Advertisement
ಜಗಜೀವನರಾಮ್ ನಗರಕ್ಕೆ ಹೊಂದಿಕೊಂಡಂತೆ ಪೊಲೀಸ್ ಠಾಣೆಯ ಸ್ವಲ್ಪ ದೂರದ ಸ್ಥಳದಿಂದ ಆರಂಭವಾಗುವ ಪಾದರಾಯನಪುರ ರೈಲ್ವೆ ಹಳಿವರೆಗೆ ಹಾಗೂ ಇನ್ನೊಂದೆಡೆ ಮೈಸೂರು ರಸ್ತೆವರೆಗೂ ವಿಸ್ತರಿಸಿದೆ. 1980ರ ದಶಕದವರೆಗೂ ಪಾದರಾಯನಪುರ ಹಳ್ಳಿ ಪ್ರದೇಶವಾಗೇ ಉಳಿದಿತ್ತು. ಸಾಕಷ್ಟು ಗೋಮಾಳ, ಹುಲ್ಲುಗಾವಲು ಇದ್ದ ಕಾರಣ ಹೈನುಗಾರಿಕೆ ಪ್ರಮುಖ ವೃತ್ತಿಯಾಗಿತ್ತು ಎಂದು ಸ್ಥಳೀಯ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಸಂಕ್ರಾಂತಿ, ರಾಮನವಮಿ, ನವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು.
Related Articles
Advertisement
ನಾಲ್ಕೈದು ದಶಕದ ಹಿಂದೆ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜತೆಗೆ ದಲಿತರು, ಇತರೆ ಸಮುದಾಯವರಿದ್ದರು ಎಂದು ಹಿರಿಯರು ಹೇಳುತ್ತಾರೆ. 1980ರ ದಶಕದಲ್ಲಿ ಚಾಮರಾಜಪೇಟೆ ಹಾಗೂ 1991ರಲ್ಲಿ ರಾಮನಗರದಲ್ಲಿ ನಡೆದ ಗಲಭೆ ಬಳಿಕ ಪಾದರಾಯನಪುರದ ಜನಸಂಖ್ಯೆಯಲ್ಲಿ ಏರುಪೇರಾಯಿತು. 1992ರ ಬಾಬರಿ ಮಸೀದಿ ಧ್ವಂಸ ಘಟನೆ, 1994ರಲ್ಲಿ ಉರ್ದು ವಾರ್ತೆ ಸಂಬಂಧ ಗಲಭೆಯಾಗಿತ್ತು. ಆನಂತರ ದೊಡ್ಡ ಪ್ರಮಾಣದಲ್ಲಿ ಗಲಭೆ ನಡೆದ ಉದಾಹರಣೆ ಇಲ್ಲ. ಈ ವರ್ಷಗಳಲ್ಲಿ ಒಂದಿಷ್ಟು ಬದಲಾವಣೆಯಾಗಿವೆ ಎಂದು ಹೇಳುತ್ತಾರೆ.
ಪಾದರಾಯನಪುರವನ್ನು ಹಿಂದೆ ಪಾದರಾಯನಗುಡ್ಡ ಎನ್ನಲಾಗುತ್ತಿತ್ತು. ಒಂದು ಕಲ್ಲಿನ ಮೇಲೆ ಆಂಜನೇಯನ ಪಾದದಗುರುತಿದೆ ಎಂಬುದು ನಂಬಿಕೆ. ಹಾಗಾಗಿ ಅರಳೀಕಟ್ಟೆಯಲ್ಲೇ ಸಣ್ಣ ಗುಡಿ ನಿರ್ಮಾಣವಾಗಿದೆ. ಹೀಗಾಗಿ ಪಾದರಾಯನ ಪುರ ಹೆಸರು ಬಂದಂತಿದೆ. ಆ ಪ್ರದೇಶದಲ್ಲಿ ಈಚಿನ ದಶಕಗಳಲ್ಲಿ ಹಿಂದುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಜನಸಂಖ್ಯೆಯ ಏರುಪೇರಿನ ಅಧ್ಯಯನಕ್ಕೆ ಪಾದರಾಯನಪುರ ಒಂದು ಮಾದರಿ. –ವಾದಿರಾಜ, ಸಾಮಾಜಿಕ ಕಾರ್ಯಕರ್ತ
ಪಾದರಾಯನಪುರದ ಇತಿಹಾಸದ ಬಗ್ಗೆ ದಾಖಲೆಗಳಿಲ್ಲ. ಪಾದರಾಯನಪುರ, ಪಂತರಪಾಳ್ಯ, ದೀವಟಿಗೆ ರಾಮನಹಳ್ಳಿ ಸೇರಿದಂತೆ ಇತರೆ ಪ್ರದೇಶಗಳನ್ನು ಹಿಂದೆ ಮರಾಠ ಭಾಷಿಗರು ಖರೀದಿಸಿದ್ದರು ಎಂದು ದಾಖಲೆಯಲ್ಲಿದೆ. ಹಾಗಾಗಿ ಪಾದರಾಯನಪುರದಲ್ಲಿ ಶ್ರೀರಾಮ, ಆಂಜನೇಯಸ್ವಾಮಿಯ ಪಾದಗಳಿದ್ದ ಬಗ್ಗೆ ಮಾಹಿತಿ ಇಲ್ಲ. – ದೇವರಕೊಂಡಾರೆಡ್ಡಿ, ಶಾಸನತಜ್ಞ
–ಎಂ. ಕೀರ್ತಿಪ್ರಸಾದ್