Advertisement

Padma Awards: ಅರ್ಜಿಗೆ ಇಂದು ಕೊನೇ ದಿನ

11:03 PM Sep 14, 2023 | Team Udayavani |

ನವದೆಹಲಿ: 2024ರ ಪದ್ಮ ಪುರಸ್ಕಾರಗಳಿಗೆ ಅರ್ಜಿ ಸಲ್ಲಿಸಲು, ಹೆಸರುಗಳನ್ನು ಶಿಫಾರಸು ಮಾಡಲು ಶುಕ್ರವಾರವೇ ಅಂತಿಮ ದಿನ (ಸೆ.15)! ದೇಶದ ಯಾವುದೇ ಪ್ರಜೆಗಳೂ ತಮ್ಮ ಅಥವಾ ಅನ್ಯರ ಹೆಸರನ್ನು ಸೂಚಿಸಬಹುದು, ಅದಕ್ಕೆ ಸಂಬಂ­ಧಿಸಿದ ದಾಖಲೆಗಳನ್ನು ಸಲ್ಲಿಸಬಹುದು.

Advertisement

ಈ ಎಲ್ಲ ಪ್ರಕ್ರಿಯೆಗಳನ್ನು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್‌ ಮೂಲಕ ಅಂದರೆ ಆನ್‌ಲೈನ್‌ ಮೂಲಕವೇ ಮಾಡಬೇಕು. ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಕೆಲಸಗಳು, ವಿಜ್ಞಾನ, ಎಂಜಿನಿಯರಿಂಗ್‌, ವ್ಯಾಪಾರ, ಉದ್ಯಮ ಇತ್ಯಾದಿ ಯಾವುದೇ ಕ್ಷೇತ್ರಗಳಲ್ಲಿ ಅಮೋಘ ಎನಿಸುವ ಕೆಲಸ ಮಾಡಿದವರನ್ನು ಪ್ರಶಸ್ತಿಗೆ ಸೂಚಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next