Advertisement

ಕರಾವಳಿಗೆ ಲಗ್ಗೆಯಿಟ್ಟ ಭತ್ತ ಕಟಾವು ಯಂತ್ರಗಳು

09:05 AM Oct 14, 2017 | Karthik A |

ಕಾಪು: ಮಳೆ ಅಲ್ಪ ವಿರಾಮ ನೀಡುತ್ತಿದ್ದಂತೆ ಕರಾವಳಿಯಲ್ಲಿ ಭತ್ತದ ಕೊಯ್ಲಿಗೆ ಚಾಲನೆ ದೊರಕಿದೆ. ಪ್ರತಿ ವರ್ಷದಂತೆ ಈ ಬಾರಿಯೂ ರೈತರಿಗೆ ನೆರವಾಗುವ ಉದ್ದೇಶದೊಂದಿಗೆ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶವೂ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ನೂರಾರು ಭತ್ತದ ಕಟಾವು ಯಂತ್ರಗಳು ಆಗಮಿಸಿವೆ.  ಮಾನವ ಸಂಪನ್ಮೂಲಕ್ಕಿಂತ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ರೈತರಿಗೆ ನೆರವಾಗುವ ಭತ್ತದ ಕಟಾವು ಯಂತ್ರಗಳಿಗೆ ಕರಾವಳಿಯಲ್ಲಿ ಉತ್ತಮ ಬೇಡಿಕೆ ಇರುವುದರಿಂದ ಪ್ರಥಮ ಹಂತದಲ್ಲೇ 150ಕ್ಕೂ ಅಧಿಕ ಕಟಾವು ಯಂತ್ರಗಳು ಕರಾವಳಿಯ ವಿವಿಧೆಡೆ ಬಂದಿವೆ. ಇದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. 

Advertisement

ತಮಿಳುನಾಡು, ಆಂಧ್ರಪ್ರದೇಶ ಮಾತ್ರವಲ್ಲದೆ ಕರ್ನಾಟಕದ ಸಿಂಧನೂರು, ಗಂಗಾವತಿ, ಕೊಪ್ಪಳ, ರಾಯಚೂರು, ಶಿಕಾರಿಪುರ, ಶಿವಮೊಗ್ಗ ಮೊದಲಾದ ಕಡೆಗಳಿಂದ ಭತ್ತ ಕಟಾವು ಯಂತ್ರಗಳು ಕರಾವಳಿಗೆ ಆಗಮಿಸುತ್ತಿದ್ದು, ಇಲ್ಲಿನ ರೈತಾಪಿ ವರ್ಗದ ಜನರ ಬೇಡಿಕೆಗೆ ಅನುಗುಣವಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಭತ್ತದ ಕಟಾವು ಯಂತ್ರಗಳು ಭತ್ತದ ಕಟಾವಿಗಾಗಿ ಗದ್ದೆಗಿಳಿಯುತ್ತಿವೆ. ಹಲವು ರೀತಿಯ ಕಟಾವು ಯಂತ್ರಗಳಿದ್ದರೂ ಕರಾವಳಿಯ ರೈತರು ಹೆಚ್ಚಾಗಿ ಕರ್ತರ್‌ ಗಜೇಂದ್ರ ಹಾರ್ವೆಸ್ಟರ್‌ ಮತ್ತು ಕುಗೆj ಹಾರ್ವೆಸ್ಟರ್‌ ಎಂಬ ಎರಡು ರೀತಿಯ ಕಟಾವು ಯಂತ್ರಗಳತ್ತ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ. ಕರ್ತರ್‌ ಯಂತ್ರ ಹೆಚ್ಚಿನ ಬಳಕೆಯಲ್ಲಿದೆ. 

ಒಂದೂಕಾಲು ಗಂಟೆಯಲ್ಲಿ ಎಕರೆ ಗದ್ದೆ  ಕಟಾವು: ಕುಗೆj ಹಾರ್ವೆಸ್ಟರ್‌ ಯಂತ್ರ ಒಂದು ಎಕರೆ ಗದ್ದೆಯನ್ನು ಸುಮಾರು ಒಂದೂಕಾಲು ಗಂಟೆಯಲ್ಲಿ ಕೊಯ್ಲು ಮಾಡಿ, ಭತ್ತ ಬೇರ್ಪಡಿಸುತ್ತದೆ. 20 ಆಳುಗಳು ಒಂದೆರಡು ದಿನಗಳಲ್ಲಿ ನಡೆಸುವ ಕೆಲಸವನ್ನು ಕೆಲ ಗಂಟೆಗಳಲ್ಲೇ ಮಾಡಿ ಮುಗಿಸುತ್ತದೆ. ಆಳುಗಳ ಮೂಲಕವಾದರೆ ಸುಮಾರು 15 ಸಾವಿರ ರೂ. ವೆಚ್ಚ ತಗುಲಿದರೆ, ಈ ಯಂತ್ರದ ಕೆಲಸಕ್ಕೆ 3 ಸಾವಿರ ರೂ. ಖರ್ಚು ಮಾಡಿದರೆ ಸಾಕಾಗುತ್ತದೆ. 

1800 ರೂ.ನಿಂದ 2200 ರೂ. ಬಾಡಿಗೆ : ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಕರ್ತರ್‌ ಗಜೇಂದ್ರ ಹಾರ್ವೆಸ್ಟರ್‌ ಯಂತ್ರದಲ್ಲಿ ದೇಸೀ ಎಂಜಿನ್‌ ಬಳಕೆ ಮಾಡಿದ್ದರೆ, ಕುಗೆj ಕಂಬೈಂಡ್‌ ಹಾರ್ವೆಸ್ಟರ್‌ ಯಂತ್ರವು ಜರ್ಮನ್‌ ತಂತ್ರಜ್ಞಾನದ ಎಂಜಿನ್‌ನನ್ನು ಹೊಂದಿದೆ. ಕರ್ತರ್‌ ಯಂತ್ರದ ಮೂಲಕ ಭತ್ತ ಕಟಾವು ನಡೆಸಲು ಗಂಟೆಗೆ 1,800 ರೂ.ನಿಂದ 2,200 ರೂ. ವರೆಗೆ ಬಾಡಿಗೆ ಇದೆ. ಕುಗೆj ಕಂಬೈಂಡ್‌ ಯಂತ್ರಕ್ಕೆ ಗಂಟೆಗೆ 3,000 ರೂ. ಬಾಡಿಗೆ ದರ ವಿಧಿಸಲಾಗುತ್ತದೆ.

ಕರಾವಳಿಗೆ ಮೊದಲು 
ಭತ್ತವನ್ನು ಕೊಯ್ಲು ಮಾಡಿ, ಬೈಹುಲ್ಲಿಗೆ ಹಾನಿಯಾಗದಂತೆ ಭತ್ತ ಬೇರ್ಪಡಿಸಿ, ಚೀಲಕ್ಕೂ ತುಂಬಿಸುವ ತಂತ್ರಜ್ಞಾನ ಕುಗೆj ಕಂಬೈಂಡ್‌ ಯಂತ್ರದಲ್ಲಿದೆ. ಈ ಯಂತ್ರವನ್ನು ರಾಜ್ಯ ಸಹಿತ ಕರಾವಳಿಗೆ ಮೊದಲ ಬಾರಿಗೆ ಪರಿಚಯಿಸಿವರು ಸುರೇಶ್‌ ನಾಯಕ್‌ ಮುಂಡ್ಲುಜೆ. ಕರಾವಳಿಗೆ ಹಿಂದೆಯೇ ಭತ್ತ ಕಟಾವು ಯಂತ್ರವನ್ನು ಅವರು ಪರಿಚಯಿಸಿದ್ದರು.  

Advertisement

ಲಾಭದಾಯಕ 
ಆಳುಗಳ ಮೂಲಕ ಕೃಷಿ ನಡೆಸಿದರೆ ವೆಚ್ಚ ಮೂರು ಪಟ್ಟಾಗುತ್ತದೆ. ಕೆಲವೊಮ್ಮೆ ಜನ ಸಿಗದೇ ಭತ್ತದ ಪೈರುಗಳು ಗದ್ದೆಯಲ್ಲೇ ಕೊಳೆತು ಹೋದ ಸಂದರ್ಭಗಳೂ ಇವೆ. ಕಟಾವು ಯಂತ್ರಗಳು 20 ಜನರ ಕೆಲಸವನ್ನು ಒಂದೇ ಗಂಟೆಯಲ್ಲಿ ಮಾಡಿ ಮುಗಿಸುತ್ತವೆ. ಇದರಿಂದ ಕೃಷಿ ಲಾಭದಾಯಕವಾಗಿದೆ ಎಂದು ಮಣಿಪುರ ಸಮೀಪದ ಕೆಮೂ¤ರಿನ ಅವಿಭಕ್ತ ಕುಟುಂಬದ ಕೃಷಿಕರಾದ ಜಯಶಂಕರ್‌ ಶೆಟ್ಟಿ, ರತ್ನಾಕರ ಶೆಟ್ಟಿ, ಸೀತಾರಾಮ ಶೆಟ್ಟಿ ಮತ್ತು ಸುಂದರ ಶೆಟ್ಟಿ ಹೇಳಿದ್ದಾರೆ.

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next