Advertisement
ನಗರದ ಸಿದ್ದಿ ತಾಲೀಮ್ ನಿವಾಸಿಯಾಗಿರುವ ರಶೀದ್ ಅಹ್ಮದ್ ಖಾದ್ರಿ (78) ಅವರು ಪಿಯುಸಿವರೆಗೆ ಶಿಕ್ಷಣ ಪಡೆದಿದ್ದು, ತಂದೆಯ ವಿರೋಧದ ನಡುವೆಯೂ ಬಿದ್ರಿ ಕಲೆಯತ್ತ ಆಕರ್ಷಿತರಾಗಿ, ಆ ಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡರು. ಈ ಐತಿಹಾಸಿಕ ಕ್ರಾಫ್ಟ್ ಅವರನ್ನು ದೇಶ- ವಿದೇಶದಲ್ಲಿ ಪರಿಚಯಿಸುವುದರ ಜತೆಗೆ ಇಂದು ಪದ್ಮಶ್ರೀ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಳ್ಳುವಂತೆ ಮಾಡಿದೆ.
Related Articles
Advertisement
ಏನಿದು ಬಿದ್ರಿ ಕಲೆ ?ಕಣ್ಣಿಗೆ ಮುದ ನೀಡುವ ವಿಶ್ವವಿಖ್ಯಾತ ಬಿದ್ರಿ ಕಲೆಗೆ ದೇಶ ವಿದೇಶಗಳಲ್ಲಿ ಬೇಡಿಕೆ ಇದೆ. ಅಲಂಕಾರಿಕೆ, ಉಡುಗರೆಯಾಗಿ ನೀಡಲು ಸೈ ಎನಿಸಿಕೊಂಡಿರುವ ಕಲಾಕೃತಿಗಳಿಗೆ ಮನ ಸೋಲದವರೇ ಇಲ್ಲ. ಬೀದರನ ಬಹುಮನಿ ಕೋಟೆಯಲ್ಲಿ ಸಿಗುವ ವಿಶಿಷ್ಟ ಮಣ್ಣಿನ ಜತೆಗೆ ಬೆಳ್ಳಿ, ಸತುವು ಹಾಗೂ ತಾಮ್ರವನ್ನು ಬಳಸಿ ಈ ಬಿದ್ರಿ ಕಲಾಕೃತಿಗಳನ್ನು ತಯ್ಯಾರಿಸುತ್ತಾರೆ. ಬಿದ್ರಿ ಕಲೆಯನ್ನೇ ನೆಚ್ಚಿಕೊಂಡಿರುವ ಅಂದಾಜು 500ಕ್ಕೂ ಹೆಚ್ಚು ಕರಕುಶಲ ಕರ್ಮಿಗಳು, ಕಾರ್ಮಿಕರು ಮತ್ತು ವ್ಯಾಪಾರಿಗಳು ಬೀದರನಲ್ಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ನನ್ನ ಜೀವನದ ಕನಸಿನ ಪ್ರಶಸ್ತಿಯಾಗಿದ್ದು, ಇದನ್ನು ಬೀದರ ಜನರಿಗೆ ಅರ್ಪಿಸುತ್ತೆನೆ. ಬಿದ್ರಿ ಕಲೆಯಿಂದ ನನಗೆ ಹಲವು ಪ್ರಶಸ್ತಿ ಸಮ್ಮಾನಗಳು ದೊರತಿವೆ. ಹಲವು ದೇಶಗಳಲ್ಲಿ ಕಲೆಯನ್ನು ಪ್ರದರ್ಶಿಸಿದ ಹೆಮ್ಮೆ ನನಗಿದೆ ಎಂದು ಶಾಹ ರಶೀದ್ ಅಹ್ಮದ್ ಖಾದ್ರಿ ಸಂತಸ ಹಂಚಿಕೊಂಡಿದ್ದಾರೆ.