ಯುವವಾಹಿನಿ ಮಾಣಿ ಘಟಕ ಈ ವಿನೂತನ ಚಟುವಟಿಕೆ ಹಮ್ಮಿಕೊಂಡಿತ್ತು.
Advertisement
ಕಳೆದ ವರ್ಷ ಡಿ. 23ರಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸಹಕಾರದಲ್ಲಿ ಯುವವಾಹಿನಿ ಘಟಕ ಈ ಗದ್ದೆಯಲ್ಲಿ ಕೋಟಿ-ಚೆನ್ನಯ ಕೆಸರುಗದ್ದೆ ಕ್ರೀಡಾಕೂಟ ಹಮ್ಮಿಕೊಂಡಿತ್ತು. ಘಟಕದ ಅಧ್ಯಕ್ಷ ಹರೀಶ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಇದೇ ಕಂಬಳ ಗದ್ದೆಯಲ್ಲಿ ಭತ್ತದ ಕೃಷಿ ಕೈಗೊಳ್ಳುವ ಕುರಿತು ತೀರ್ಮಾನಿಸಿದರು. ಬಾಕಿಲ ಕುಟುಂಬದ ಹಿರಿಯರ ಅನುಮತಿ ಪಡೆದು ಕಂಬಳ ಗದ್ದೆಯಲ್ಲಿ ಸುಗ್ಗಿಯ ಸಾಗುವಳಿ ಉತ್ಸಾಹದಿಂದ ನಡೆಯಿತು. ಬಿತ್ತಿದ ಭತ್ತದ ಬೀಜಗಳು ಸಸಿಗಳಾಗಿ, ಹಚ್ಚ ಹಸುರಿನಿಂದ ನಳನಳಿಸಿದವು. ಯುವವಾಹಿನಿ ಸದಸ್ಯರ ಕನಸುಗಳಂತೆ ಭತ್ತ ತೆನೆ ಕಟ್ಟಿ, ತೆನೆಗಳು ತೂಗಿ, ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡಿದವು. ಎ 28ರಂದು ಇದರ ಕೊಯ್ಲು ಸಂಭ್ರಮ ನಡೆಯಿತು.
Related Articles
ಕೊಯ್ಲಿನ ಅನಂತರ ದೊರೆತ ಭತ್ತವನ್ನು ಬಡವರಿಗೆ ದಾನ ಮಾಡಲು, ಉಳಿದ ಭತ್ತವನ್ನು ಬಾಕಿಲ ಕೋಟಿ ಚೆನ್ನಯ ಗರಡಿ, ಶ್ರೀ ಉಳ್ಳಾಲ್ತಿ ವೈದ್ಯನಾಥ ಮತ್ತು ಸ್ಥಳ ದೈವ-ದೇವರುಗಳ ಬ್ರಹ್ಮಕಲಶೋತ್ಸವದ ಅನ್ನದಾನಕ್ಕೆ ಬಳಸಿಕೊಳ್ಳುವ ನಿರ್ಧಾರವನ್ನು ಯುವವಾಹಿನಿ ಮಾಣಿ ಘಟಕ ಕೈಗೊಂಡಿದೆ.
Advertisement