Advertisement
ಶನಿವಾರ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಭತ್ತ ಬೆಂಬಲ ಬೆಲೆಯಡಿ ಖರೀದಿ ಮಾಡುವುದು. ಈರುಳ್ಳಿ ಬೆಳೆಗಾರರರಿಗೆ ಬೆಂಬಲ ಬೆಲೆ ಅಥವಾ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ.
Related Articles
Advertisement
“ಜನವರಿ ಒಂದರಿಂದ ಖರೀದಿ ಆರಂಭಿಸಬೇಕೆಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಮುಂಚಿತವಾಗಿಯೇ ಆರಂಭಿಸುತ್ತಿದೆ. ಪಡಿತರ ಅಕ್ಕಿ ವಿಚಾರವಾಗಿ ಆಹಾರ ಇಲಾಖೆ ಆಧಿಕಾರಿಗಳನ್ನು ಕರೆಸಿ ಚರ್ಚೆ ನಡೆಸಲಾಗಿದೆ ಎಂದರು.
ಈರುಳ್ಳಿಗೂ ನೆರವುಈರುಳ್ಳಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದು, ಅವರ ನೆರವಿಗೆ ಬರಲು ಸರ್ಕಾರ ತೀರ್ಮಾನಿಸಿದೆ. ಪ್ರೋತ್ಸಾಹ ಧನ ನೀಡುವುದೋ ಅಥವಾ ಬೆಂಬಲ ಬೆಲೆಯಡಿ ಖರೀದಿ ಮಾಡುವುದೋ ಎಂಬುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲಾಗಿದೆ ಎಂದು ಹೇಳಿದರು. ಮಾವು ಬೆಲೆ ಕುಸಿದಾಗ ನೀಡಿದಂತೆ ಬೆಂಬಲ ನೀಡಬೇಕೋ ಅಥವಾ ಸ್ಲಾಬ್ ಮಾದರಿಯಲ್ಲಿ ಪರಿಹಾರ ಧನ ನೀಡಬೇಕೋ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು. ಮಾರುಕಟ್ಟೆಯಲ್ಲಿ ಒಳ್ಳೆಯ ಈರುಳ್ಳಿಗೆ ಬೆಲೆ ಇದೆ. ಉಳಿದಂತೆ ಕ್ವಿಂಟಾಲ್‌ಗೆ 700-800 ರೂ. ಮಾರಾಟವಾಗುತ್ತಿದೆ. ಕೆಲವೆಡೆ 300-400 ರೂ. ಮಾರಾಟವಾಗುತ್ತಿದೆ. ಸರ್ಕಾರ ಈರುಳ್ಳಿ ರೈತರ ನೆರವಿಗೆ ಬರಲಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ನಿಗದಿ ಮಾಡಿದ್ದ 28 ಸಾವಿರ ಮೆಟ್ರಿಕ್ ಟನ್ ಗೂ ಮೀರಿ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಮಾಡಲಾಗಿದೆ. ಇನ್ನೂ ರೈತರ ಬಳಿ ಹೆಸರು ಬಾಕಿ ಉಳಿದಿದ್ದು, ಹೀಗಾಗಿ ಮತ್ತಷ್ಟು ಪ್ರಮಾಣದಲ್ಲಿ ಖರೀದಿಸಲು ಅವಕಾಶ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಉದ್ದು ಮತ್ತು ಸೋಯಾ ಖರೀದಿಗೆ ಅವಕಾಶ ಇದ್ದರೂ ಹೆಚ್ಚು ನೋಂದಣಿ ಆಗಿಲ್ಲ. ಭಾನುವಾರದಿಂದ ಖರೀದಿ ಆರಂಭವಾಗುತ್ತಿದ್ದು, ನೋಂದಣಿ ಅವಕಾಶವನ್ನು ಇನ್ನೂ ಹತ್ತು ದಿನ ಮುಂದುವರಿಸಲು ತೀರ್ಮಾನಿಸಲಾಯಿತು. ತೊಗರಿ ಬೆಳೆ ಡಿಸೆಂಬರ್‌ನಲ್ಲಿ ಬರುತ್ತದೆ, 15ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, 11.34 ಲಕ್ಷ ಮೆಟ್ರಿಕ್ ಟನ್ ಇಳುವರಿ ನಿರೀಕ್ಷೆ ಇದೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 4300 ರೂ. ಇದ್ದು, ಸರ್ಕಾರ 5675 ರೂ. ಬೆಂಬಲ ಬೆಲೆ ನೀಡಿ ಖರೀದಿಸಲು ನಿರ್ಧರಿಸಲಾಗಿದೆ. ಜೋಳ ಕೆಎಂಎಫ್ ಖರೀದಿಸಲಿದೆ ಎಂದು ವಿವರಿಸಿದರು. ಸಹಕಾರ ಇಲಾಖೆಯಲ್ಲಿ ಸಾಧನೆಯಾಗಿಲ್ಲ ಎಂದು ಯಡಿಯೂರಪ್ಪ ಟೀಕೆ ಮಾಡಿದ್ದಾರೆ. ನಮ್ಮದು ಉದರಿ ಸರ್ಕಾರವಲ್ಲ, ನಗದು ಸರ್ಕಾರ. ಇಲಾಖೆ ಸಾಧನೆ ಆಗಿಲ್ಲ ಎಂದರೆ ದಾಖಲೆ ತೋರಿಸಲಿ ಚರ್ಚೆಗೆ ನಾನು ಸಿದ್ಧ. ಯಡಿಯೂರಪ್ಪ ಹಿರಿಯರು. ಆವರ ಪಕ್ಷದಿಂದ ಕಿರಿಯರನ್ನೇ ಚರ್ಚೆಗೆ ಕಳುಹಿಸಲಿ.
– ಬಂಡೆಪ್ಪ ಕಾಶೆಂಪುರ