Advertisement
ಎಂದಿನಂತೆ ಈ ಬಾರಿಯೂ ಸರಕಾರ 2021-22ನೇಸಾಲಿಗೆ ಕನಿಷ್ಠ ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರ ತೆರೆಯಲು ಹಸಿರು ನಿಶಾನೆ ತೋರಿಸಲಾಗಿದೆ. ಸಹಜವಾಗಿಯೇ ರೈತರಲ್ಲಿ ಮತ್ತೆ ನಿರೀಕ್ಷೆ ಗರಿಗೆದರಿದೆ. ಕಳೆದ ಎರಡು ದಶಕಗಳಿಂದ ಹೋರಾಟದ ಬಳಿಕ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿತ್ತು.
Related Articles
Advertisement
ಈ ಬಾರಿ ಮತ್ತೆ ನಿರೀಕ್ಷೆ: 2021-22ನೇ ಸಾಲಿಗೆಸಂಬಂಧಿ ಸಿ ಖರೀದಿ ಕೇಂದ್ರ ತೆರೆಯಲು ಸೂಚನೆ ನೀಡಲಾಗಿದೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ಗೆ1,868 ರೂ., ಎ.ಗ್ರೇಡ್ ಭತ್ತ ಕ್ವಿಂಟಲ್‌ಗೆ 1,888ರೂ.ನಂತೆ ಖರೀದಿಸಬೇಕಿದೆ. ಕರ್ನಾಟಕ ಆಹಾರನಿಗಮದ 5 ಮಳಿಗೆಗಳು ಸೇರಿದಂತೆ ಪ್ರಾಥಮಿಕಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಒಳಗೊಂಡುಜಿಲ್ಲೆಯಲ್ಲಿ 35 ಕೇಂದ್ರಗಳನ್ನು ನೋಂದಣಿಗೆ ಗುರುತಿಸಲಾಗಿದೆ.
ಏ.1ರಿಂದಲೇ ಅನ್ವಯಿಸುವಂತೆಕೃಷಿ ಇಲಾಖೆಯ ಪೂÅಟ್ಸ್ ಐಡಿಯ ಪ್ರಕಾರಹೆಸರುಗಳನ್ನು ರೈತರು ನಮೂದಿಸಬೇಕಿದೆ. ಏ.1ರಿಂದಜೂನ್, 30, 2021ರ ತನಕ ಖರೀದಿ ನಡೆಯಲಿದೆ.ಮಾರುಕಟ್ಟೆಯಲ್ಲಿ ಆರ್‌ಎನ್‌ಆರ್ ದರ ಪ್ರತಿ ಕ್ವಿಂಟಲ್‌ಗೆ 1,650 ರೂ. ನಂತಿದ್ದರೆ, ಕಾವೇರಿ ಸೋನಾಕ್ಕೆ1,700 ರೂ. ಸಿಗುತ್ತಿದೆ.
ಬೆಂಬಲ ಬೆಲೆಗೂ ಮುಕ್ತಮಾರುಕಟ್ಟೆಯ ದರಕ್ಕೂ ವ್ಯತ್ಯಾಸ ಇರುವುದರಿಂದಖರೀದಿ ನಡೆದರೆ, ರೈತರಿಗೆ ಅನುಕೂಲವಾಗಲಿದೆ.ಕಳೆದ ಬಾರಿ ಸಮರೋಪಾದಿಯಲ್ಲಿ ಕೆಲಸಆರಂಭಿಸಿದಾಗಲೂ ವಿಫಲವಾಗಿದ್ದ ಆಡಳಿತ ವರ್ಗ,ಈ ಸಲವಾದರೂ ಭತ್ತ ಖರೀದಿಯ ಮೂಲಕರೈತರಲ್ಲಿ ನಿರೀಕ್ಷೆ ಮೂಡಿಸುವುದೇ? ಎಂಬುದನ್ನುಕಾದು ನೋಡಬೇಕಿದೆ.
ಯಮನಪ್ಪ ಪವಾರ