Advertisement

ಕೊಂಕಣಿ ಸಾಹಿತಿ ಸುರೇಶ ಅಮೋಣಕರ ಇನ್ನಿಲ್ಲ

09:51 AM Dec 10, 2019 | Hari Prasad |

ಗೋವಾ: ಕೊಂಕಣಿ ಸಾಹಿತಿ, ಪದ್ಮಶ್ರೀ ಡಾ| ಸುರೇಶ ಗುಂಡು ಅಮೋಣಕರ (86) ಡಿ. 8ರಂದು ಗೋವಾದ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಜೈನ ಕಥಾ ಸಂಗ್ರಹ, ಜಾತಕ ಕಥೆ, ಬೌದ್ಧ ಧಮ್ಮಪದ, ಶ್ರೀ ಭಗವಂತಾನ ಗಾಯಿಲೆ ಗೀತ, ಶ್ರೀಮದ್‌ ಭಾಗವತ, ತಮಿಳು ತಿರುವಳ್ಳುವರ ಕವಿಯ ತಿರುಕ್ಕುರಳ ಮತ್ತು ಮರಾಠಿಯಿಂದ ಜ್ಞಾನೇಶ್ವರಿ ಮತ್ತು ಭಗವದ್ಗೀತೆಗಳನ್ನು ಕೊಂಕಣಿಗೆ ಭಾಷಾಂತರಿಸಿದ್ದರು.

Advertisement

1999ರಲ್ಲಿ ಅವರ ‘ಧಮ್ಮಪದ’ ಕೊಂಕಣಿ ಭಾಷಾಂತರ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ. ಆಫ್ರಿಕಾದ ಕಿನ್ಯಾದಲ್ಲಿ ಶಿಕ್ಷಕರಾಗಿದ್ದರು. ಬಳಿಕ ಗೋವಾದಲ್ಲಿ ಪ್ರಾಧ್ಯಾಪಕರಾಗಿದ್ದರು. ವಿದ್ಯಾಕ್ಷೇತ್ರಕ್ಕೆ ಕೊಡುಗೆಗಾಗಿ 2009ರಲ್ಲಿ ಪದ್ಮಶ್ರೀ ಪದವಿ ಲಭಿಸಿತ್ತು.

ವಿಶ್ವ ಕೊಂಕಣಿ ವತಿಯಿಂದ 2015ರಲ್ಲಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಾಹಿತ್ಯ ಪ್ರಶಸ್ತಿ ನೀಡಿ ಸಮ್ಮಾನಿಸಲಾಗಿತ್ತು. 2018ರಲ್ಲಿ ಗೋವಾ ಸರಕಾರವು ಅವರನ್ನು ಗೋವಾ ಕೊಂಕಣಿ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next