Advertisement
ಪ್ರತ್ಯೇಕ ಮನೆ ಇರಲಿಪ್ಯಾಕಿಂಗ್ ಮಾಡಲು ಪ್ರತ್ಯೇಕ ಮನೆಯನ್ನು ಇದ್ದರೆ ಚೆನ್ನ. ಮುಖ್ಯವಾಗಿ ಅದು ಉತ್ಪನ್ನಗಳನ್ನು ಸಾಗಿಸಲು ಅನುಕೂಲಕರವಾಗಿರಬೇಕೇ ಹೊರತು ತೋಟದ ನಡುವಲ್ಲಿದ್ದು, ಬೇರೆ ಬೆಳೆಗಳಿಗೆ ನಷ್ಟ ಮಾಡುವಂತಿರಬಾರದು. ಉತ್ಪನ್ನಗಳನ್ನು ವಾಹನಗಳಿಗೆ ತುಂಬಿಸುವ ಸಂದರ್ಭದಲ್ಲಿ, ಕೆಲಸಗಾರರು ಓಡಾಡುವಷ್ಟು ಜಾಗವಿರಬೇಕು. ಪ್ಯಾಕಿಂಗ್ ನಡೆಯುವ ಸ್ಥಳ ಈ ರೀತಿ ಇದ್ದಾಗ ಯಾವ ಬಗೆಯ ನಷ್ಟಕ್ಕೂ ಆಸ್ಪದವಿರುವುದಿಲ್ಲ.
– ಕೊಳೆಯಲು ಬಿಡದೇ ಗ್ಲವಸು ಬಳಸಿ ಸುಣ್ಣದ ಪುಡಿ ಆಲಮ್ ದ್ರಾವಣ ಎಲೆ, ತುಂಬುಗಳನ್ನು ಕತ್ತರಿಸಿ ತೊಟ್ಟಿನ ಜಾಗಕ್ಕೆ ಸಿಂಪಡಣೆ ಮಾಡಬೇಕು.
– ಬಿಸಿ ನೀರಿನ ಉಪಚಾರ ಹಣ್ಣುಗಳಿಗೆ ಸೂಕ್ತ. ಬಿಸಿನೀರಲ್ಲಿ ಹಣ್ಣುಗಳನ್ನು ಅದ್ದಿ ತೆಗೆದರೆ, ಅಥವಾ ಸ್ವಲ್ಪ ಹೊತ್ತು ನೆನೆಸಿದರೆ ಹಣ್ಣುಗಳಲ್ಲಿ ಕಿಣ್ವಗಳ ಆಕ್ರಮಣವನ್ನು ತಡೆಬಹುದು.
– ಪ್ಯಾಕಿಂಗ್ ಸಮಯದಲ್ಲಿ ಉತ್ಪನ್ನಗಳನ್ನು ಧೂಳಿನಿಂದ ದೂರವಿಡಬೇಕು. ಬೆಳಕು ಬೀಳುವಂತೆ ನೋಡಿಕೊಳ್ಳಬೇಕು. ಪ್ಯಾಕಿಂಗ್ ಮನೆಯ ಸುತ್ತಲೂ ನೈರ್ಮಲ್ಯ ಕಾಪಾಡಬೇಕು, ಬಿಗಿಯಾಗಿ ಪ್ಯಾಕ್ ಮಾಡಿದರೆ ಸಾಗಾಣಿಕೆಗೆ ಸೂಕ್ತ. ಹೆಚ್ಚು ಭಾರ ಹೇರದಿರುವುದು, ಚೀಲಗಳ ಮಗ್ಗುಲ ಉಬ್ಬಲು ಬಿಡದಿರುವುದು.
– ಪ್ಯಾಕೆಟ್ ಒಳಗೆ ಗಾಳಿಯಾಡಲು ಬಿಡುವುದು.
Related Articles
– ಆಕರ್ಷಕವಾಗಿ ಪ್ಯಾಕಿಂಗ್ ಮಾಡುವುದರಿಂದ ಗ್ರಾಹಕರ, ಕೊಂಡುಕೊಳ್ಳುವವರ ಗಮನ ಸೆಳೆಯಬಹುದು.
– ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡಬಹುದು.
– ಸಾಗಾಟಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ.
– ಸುಲಭ ಮತ್ತು ಸರಳ ಸಾಗಣಿಕೆಗೆ ಉಪಯುಕ್ತ.
– ಸಾಗಾಟದ ಸಂದರ್ಭದಲ್ಲಿ ಆಗುವ ನಷ್ಟ ಕಡಿಮೆಯಾಗುತ್ತದೆ.
Advertisement
ಪ್ಯಾಕಿಂಗ್ ಸಾಮಗ್ರಿಫೈಬರ್ ಬೋರ್ಡ್: ಪದಾರ್ಥಗಳನ್ನು ಸುಗಮವಾಗಿ ಸಾಗಿಸಲು ಫೈಬರ್ ಬುಟ್ಟಿಗಳನ್ನು, ಮರದ ಬಾಕ್ಸ್‌ಗಳನ್ನು, ಕಾಗದವನ್ನು,ಉತ್ತಮ ಗುಣಮಟ್ಟದ ಕ್ಯಾರಿ ಬ್ಯಾಗ್‌ಗಳನ್ನು ಬಳಸಬೇಕು. ಮುಖ್ಯವಾಗಿ, ಪದಾರ್ಥಗಳಿಗೆ ಹೊಡೆತ ಬೀಳದ ಹಾಗೆ ಬುಟ್ಟಿ, ಬಾಕ್ಸ್, ಬ್ಯಾಗ್ ತುಂಬಬಾರದು. – ಶ್ರೀನಾಥ ಮರಕುಂಬಿ