ಬೆಂಗಳೂರಿನಲ್ಲಿ ರಾಜ್ಯ ಗುತ್ತಿಗೆದಾರರ ಮಹಾ ಸಮ್ಮೇಳನ ಸಂಘಟಿಸಲಾಗಿದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಚ್.ವಿ.ಚಿಕ್ಕಗೆರಿಗಿರೆಡ್ಡಿ ತಿಳಿಸಿದರು.
Advertisement
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ರೈತರು ಯಾವ ರೀತಿ ಅನ್ನದಾತರಾಗಿ ಬೆನ್ನಲುಬಾಗಿ ನಿಂತಿದ್ದಾರೆ. ಅದೇ ರೀತಿ ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗುತ್ತಿಗೆದಾರರು ಕೂಡ ದೇಶಕ್ಕೆ ಬೆನ್ನಲುಬಾಗಿದ್ದಾರೆ.ಆದರೆ, ಸರ್ಕಾರಗಳು ಅನುಸರಿಸುತ್ತಿರುವ ಕೆಲ ನೀತಿಗಳು ಗುತ್ತಿಗೆದಾರರಿಗೆ ಕಂಟಕವಾಗಿದ್ದು, ಆರ್ಥಿಕ ಸಂಕಷ್ಟದ ಸುಳಿ ಯಲ್ಲಿ ಸಿಲುಕುವಂತಾಗಿದೆ ಎಂದು ಬೇಸರ ವ್ಯಕ್ತಪಡಸಿದರು.
ಕಾಮಗಾರಿಗಳನ್ನು ಪ್ಯಾಕೇಜ್ ಟೆಂಡರ್ ಕೆರೆಯುವ ಮೂಲಕ ಗುತ್ತಿಗೆದಾರರಿಗೆ ಕೆಲಸ ಇಲ್ಲದಂತಾಗಿದೆ. ಇದರಿಂದ ಲಕ್ಷಾಂತರ ರೂ. ಬಂಡ ವಾಳ ಹಾಕಿ ಖರೀಸಿರುವ ಯಂತ್ರೋಪಕರಣ
ಗಳಿಗೆ ಕೆಲಸ ಇಲ್ಲದೇ ಬ್ಯಾಂಕಿನಲ್ಲಿ ಮಾಡಿದ ಸಾಲ ತೀರಿಸಲಾಗದೇ ಇತ್ತ ಕೂಲಿ ಕಾರ್ಮಿಕರಿಗೂ ಸಮರ್ಪಕ ಕೆಲಸ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಸಮ್ಮೇಳನಕ್ಕೆ ಸಿಎಂ ಚಾಲನೆ: ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಶೀಷ್ ಮಹಲ್‌ನಲ್ಲಿ ಸೆ.22, 23 ರಂದು ನಡೆಯಲಿರುವ 2 ದಿನಗಳ ಗುತ್ತಿಗಾರರ ಮಹಾ ಸಮ್ಮೇಳನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವ ಡಾ.
ಎಚ್.ಸಿ. ಮಹಾದೇವಪ್ಪ, ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ರಾಜ್ಯ ಸಚಿವ ಸಂಪುಟದ ಅನೇಕ ಸಚಿವರು ಭಾಗವಹಿಸಲಿದ್ದಾರೆ. ಎರಡನೇ ದಿನ ನಡೆಯುವ ಸಮ್ಮೇಳನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ. ಕೇಂದ್ರ
ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ. ಸಮ್ಮೇಳನದ ಭಾಗವಾಗಿ ಗುತ್ತಿಗೆದಾರರಿಗೆ ವಿವಿಧ ವಿಷಯಗಳ ಕುರಿತು ನುರಿತ ತಜ್ಞರಿಂದ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು ಲಕ್ಷ ಗುತ್ತಿಗೆದಾರರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
Related Articles
ಎಂಬುದು ಸೇರಿದಂತೆ ಗುತ್ತಿಗೆದಾರರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳು ವುದರ ಜತೆಗೆ ಗುತ್ತಿಗೆದಾರರ ಸಂಘಟನೆಯನ್ನು ಬಲಪಡಿಸುವ ಉದ್ದೇಶ ದಿಂದ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಎರಡು ದಿನಗಳ ಗುತ್ತಿಗೆದಾರರ ಮಹಾ ಸಮ್ಮೇಳನ
ಆಯೋಜಿಸಲಾಗಿದೆ ಎಂದು ಎಚ್.ವಿ.ಚಿಕ್ಕಗೆರಿಗಿರೆಡ್ಡಿ ತಿಳಿಸಿದರು.
Advertisement
ಸುದ್ದಿಗೋಷ್ಠಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಗುತ್ತಿಗೆದಾರರ ಸಂಘದ ಉಪ ಕಾರ್ಯದರ್ಶಿ ಕೆ.ಗೋಪಿನಾಥ್, ಖಜಾಂಚಿ ಹೆಚ್.ಮುನೇಗೌಡ, ಪದಾಧಿಕಾರಿಗಳಾದ ಜೆ.ಕೆ. ಚಂದ್ರಶೇಖರರೆಡ್ಡಿ, ಅಡ್ಡಗಲ್ ಶ್ರೀಧರ್, ಮುರಳಿಬಾಬು, ಕಾಳಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.