Advertisement
ಮಳೆ ನೀರಿನೊಂದಿಗೆ ಕೆಲವೆಡೆ ಮರಳು ಭತ್ತದ ಗದ್ದೆಗಳಿಗೆ ಹರಿದು ಬಂದಿದ್ದರಿಂದ ಭತ್ತದ ಗದ್ದೆಗಳೆಲ್ಲ ಮಣ್ಣಿನಲ್ಲಿ ಹೂತು ಹೋಗಿದ್ದು, ಗದ್ದೆಯಲ್ಲಿರುವ ಮಣ್ಣು ಮಿಶ್ರಿತ ಮರಳು ತೆಗೆದು ಹಾಕಲು ರೈತರು ಹರಸಾಹಸ ಪಡಬೇಕಿದೆ.
Related Articles
Advertisement
ಕೊಚ್ಚಿ ಹೊದ ಕುಲ್ಡನಾಲ್ ಸೇತುವೆ:ತಾಲೂಕಿನ ರಾಷ್ಟ್ರೀಯ ಹೆದ್ದಾರಿ 150ಎ ಯಿಂದ ಸಿರಿಗೇರಿ, ಮಾರಲಮಡಿಕೆ ಅಂತರ್ ರಾಜ್ಯ ರಸ್ತೆಯಲ್ಲಿ ಬರುವ ಕರೂರು ಗ್ರಾಮದ ಹತ್ತಿರ ಇರುವ ನೆಲಮಟ್ಟದ ಕುಲ್ಡನಾಲ್‌ನಲ್ಲಿ ಮಳೆ ನೀರಿನ ಪ್ರವಾಹದಿಂದ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ವಾಹನಗಳು ಸೀಮಾಂಧ್ರಕ್ಕೆ ತೆರಳುತ್ತಿದ್ದು, ಈ ನೆಲಮಟ್ಟದ ಸೇತುವೆಯ ಒಂದು ಭಾಗವು ಸಂಪೂರ್ಣವಾಗಿ ಜಖಂಗೊಂಡಿದ್ದು, ಭಾರಿ ವಾಹನಗಳು ಸಂಚರಿಸಲು ಅನಾನುಕೂಲವಾಗಿದೆ. ಒಂದು ವೇಳೆ ಸರಕು ತುಂಬಿದ ಭಾರಿ ವಾಹನ ಈ ಸೇತುವೆ ಮೇಲೆ ಸಂಚರಿಸಿದರೆ ಸೇತುವೆಯು ಸಂಪೂರ್ಣ ಕುಸಿದು ಬೀಳುವ ಹಂತದಲ್ಲಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇತುವೆ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕುಲ್ಡನಾಲ್ ಕೆಳಮಟ್ಟದ ಸೇತುವೆ ಕುಸಿದಿದ್ದು, ಇದನ್ನು ರಿಪೇರಿ ಮಾಡಿಸಲು ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಇ ಲಾಲ್ ಸಾಬ್ ತಿಳಿಸಿದ್ದಾರೆ.