Advertisement

ಸೋರುತಿಹುದು… ಪಡೀಲ್‌ ಅಂಡರ್‌ಪಾಸ್‌!

03:42 PM Jul 02, 2023 | Team Udayavani |

ಮಹಾನಗರ: ಮಂಗಳೂರು ಬಿ.ಸಿ.ರೋಡ್‌ ರಾಷ್ಟ್ರೀಯ ಹೆದ್ದಾರಿ 75ರ ಪಡೀಲ್‌ನಲ್ಲಿ ಕೆಲವು ವರ್ಷಗಳ ಹಿಂದೆ ನಿರ್ಮಿಸ ಲಾಗಿರುವ ರೈಲ್ವೇ ಅಂಡರ್‌ಪಾಸ್‌ ನಿರ್ವಹಣೆ ಇಲ್ಲದೆ ಈ ಬಾರಿಯ ಮಳೆಗಾಲದಲ್ಲಿ ಮೇಲ್ಭಾಗದಿಂದ ನೀರು ಸೋರುತ್ತಿದೆ.

Advertisement

ಅಂಡರ್‌ಪಾಸ್‌ ಮೇಲ್ಭಾಗದಲ್ಲಿ ಪಡೀಲ್‌ – ಸುರತ್ಕಲ್‌ ನಡುವಿನ ರೈಲು ಹಳಿಗಳು ಹಾದು ಹೋಗಿವೆ. ಬಾಕ್ಸ್‌ ಪುಶ್ಶಿಂಗ್‌ ಕಾಮಗಾರಿಯ ಮೂಲಕ ಕೆಲವು ವರ್ಷಗಳ ಹಿಂದೆ ಈ ರೈಲ್ವೇ ಕೆಳ ಸೇತುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಲೇ ನಿರ್ಮಾಣ ಮಾಡಲಾಗಿತ್ತು. ಒಂದೆರಡು ವರ್ಷದಲ್ಲಿ ಮುಗಿಯಬೇಕಿದ್ದ ಕಾಮಗಾ ರಿಗೆ ಬರೋಬ್ಬರಿ ನಾಲ್ಕು ವರ್ಷಗಳು ಬೇಕಾಯಿತು.

ನಿರ್ಮಾಣ ಕಾಮಗಾರಿ ಮುಗಿದ ಬಳಿಕ ಅಂಡರ್‌ ಪಾಸ್‌ ನಿರ್ವಹಣೆ ಆಗಿಲ್ಲ. ಪರಿಣಾಮ ಈ ಬಾರಿ ನೀರು ಸೋರುವಿಕೆ ಆರಂಭವಾಗಿದೆ.

ಒಳಭಾಗದ ಎರಡೂ ಬದಿಯ ಗೋಡೆಗಳು, ಮಧ್ಯದಲ್ಲಿ ಮೇಲ್ಭಾಗದಿಂದ ನೀರು ಕೆಳಗೆ ತೊಟ್ಟಿಕ್ಕುತ್ತಿದೆ. ನಾಲ್ಕೈದು ಕಡೆಗಳಲ್ಲಿ ನೀರು ರಸ್ತೆಗೆ ಬೀಳುತ್ತಿದೆ. ಮಳೆ ಜೋರಾಗಿದ್ದರೆ ಇದು ಜೋರಾಗಿರುತ್ತದೆ. ಕಡಿಮೆಯಾದರೆ ಮತ್ತು ಮಳೆ ನಿಂತಿದ್ದರೆ ತೀವ್ರತೆ ಕಡಿಮೆ ಇರುತ್ತದೆ.

ಇದರಿಂದಾಗಿ ದ್ವಿಚಕ್ರ ವಾಹನ ಸವಾರರ ಮೇಲೆ ನೀರಿನ ಸಿಂಚನ ಸಾಮಾನ್ಯ ಎನ್ನುವಂತಾಗಿದೆ.
ಬಾಕ್ಸ್‌ ಪುಶ್ಶಿಂಗ್‌ ಮೂಲಕ ಕಾಮಗಾರಿ ನಡೆದಿರುವುದರಿಂದ ಸುಮಾರು ಏಳೆಂಟು ಕಾಂಕ್ರೀಟ್‌ ಬಾಕ್ಸ್‌ಗಳನ್ನು ಒಂದಕ್ಕೊಂದು ಜೋಡಿಸಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ಜೋಡಣೆಯ ಭಾಗದಲ್ಲೇ ನೀರು ಬೀಳುತ್ತಿದೆ.
ನೀರು ಕೆಳಕ್ಕೆ ಸುರಿಯದಂತೆ ಎರಡು ಜೋಡಣೆಗಳ ನಡುವೆ ತಗಡಿನ ಮಾದರಿ ನಿರ್ಮಾಣವೊಂದನ್ನು ಮಾಡಿ ಅದಕ್ಕೆ ಪೈಪ್‌ ಲೈನ್‌ ಕೂಡ ಅಳವಡಿಸಲಾಗಿದೆ. ಅವನ್ನು ಮಳೆಗಾಲಕ್ಕೆ ಮೊದಲು ಗಮನಿಸಿ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ಇಲ್ಲಿ ಅದ್ಯಾವುದೂ ನಡೆದಿಲ್ಲ ಎನ್ನುತ್ತಾರೆ ಸ್ಥಳೀಯರು.

Advertisement

ರಸ್ತೆಯಲ್ಲಿ ಗುಂಡಿ ಉಂಟಾಗುವ ಸಾಧ್ಯತೆ
ನಿರಂತರವಾಗಿ ನೀರು ತೊಟ್ಟಿಕ್ಕುತ್ತಿರು ವುದರಿಂದ ರಸ್ತೆಯಲ್ಲಿ ಸಣ್ಣ ಗುಂಡಿ ಯುಂಟಾಗಿ ಬಳಿಕ ಬಸ್‌ ಲಾರಿ ಸಹಿತ ಘನ ವಾಹನಗಳ ಸಂಚಾರದಿಂದ ಅದು ದೊಡ್ಡದಾಗುವ ಸಾಧ್ಯತೆ ಇದೆ. ಇದರ ಪರಿಣಾಮವೂ ದ್ವಿಚಕ್ರ ವಾಹನ ಸವಾರರ ಮೇಲೆ ಉಂಟಾ ಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಬಣ್ಣ ಮಾಸಿದೆ, ರಾತ್ರಿ ಕತ್ತಲೆ
ಸುಮಾರು ನೂರು ಮೀಟರ್‌ ಉದ್ದ ಅಂಡರ್‌ ಪಾಸ್‌ನ ಒಳಭಾಗದಲ್ಲಿ ವಿದ್ಯುತ್‌ ದೀಪ ಇಲ್ಲ. ಇದರಿಂದಾಗಿ ರಾತ್ರಿ ವೇಳೆ ಕತ್ತಲಲ್ಲೇ ಸಾಗಬೇಕಾದ ಅನಿವಾರ್ಯವಿದೆ. ಇನ್ನೊಂದೆಡೆ ಅಂಡರ್‌ ಪಾಸ್‌ನ ಒಳ ಮತ್ತು ಹೊರ ಭಾಗಕ್ಕೆ ನಿರ್ಮಾಣ ವೇಳೆ ಕಪ್ಪು, ಬಿಳಿ ಬಣ್ಣ ಬಳಿಯಲಾಗಿತ್ತು. ಪ್ರಸ್ತುತ ಅದು ಮಾಸಿ ಹೋಗಿದೆ.

ಪರಿಶೀಲಿಸಿ ಕ್ರಮ
ಪಡೀಲ್‌ ಅಂಡರ್‌ ಪಾಸ್‌ಗೆ
ಸಂಬಂಧಿಸಿ ಈಗಾಗಲೇ ಸಭೆಗಳಲ್ಲಿ ವಿವಿಧ ವಿಷಯಗಳು ಪ್ರಸ್ತಾವವಾ ಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಅಬ್ದಲ್ಲಾ ಜಾವೇದ್‌ ಅಝಿ¾,
ಯೋಜನ ನಿರ್ದೇಶಕರು,
ಎನ್‌ಎಚ್‌ಎಐ

Advertisement

Udayavani is now on Telegram. Click here to join our channel and stay updated with the latest news.

Next