ಹಾಸನ: ಜಿಲ್ಲೆಯಲ್ಲಿ .20ರಿಂ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮುಂದಿನ ವರ್ಷದ ಮಾ.21 ರವರೆಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ಖರೀದಿ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂ ಣದಲ್ಲಿ ಬೆಂಬಲ ಜಿಯಲ್ಲಿ ಭತ್ತ ಖರೀದಿಗೆ ಸಂಬಂಧಿಸಿದಂತೆ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿದ ಅವರು, ಬೆಂಬಲ ಬೆಲೆ ಯೋಜನೆಯಡಿ ಉತ ¤ಮ ಗುಣಮಟ್ಟದ ತಕ್ಕೆ ಪ್ರತಿ ಕ್ವಿಂಟಲ್‌ಗೆ 1,888 ರೂ., ಕಡಿಮೆ ಗುಣಮಟ್ಟದ ಭತ್ತಕ್ಕೆ 1,868 ರೂ. ನಿಗದಿಯಾಗಿದೆ ಎಂದು ಹೇಳಿದರು.
ಬ್ಯಾಂಕ್ ಖಾತೆಗೆ ಹಣ: ಖರೀದಿ ಕೇಂದ್ರಗಳಲ್ಲಿ ಭತ್ತವನ್ನು ಮಾರಾಟ ಮಾಡುವ ರೈತರಿಗೆ ಗರಿಷ್ಠ ಮೂರು ದಿನಗಳಲ್ಲಿ ಬ್ಯಾಂಕ್ ಖಾತೆಗ ಹಣ ವರ್ಗ ವಣೆ ಆಗುವಂತೆ ಕ್ರಮ ಕೈಗೊಳ್ಳಲಾಗುವುಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ದಾಖಲಾತಿಗಳನ್ನು ಖರೀದಿಗೆ ಮುನ್ನವೇ ಸರಿಯಾಗಿ ಪರಿಶೀಲಿಸಿ ರೈತರಿಂದ ಮಾಹಿತಿ ಪಡೆಯಬೇಕು ಎಂದು ನಿರ್ದೇಶನ ನೀಡಿದರು.
6 ಖರೀದಿ ಕೇಂದ್ರ: ಜಿಲ್ಲೆಯಲಿ ಭತ್ತ ಖರೀದಿಗೆ ಒಟ್ಟು 6 ಕೇಂದ್ರ ಸ್ಥಾಪಿಸಲಾಗಿದ್ದು, ಅರಸೀಕೆರೆ ಮತ್ತು ಆಲೂರು ಹೊರತುಪಡಿಸಿ ಉಳಿದ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರಗಳಿರಲಿವೆ. ಆದರೆ, ಆಲೂರು ತಾಲೂಕಿನ ಭತ್ತವನ್ನು ಹಾಸನ ಕೇಂದ್ರದಲ್ಲಿ ಖರೀದಿಸಲು ಆದೇಶ ಬಂದಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಮುನ್ನೆಚ್ಚರಿಕೆ ವಹಿಸಿ: .30ರಿಂದ ಖರೀದಿಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಅಷ್ಟರೊಳಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳ ಬೇಕು. ಸಿಬ್ಬಂದಿಗಳ ನೇಮಕ, ಅಕ್ಕಿ ಗಿರಣಿಗಳಲ್ಲಿ ಇರುವ ಫುಲ್ಲಿಂಗ್ ಹಾಗೂ ಭತ್ತ ಸಂಗ್ರಹ ಸಾಮರ್ಥ್ಯ ವಿವರಣೆ ಗಳನ್ನು ಪಡೆದು ರೈತರಿಗೆ ಮಾಹಿತಿ ನೀಡಬೇಕು, ಡಿಸೆಂಬರ್ ತಿಂಗಳಲ್ಲಿ ಶೀತದ ವಾತಾವರಣ ಹೆಚ್ಚಾಗುವುದರಿಂದ ದಾಸ್ತಾನು ಹಾಳಾಗುವ ಸಂಭವವಿರುತ್ತದೆ. ಈ ಸಂಬಂಧ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಒಬ್ಬ ರೈತನಿಂದ 40 ಕ್ವಿಂಟಲ್ ಮಾತ್ರ ಖರೀದಿ: ಭತ್ತ ಖರೀದಿಯಲ್ಲಿ ಕೆಲವು ಷರತ್ತುಗಳಿದ್ದು, ಒಬ್ಬ ರೈತ ಗರಿಷ u 40 ಕ್ವಿಂಟಲ್ ಭತ್ತವನ್ನು ಮಾತ್ರ ಬೆಂಬಲ ಬೆಲೆ ಯೋಜನೆಯಲ್ಲಿ ನೀಡಬಹುದಾಗಿದೆ. ಜಿಲ್ಲೆಯಲ್ಲಿ ಭತ್ತದ ಜೊತೆಗೆ ರಾಗಿ, ಮೆಕ್ಕೆ ಜೋಳವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಅವುಗಳಿಗೂ ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದ ಅಧಿಕಾರಿಗಳಿಗೆ ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ವಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಪುಟ್ಟ ಸ್ವಾಮಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೇಶ್, ಎಪಿಎಂಸಿ ಕಾರ್ಯದರ್ಶಿ ಶ್ರೀಹರಿ ಸಭೆಯಲ್ಲಿ ಹಾಜರಿದ್ದರು.