ನವದೆಹೆಲಿ : ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕೇಂದ್ರ ಸರ್ಕಾರ 2021 ರ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕಾರ, ಪದ್ಮವಿಭೂಷಣ, ಪದ್ಮಶ್ರೀ ಹಾಗೂ ವಿಶೇಷ ಸಾಧನೆಗೈದ ಪೊಲೀಸ್ ಸಿಬ್ಬಂದಿಗಳಿಗೆ ವಿವಿಧ ಮೆಡಲ್ ಗಳನ್ನು ಘೋಷಿಸಲಾಗಿದೆ.
ಪದ್ಮವಿಭೂಷಣ : ಪದ್ಮ ವಿಭೂಷಣ ಪ್ರಶಸ್ತಿ ಪಟ್ಟಿಯಲ್ಲಿ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ (ಕಲೆ, ಮರಣೋತ್ತರ), ಉಡುಪಿಯ ಬಿ.ಎಂ ಹೆಗ್ಡೆ (ಔಷಧ ಕ್ಷೇತ್ರ), ಜಪಾನ್ ಪ್ರಧಾನಿ ಶಿಂಜೋ ಅಬೆ ( ಸಾರ್ವಜನಿಕ ಕ್ಷೇತ್ರ),ಮೌಲಾನಾ ವಹಿದುದ್ದೀನ್ ಖಾನ್ ( ಆಧ್ಯಾತ್ಮ ವಿಭಾಗ),ನರೀಂದರ್ ಸಿಂಗ್ ಕಪಾನಿ( ವಿಜ್ಞಾನ ಮತ್ತು ಇಂಜಿನಿಯರಿಂಗ್), ಬಿ.ಬಿ ಲಾಲ್ ( ಪುರಾತತ್ವ ಶಾಸ್ತ್ರ ವಿಭಾಗ) ಒಡಿಶಾದ ಸುದರ್ಶನ್ ಸಾಹೋ (ಕಲೆ) ಇವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ ಮಾಡಿದೆ.
ಪದ್ಮಭೂಷಣ : ಒಟ್ಟು 10 ಸಾಧಕರಿಗೆ ಪದ್ಮಭೂಷನ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದ್ದು, ಇದರಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರ ಶೇಖರ ಕಂಬಾರ, ರಾಮ್ ವಿಲಾಸ್ ಪಾಸ್ವಾನ್ ( ಮರಣೋತ್ತರ) ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್, ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್, ಗುಜರಾತ್ ಮಾಜಿ ಮುಖ್ಯಮಂತ್ರಿ ಕೆಶ್ ಪಟೇಲ್ ,ತಾರ್ ಲೋಚನ್ ಸಿಂಗ್, ನೃಪೇಂದ್ರ ಮಿಶ್ರಾ, ರಜನಿಕಾಂತ್ ದೇವಿದಾಸ್ ಶ್ರಾಫ್, ಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರಾ, ಕಲ್ಬೆ ಸಾದಿಕ್ ಮುಂತಾದವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
ಪದ್ಮಶ್ರೀ : ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ದೇಶದ 102 ಸಾಧಕರಿಗೆ ಘೋಷಣೆಯಾಗಿದ್ದು, ಇದರಲ್ಲಿ, ಕರ್ನಾಟಕ ರಾಜ್ಯದ ಮೂವರಿಗೆ ಪ್ರಶ್ತ್ತಿ ಲಭಿಸಿದೆ. ಬಿ.ಮಂಜಮ್ಮ ಜೋಗತಿ (ಕಲೆ), ಆರ್. ಲಕ್ಷ್ಮೀ ನಾರಾಯಣ ಕಶ್ಯಪ್ ( ಶಿಕ್ಷಣ) ಹಾಗೂvಕೆ,ವೈ ವೆಂಕಟೇಶ್ ( ಕ್ರೀಡೆ) ಇವರಿಗೆ ಪ್ರಶಸ್ತಿ ಘೋಷಣೆಯಾಗಿದೆ.
ಪೊಲೀಸ್ ಮೆಡಲ್ : ಈ ವಿಭಾಗದಿಂದ ಕರ್ನಾಟಕದ 19 ಮಂದಿ ಪೊಲೀಸರು ಆಯ್ಕೆಯಾಗಿದ್ದಾರೆ. ಪೊಲೀಸ್ ಮಡೆಲ್ ಫಾರ್ ಮೆರಿಟೋರಿಯಸ್ ಸರ್ವಿಸ್ ಗೆ ಕರ್ನಾಟಕದಿಂದ IGP ಡಾ.ಸುಬ್ರಮಣ್ಯೇಶ್ವರ ರಾವ್ ಅಯ್ಯಂಕಿ, ಎಸ್.ಪಿ ಬಾಬಾಸಾಬ್ ಶಿವಗೌಡ ನೆಮೆಗೌಡ್, ಡಿವೈಎಸ್ ಪಿಗಳಾದ ಬಸವಣ್ಣಪ್ಪ ರಾಮಂದ್ರ,ಅಶೋಕ ಡಿ.ಸಿ ಬಾಲಕೃಷ್ಣ, ವಾಸುದೇವ್ ವಿಕೆ, ಸೇರಿದಂತೆ ಒಟ್ಟು 19 ಮಂದಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪೊಲೀಸ್ ಮೆಡೆಲ್ ಪಡೆಯಲಿದ್ದಾರೆ.