ಮುಂಬೈ: ಕೆಲವು ಕೋಚ್ ಗಳು ಕ್ರೀಡಾಪಟುಗಳ ಹೆಸರಿನಲ್ಲಿ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ ಎಂದು ಪದ್ಮಶ್ರೀ ಪುರಸ್ಕೃತ ಕ್ರಿಕೆಟ್ ಕೋಚ್ ಗುರುಚರಣ್ ಸಿಂಗ್ ಹೇಳಿದ್ದಾರೆ.
ಕೀರ್ತಿ ಆಜಾದ್, ಅಜಯ್ ಜಡೇಜಾ ಮತ್ತು ಮಣಿಂದರ್ ಸಿಂಗ್ ಸೇರಿದಂತೆ ಡಜನ್ ಗೂ ಹೆಚ್ಚು ಅಂತಾರಾಷ್ಟ್ರೀಯ ಖ್ಯಾತಿಯ ಆಟಗಾರರನ್ನು ಭಾರತ ತಂಡಕ್ಕೆ ನೀಡಿರುವ 87 ವರ್ಷದ ಹಿರಿಯ ಕ್ರಿಕೆಟ್ ಕೋಚ್, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ” ಒಂದು ಪೀಳಿಗೆಯ ಆಟಗಾರರು” ಎಂದು ಹೇಳಿದರು.
“ಕ್ರಿಕೆಟ್ ಕೋಚಿಂಗ್ ನಲ್ಲಿ ಒಬ್ಬ ತರಬೇತುದಾರ ತನ್ನ ಮೂಲಭೂತ ಅಂಶಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಕ್ರೀಡಾಪಟುಗಳು ಕೇವಲ ತರಬೇತಿ ಮತ್ತು ಸರಳ ಅಭ್ಯಾಸಕ್ಕೆ ಹಾಜರಾಗಿದ್ದರೂ ಕೆಲವು ಕೋಚ್ ಗಳು ಆ ನಿರ್ದಿಷ್ಟ ಕ್ರೀಡಾಪಟುವು ತಮ್ಮ ಉತ್ಪನ್ನ ಎಂದು ಹೇಳಿಕೊಳ್ಳುತ್ತಾರೆ. ಇದು ತಪ್ಪು, ಕಪಿಲ್ ದೇವ್ ಕೂಡ ಬಾಂಬೆಯಲ್ಲಿ ನನ್ನ ಕೋಚಿಂಗ್ ಕ್ಯಾಂಪ್ ಗೆ ಹಾಜರಾಗಿದ್ದರು, ಅವರು ನನ್ನ ಪ್ರಾಡಕ್ಟ್ ಎಂದು ನಾನು ಇನ್ನೂ ಹೇಳಿಕೊಳ್ಳುವುದಿಲ್ಲ ” ಎಂದು ಗುರ್ಚರಣ್ ಹೇಳಿದರು.
ಇದನ್ನೂ ಓದಿ:ಶೌಚಾಲಯದೊಳಗಿದ್ದ 4 ಅಡಿ ಉದ್ದದ ಹಾವನ್ನು ಕಂಡು ಬೆಚ್ಚಿ ಬಿದ್ದ ಮನೆ ಮಾಲೀಕ…
“ವಿರಾಟ್ ಕೊಹ್ಲಿ, ಸುನಿಲ್ ಗವಾಸ್ಕರ್ ಅಥವಾ ಸಚಿನ್ ತೆಂಡೂಲ್ಕರ್ ಅವರಂತಹ ಆಟಗಾರರನ್ನು ಮತ್ತೆ ತಯಾರಿಸಲು ಸಾಧ್ಯವಿಲ್ಲ, ಈ ಕ್ರಿಕೆಟಿಗರು ದಂತಕಥೆಗಳು ಮತ್ತು ಅವರ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಹೊಸ ಹೊಸ ಆಟಗಾರರು ಬರುತ್ತಿದ್ದಾರೆ ಆದರೆ ಅವರು ಈ ದಿಗ್ಗಜ ಆಟಗಾರರ ಜಾಗ ತುಂಬಲು ಸಾಧ್ಯವಿಲ್ಲ. ಅವರಂತಹ ಆಟಗಾರರು ಯಾವಾಗಲೂ ಶ್ರೇಷ್ಠರು ಮತ್ತು ಶ್ರೇಷ್ಠರಾಗಿ ಉಳಿಯುತ್ತಾರೆ” ಎಂದರು.