Advertisement

ಸೋಂಕು ನಿರ್ವಹಣೆಗೆ ಪ್ಯಾಕೇಜ್‌; ಬಿರುಸಿನ ಚರ್ಚೆಯ ಬಳಿಕ ಅಮೆರಿಕ ಸಂಸತ್‌ ಸಮ್ಮತಿ

09:22 AM Jul 22, 2020 | mahesh |

ವಾಷಿಂಗ್ಟನ್‌: ಅಮೆರಿಕದಲ್ಲಿ ಸೋಂಕಿನ ಪರಿಸ್ಥಿತಿ ನಿರ್ವಹಣೆಗಾಗಿ 3 ಟ್ರಿಲಿಯನ್‌ ಡಾಲರ್‌ಗಳ ಪ್ಯಾಕೇಜ್‌ ಅಂಗೀಕರಿಸಲಾಗಿದೆ. ಅಕ್ಟೋಬರ್‌-ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಯಲ್ಲಿ ಈ ಅಂಶ ರಿಪಬ್ಲಿಕನ್‌, ಡೆಮಾಕ್ರಾಟಿಕ್‌ ಪಕ್ಷಗಳಿಗೆ ಪ್ರಮುಖವಾಗಿದೆ. ಆದರೆ ಪ್ಯಾಕೇಜ್‌ ಅಂಗೀಕರಿಸುವ ಮೊದಲು ಅಧ್ಯಕ್ಷ ಟ್ರಂಪ್‌ ಭಾರಿ ಸವಾಲನ್ನೇ ಎದುರಿಸಬೇಕಾಯಿತು. ಸೆನೆಟ್‌ನಲ್ಲಿ ಆಡಳಿತ ಪಕ್ಷದ ನಾಯಕರಾಗಿರುವ ಮಿಶ್‌ ಮೆಕ್‌ಕಾನೆಲ್‌ ಅವರು ಕೊರೊನಾಗಾಗಿ 1 ಟ್ರಿಲಿಯನ್‌ ಡಾಲರ್‌ ಆರ್ಥಿಕ ಪ್ಯಾಕೇಜ್‌ನ್ನು ಬಿಡುಗಡೆ ಮಾಡುವ ಪ್ರಸ್ತಾವನೆ ಮಂಡಿಸಿದರು. ಆದರೆ, ಪ್ಯಾಕೇಜ್‌ ಘೋಷಣೆ ವಿಷಯದಲ್ಲಿ ಟ್ರಂಪ್‌ ಮತ್ತು ರಿಪಬ್ಲಿಕನ್‌ ಸಂಸದರ ನಡುವೆ ಒಡ ಮೂಡದ ಸಹಮತ ಹಾಗೂ ಡೆಮಾಕ್ರೆಟಿಕ್‌ ಸಂಸದರೊಂದಿಗಿನ ಭಿನ್ನಾಭಿಪ್ರಾಯ, ಪ್ಯಾಕೇಜ್‌ನ ಸುಲಭ ಅಂಗೀಕಾರಕ್ಕೆ ತೊಂದರೆ ಒಡ್ಡಿತು. ಬಿರುಸಿನ ಚರ್ಚೆಯ ಬಳಿಕ 3 ಟ್ರಿಲಿಯನ್‌ ಪ್ಯಾಕೇಜ್‌ ಅಂಗೀಕರಿಸಿರುವ ಬಗ್ಗೆ ಸ್ಪೀಕರ್‌ ನಾನ್ಸಿ ಪೆಲೊಸಿ ಘೋಷಣೆ ಮಾಡಿದರು.

Advertisement

ನಾನೇ ದೇಶಭಕ್ತ: ಮತ್ತೆ ಕೋವಿಡ್ ಬಿಕ್ಕಟ್ಟಿನ ಬಗ್ಗೆ ಪತ್ರಿಕಾಗೋಷ್ಠಿ ನಡೆಸುವ ಮಾತನ್ನಾಡಿದ್ದಾರೆ ಟ್ರಂಪ್‌. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ 100 ದಿನ ಇರುವಂತೆಯೇ ಪ್ರಚಾರ ಕಾರ್ಯ ಬಿರುಸುಗೊಂಡಿದೆ. ಇದೇ ವೇಳೆ ಮಾಸ್ಕ್ ಹಾಕಿರುವ ತಮ್ಮ ಫೋಟೋ ಟ್ವೀಟ್‌ ಮಾಡಿದ ಟ್ರಂಪ್‌ “ನಾನೇ ದೇಶಭಕ್ತ’ ಎಂದು ಹೇಳಿಕೊಂಡಿ ದ್ದಾರೆ. ಜತೆಗೆ ಎಲ್ಲೆಡೆ ಕೊರೊನಾ ಹರಡಲಿ ಎಂಬ ದುರುದ್ದೇಶದಿಂದಲೇ ಆರಂಭದಲ್ಲಿ ಚೀನ ಸೋಂಕು ಹರಡುವಿಕೆಯನ್ನು ತಡೆಯ ಲಿಲ್ಲ ಎಂದು ದೂರಿದರು.

ವಿಧೇಯಕ ಮಂಡನೆ: ಕೋವಿಡ್ ಸಂಕಷ್ಟಕ್ಕೆ ಕಾರಣವಾದ ಚೀನದ ವಿರುದ್ಧ ಫೆಡರಲ್‌ ನ್ಯಾಯಾಲ ಯಗಳಲ್ಲಿ ಮೊಕದ್ದಮೆ ಹೂಡಲು ಅಮೆರಿಕನ್ನರಿಗೆ ಅವಕಾಶ ಮಾಡಿಕೊಡುವ ವಿಧೇಯಕವೊಂದನ್ನು ಸೆನೆಟ್‌ನಲ್ಲಿ ಮಂಡಿಸಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next