ರಾಮನಗರ: ಬೆಂಗಳೂರು ಪಾದರಾಯನಪುರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ 54 ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲು ಆದೇಶವಾಗಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಕಾರಾಗೃಹದಲ್ಲಿದ್ದ 177 ಮಂದಿಯನ್ನು ಬೆಂಗಳೂರು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ರವಾನಿಸುವ ಪ್ರಕ್ರಿಯೆ ಆರಂಭವಾಗಿದೆ.
10ಕ್ಕೂ ಹೆಚ್ಚು ಬಿಎಂಟಿಸಿ ಬಸ್ಸುಗಳನ್ನುಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ಎಲ್ಲಾ ಕಾರಾಗೃಹ ವಾಸಿಗಳ ರವಾನೆ ನಂತರ ಪಾದರಾಯನಪುರ ಆರೋಪಿಗಳನ್ನು ಹಂತ ಹಂತವಾಗಿ ಇಲ್ಲಿಗೆ ಕರೆತರಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಸ್ಪಿ ಅನೂಪ್ ಶೆಟ್ಟಿ ಗರಂ
ರಾಮನಗರ ಜೈಲಿನಲ್ಲಿದ್ದ ಖೈದಿಗಳನ್ನು ಹ್ಯಾಡ್ ಕಫ್ ಇಲ್ಲದೆ ಕಳುಹಿಸುತ್ತಿದ್ದದ್ದನ್ನು ಕಂಡ ಎಸ್ಪಿ ಅನೂಪ್ ಶೆಟ್ಟಿ ಜೈಲು ಅಧಿಕಾರಿಗಳ ವಿರುದ್ದ ಗರಂ ಆಗಿದ್ದರು.
ಯಾರಾದರೂ ತಪ್ಪಿಸಿಕೊಂಡರೆ ಆದರೆ ಏನು ಕಥೆ, ನೀವೆಲ್ಲ ಏನ್ ಕೆಲಸ ಮಾಡ್ತಿದ್ದೀರಾ? ಈ ಬಿಎಂಟಿಸಿ ಬಸ್ ನಲ್ಲಿ ಹತ್ತಿಸುವಾಗ, ಮುನ್ನೆಚರಿಕಾ ಕ್ರಮ ಕೈಗೊಳ್ಳಬೇಕು ಅಲ್ಲವೇ ಎಂದು ಪ್ರಶ್ನಿಸಿದರು. ನಂತರ ಎಲ್ಲ ಕಾರಾಗೃಹವಾಸಿಗಳಿಗೂ ಹ್ಯಾಂಡ್ ಕಫ್ ಹಾಕಿ ಕಳುಹಿಸಲಾಯಿತು.