Advertisement
ಜಿಲ್ಲಾಡಳಿತ, ಜಿಪಂ ಹಾಗೂ ದೇವದಾಸಿ ಪುನರ್ವಸತಿ ಯೋಜನೆ ಸಂಯುಕ್ತಾಶ್ರಯದಲ್ಲಿ ನವನಗರದ ಕಲಾಭವನದಲ್ಲಿ ಮಾಜಿ ದೇವದಾಸಿ ಮಹಿಳೆಯರಿಗೆ ಗುರುವಾರ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಇತರೆ ಇಲಾಖೆ ಕಾರ್ಯಕ್ರಮಗಳ ಮಾಹಿತಿ ಕಾರ್ಯಾಗಾರ ಹಾಗೂ ಮಾಜಿ ದೇವದಾಸಿ ಮಕ್ಕಳ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಕಂಕಣಭಾಗ್ಯ ಪಡೆದ 10 ಜನ ದೇವದಾಸಿ ಮಕ್ಕಳು : ಸಂಗೊಂದೆಪ್ಪ ಯಲ್ಲವ್ವ ಮಾದರ-ಮುದಕ್ಕವ್ವಾ ಯಲಗುರ್ದಪ್ಪಾ ಬಂಡಿವಡ್ಡರ, ಚಂದ್ರಶೇಖರ ಯಲ್ಲವ್ವ ಚಲವಾದಿ-ಶಶಿಕಲಾ ವಿಠuಲ ಚಲವಾದಿ, ರೇವಣಸಿದ್ಧ ಚಂದ್ರಾಮ ವಾಲಿಕಾರ-ಕಾವೇರಿ ಕೆಂಚವ್ವ ಹಾದಿಮನಿ, ಕಿಶೋರಕುಮಾರ ಎಸ್. ಅಮೀನ್-ಶೀಮಾರೇಣುಕಾ ಮಾದರ,ದುರಗಪ್ಪ ಭೀಮಪ್ಪ ದೊಡಮನಿ-ಹುಚ್ಚವ್ವ ಶಿವಕ್ಕ ಮಲ್ಲಪೂರ,
ರವೀಂದ್ರ ಮುತ್ತಪ್ಪ ಮಾದರ-ಚೆನ್ನಮ್ಮ ಹೆಬ್ಬಳ್ಳೆವ್ವ ಮಾದರ, ಲಕ್ಷ್ಮೀಶ ಹರಿದಾಸ ಭಟ್ -ಹೀರಾ ಶಶಿಕಲಾ ನೀಲನಾಯಕ್, ರಾಜಪ್ಪ ಸೋಮಪ್ಪ ನಡಗೇರಿ-ರೇಣುಕಾ ಮರಗವ್ವ ಕೆಳಗಡೆ, ಲಕ್ಷ್ಮಣ ಮಾದೇವ ದೊಡಮನಿ-ಸೌಮ್ಯ ರೇಖಾ ದೊಡಮನಿ, ವಿನಾಯಕ ನಡೋಣಿ-ಲಕ್ಷ್ಮೀ ಹಮ್ಮಿನವರ.
ವಿವಿಧ ಸೌಲಭ್ಯ ವಿತರಣೆ : ದೀನ್ ದಯಾಳ ಅಂತ್ಯೋದಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯದಡಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಗ್ರಾಪಂ ಮಹಿಳಾ ಒಕ್ಕೂಟಗಳಾದ ಗಲಗಲಿಯ ಭಾರತಾಂಬೆ ಸಂಜೀವನಿ ಒಕ್ಕೂಟ (ಪ್ರಥಮ, 2 ಲಕ್ಷ ಪುರಸ್ಕಾರ), ಕಟಗೇರಿಯ ಚಾಮುಂಡೇಶ್ವರಿ ಸಂಜೀವಿನಿ ಒಕ್ಕೂಟಕ್ಕೆ (ದ್ವಿತೀಯ, 1ಲಕ್ಷ ಪುರಸ್ಕಾರ), ಅಮರಾವತಿ ಅವರಜ್ಯೋತಿ ಸಂಜೀವಿನಿ ಒಕ್ಕೂಟಕ್ಕೆ (ತೃತೀಯ, 50 ಸಾವಿರ ಪುರಸ್ಕಾರ). ದೇವದಾಸಿ ಮಹಿಳೆಯರಿಗೆ ಜಿಪಂ ಎನ್.ಆರ್.ಎಲ್.ಎಮ್ ದಡಿ 5 ಜನರಿಗೆ, ಗ್ರಾಪಂ ಎಸ್‌ಸಿ-ಎಸ್ಟಿ ಅನುದಾನದಡಿಯಲ್ಲಿ 8 ಜನ ಮಾಜಿ ದೇವದಾಸಿ ಮಹಿಳೆಯರಿಗೆ ಟೇಲರಿಂಗ್ ಮಸೀನ್, ಉದ್ಯೋಗ ಖಾತ್ರಿ ಯೋಜನೆಯಡಿ ಹೆ„ನುಗಾರಿಕೆ ಸ್ವ-ಉದ್ಯೋಗ ಚಟುವಟಿಕೆ ಕೈಗೊಳ್ಳುತ್ತಿರುವ 132 ಮಾಜಿ ದೇವದಾಸಿ ಫಲಾನುಭವಿಗಳಿಗೆ ಕಾಮಗಾರಿ ಮಂಜೂರಾತಿ ಆದೇಶ ಪ್ರಮಾಣ ಪತ್ರ ವಿತರಣೆ, ಜಿಲ್ಲಾ ವಿಶೇಷ ಚೇತನರ ಇಲಾಖೆ ಅಡಿಯಲ್ಲಿ 10 ಜನ ವಿಶೇಷ ಚೇತನ ಮಾಜಿ ದೇವದಾಸಿ ಮಹಿಳೆಯರಿಗೆ ಸ್ವ-ಉದ್ಯೋಗ ಚಟುವಟಿಕೆ ಅಡಿಯಲ್ಲಿ ಸಾಲ ಮತ್ತು ಸಹಾಯಧನ ಪ್ರಮಾಣ ಪತ್ರ ವಿತರಿಸಲಾಯಿತು. ವಸತಿ ಯೋಜನೆಯಡಿ 80 ಜನ ಮಾಜಿ ದೇವದಾಸಿ ಮಹಿಳೆಯರಿಗೆ ಮನೆ ಮಂಜೂರಾತಿ ಪ್ರಮಾಣ ಪತ್ರ, ದೇವದಾಸಿ ಪುನರ್ವಸತಿ ಯೋಜನೆ ಇಲಾಖೆಯಡಿ ಆದಾಯ ಉತ್ಪನ್ನಕರ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಪ್ರಮಾಣ ಪತ್ರ ವಿತರಿಸಲಾಯಿತು.