉÇÉೇಖ ಮಾಡಿಲ್ಲ. ಪೊಲೀಸರು ಮೊದಲನೇ ದಿನದಿಂದ ಸಿಸಿಟಿವಿಯ ದೃಶ್ಯಾವಳಿಗಳನ್ನು ಆಧರಿಸಿ ತೀವ್ರವಾದ ತನಿಖೆ ನಡೆಸಿದ ಪರಿಣಾಮ ಆರೋಪಿ ಶರಣಾಗಿ¨ªಾನೆ. ಪೊಲೀಸರು ನಿಷ್ಪಕ್ಷವಾಗಿ ಮತ್ತು ದಕ್ಷತೆಯಿಂದ ಕೆಲಸ ಮಾಡಿದ್ದರಿಂದ ಪ್ರಕರಣವನ್ನು ಶೀಘ್ರ ಭೇದಿಸಲು ಸಾಧ್ಯವಾಯಿತು. ಅಪರಾಧ ಅಪರಾಧವೇ, ಅಪರಾಧಿ ಅಪರಾಧಿಯೇ. ಬಗ್ಗೆ ಯಾರೂ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು ಎಂದರು.
ಸಂಪುಟ ವಿಸ್ತರಣೆ ವಿಚಾರ ಸಿಎಂ ಗಮನದಲ್ಲಿದೆ. ಸಂಪುಟ ವಿಸ್ತರಣೆಯ ಸಂಪೂರ್ಣ ಜವಾಬ್ದಾರಿ ಅವರಿಗಿದೆ. ಅವರು ಆದಷ್ಟು ಬೇಗ ಪಕ್ಷದ ವರಿಷ್ಠರ ಜತೆಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯ ಸರಕಾರ ಬೆಳೆ ಸಾಲ ಮತ್ತು ಮಹಿಳೆಯರ ಒಡವೆ ಸಾಲಕ್ಕೆ ನೀಡುವ ಸಬ್ಸಿಡಿ ವಿವರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜತೆಗೆ ಮಾತನಾಡಲಾಗುತ್ತದೆ. ಕೋಳಿ ಮೊಟ್ಟೆ ವ್ಯಾಪಾರ ವಂಚನೆ ಸಂಬಂಧಿಸಿದಂತೆ ಶೀಘ್ರವಾಗಿ ತನಿಖೆ ಮಾಡಿ, ಆರೋಪಿಗಳನ್ನು ಬಂಧಿಸಲಾಗುತ್ತದೆ. ಜಿಲ್ಲಾ ಪೊಲೀಸ್‌ ಇಲಾಖೆ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲು ಆದೇಶ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next