Advertisement
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಬೆಳೆಯುವ ಭತ್ತಕ್ಕೆ 72 ರೂ. ಎಂಎಸ್‌ಪಿ ಹೆಚ್ಚಳ ಮಾಡಲಾಗಿದೆ. ಈ ಮೂಲಕ 2021-22ನೇ ಸಾಲಿನಲ್ಲಿ ಪ್ರತಿ ಕ್ವಿಂಟಾಲ್ ಭತ್ತದ ಬೆಲೆ 1,940 ರೂ.ಗಳಾಗಲಿವೆ. ಪ್ರಮುಖ ವಾಣಿಜ್ಯ ಬೆಳೆ ಹತ್ತಿಯ ಬೆಂಬಲ ಬೆಲೆಯನ್ನೂ ಹೆಚ್ಚಿಸಲಾಗಿದೆ. ಇದಕ್ಕೆ 211 ರೂ.ಗಳಷ್ಟು ಏರಿಕೆ ಮಾಡಲಾಗಿದ್ದು, ಈ ಮೂಲಕ ಕ್ವಿಂಟಾಲ್ ಹತ್ತಿಗೆ 5,726 ರೂ.ಗಳಾಗಿವೆ. ಹಾಗೆಯೇ ಮತ್ತೂಂದು ತಳಿಯ ಹತ್ತಿಯ ಎಂಎಸ್ ಪಿಯನ್ನೂ 200 ರೂ. ಹೆಚ್ಚಿಸಲಾಗಿದ್ದು, ಇದು ಪ್ರತಿ ಕ್ವಿಂಟಾಲ್‌ಗೆ 6,025 ರೂ.ಗಳಷ್ಟಾಗಿದೆ.
Advertisement
ಭತ್ತದ ಬೆಂಬಲ ಬೆಲೆ ಹೆಚ್ಚಳ : ಪ್ರತೀ ಕ್ವಿಂಟಾಲ್‌ಗೆ 1,940 ರೂ. ಕೇಂದ್ರ ನಿರ್ಧಾರ
02:03 AM Jun 10, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.