ತಿ.ನರಸೀಪುರ: ರಾಜ್ಯ ಸರ್ಕಾರದ ರಾಜಕೀಯ ಲಾಭ ಮತ್ತು ಕಾಂಗ್ರೆಸ್ ಪಕ್ಷದಿಂದ ಅಧಿಕಾರದ ಉಪಕಾರವನ್ನು ಪಡೆದು ಕೊಂಡವರು ನರಸೀಪುರ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ದುರ್ಬಲ ಗೊಳ್ಳಲು ಅಪಕಾರದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಸುನೀಲ್ ಬೋಸ್ ಹೇಳಿದರು.
ತಾಲೂಕಿನ ಬನ್ನೂರು ಪಟ್ಟಣದ ಶ್ರೀರಂಗಪಟ್ಟಣ ರಸ್ತೆಯಲ್ಲಿರುವ ಎನ್.ಆರ್. ಕಲ್ಯಾಣ ಮಂಟಪದಲ್ಲಿ ನಡೆದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರಿಂದ ಕಾಂಗ್ರೆಸ್‌ಗೆ ಸ್ಥಳಿಯ ನಾಯಕತ್ವದ ಕೊರತೆಯಿಂದಾಗಿ ಸಂಘಟನೆ ನಿಷ್ಕ್ರಿಯಗೊಳ್ಳುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದವು. ಈ ಹಿನ್ನೆಲೆಯಲ್ಲಿ ರಾಜಕೀಯ ಉಪಯೋಗ ಪಡೆದುಕೊಂಡವರೆಲ್ಲರೂ ಪಕ್ಷದ ವಿರೋಧಿ ಗಳಾಗಿ ವರ್ತಿಸುತ್ತಿರುವುದರಿಂದ ಸಂಘಟನೆಗೆ ಹಿನ್ನೆಡೆಯಾಗುತ್ತಿದೆ ಎಂಬುದನ್ನು ಒಪ್ಪಿಕೊಂಡರು.
ತಡವಾಗಿಯಾದರೂ ತಪ್ಪಿನ ಅರಿವಾಗಿದ್ದು, ಕ್ಷೇತ್ರದಲ್ಲಿ ಇನ್ಮುಂದೆ ಕಾರ್ಯ ಕರ್ತರನ್ನು ಕಡೆಗಣಿಸುವುದಿಲ್ಲ. ಎಲ್ಲರ ಅಹವಾಲುಗಳಿಗೂ ಸ್ಪಂದಿಸಿ ಪಕ್ಷವನ್ನು ಸಂಘಟನೆಗೆ ಕಾಳಜಿ ವಹಿಸುತ್ತೇನೆ. ಎಪಿಎಂಸಿ ಚುನಾವಣೆಯಲ್ಲಿ ಪಕ್ಷದ ಭದ್ರ ಕೋಟೆಯಾಗಿದ್ದ ಮೂಗೂರು ಕ್ಷೇತ್ರ ಕೈ ತಪ್ಪಿ ಹೋಗುವ ಮೂಲಕ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆ ಯಾಗಿರು ವುದು ಸಂಘಟನೆಯ ದೌರ್ಬಲ್ಯಕ್ಕೆ ಹಿಡಿದ ಕನ್ನಡಿ ಯಾಗಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಬನ್ನೂರು ಕ್ಷೇತ್ರದಲ್ಲಿ ಮಾದಿಗಹಳ್ಳಿ ಸ್ವಾಮಿ, ಯಾಚೇನಹಳ್ಳಿ ಕ್ಷೇತ್ರದಲ್ಲಿ ವೈ.ಎಚ್.ಹನುಂತೇಗೌಡ ಮತ್ತು ಸೋಮನಾಥಪುರ ಕ್ಷೇತ್ರದಲ್ಲಿ ಬಿ.ಆರ್.ರಂಗಸ್ವಾಮಿ ಗೆಲುವಿಗೆ ಕಾಳಜಿ ವಹಿಸಬೇಕೆಂದು ಸುನೀಲ್ ಬೋಸ್ ಮನವಿ ಮಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಚನ್ನಕೇಶವ ಸ್ಥಳೀಯವಾಗಿ ಕಾರ್ಯಕರ್ತರ ಕಷ್ಟಗಳಿಗೆ ಸ್ಪoದಿಸುವ ಮುಖಂಡರು ಯಾರಾದರೂ ಇದ್ದರೆ ಕೈ ಎತ್ತಬಹುದು ಎನ್ನುವ ಮೂಲಕ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಡಿ.ಪದ್ಮನಾಭ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆ.ವಜ್ರೆàಗೌಡ, ಪುರಸಭಾ ಅಧ್ಯಕ್ಷೆ ಮಂಜಳಾ ಶ್ರೀನಿವಾಸ್, ಮಾಜಿ ಅಧ್ಯಕ್ಷರಾದ ಮುನಾವರ್ ಪಾಷ, ಅಜೀಜ್ ಉಲ್ಲಾ, ತಾಪಂ ಅಧ್ಯಕ್ಷ ಸಿ. ಚಾಮೇಗೌಡ, ಸದಸ್ಯರಾದ ಆರ್.ಚಲುವ ರಾಜು, ರಾಮಲಿಂಗಯ್ಯ, ಪುರಸಭಾ ಉಪಾ ಧ್ಯಕ್ಷ ಬಿ.ಎಸ್. ರಾಮಲಿಂಗೇ ಗೌಡ, ಮಾಜಿ ಉಪಾಧ್ಯಕ್ಷ ಬಿ.ಎಸ್.ರವೀಂದ್ರ ಕುಮಾರ್, ಗ್ರಾಪಂ ಸದಸ್ಯ ಉಕ್ಕಲಗೆರೆ ಎಂ.ರಾಜು,
ಮೈಮುಲ್ ಮಾಜಿ ನಿರ್ದೇಶಕ ಕೆ.ಬಿ. ಪ್ರಭಾಕರ್, ಜಿಲ್ಲಾ ಸಹಕಾರ ಯೂನಿಯನ್ ಮಾಜಿ ಉಪಾಧ್ಯಕ್ಷ ಹನುಮನಾಳು ಸಿದ್ದೇಗೌಡ, ಹಿಂದುಳಿದ ವರ್ಗಗಳ ಕಾಂಗ್ರೆಸ್ ಅಧ್ಯಕ್ಷ ಎ.ಎನ್.ಸ್ವಾಮಿ, ಗುತ್ತಿಗೆದಾರರಾದ ಸಿದ್ದೇಗೌಡ, ಕೆ.ಎಂ. ಮಧುಕುಮಾರ್, ಜೆ. ಅನೂಪ್‌ಗೌಡ, ಮುಖಂಡರಾದ ಬಿ.ಎನ್. ಶ್ರೀಕಂಠಯ್ಯ, ಚಿನ್ನಸ್ವಾಮಿ, ಧನಂಜಯ ಕುಮಾರ್, ಜಯಶಂಕರ್ ಹಾಜರಿದ್ದರು.