Advertisement
ಮಹಾನಗರ ಪಾಲಿಕೆಯು ಕರ್ನಾಟಕ ಗೃಹ ಮಂಡಳಿಯ ವಸತಿ ಸಮುಚ್ಚಯಕ್ಕೆ ಸುಮಾರು 1.70 ಕೋಟಿ ರೂ. ಬಾಡಿಗೆ ಪಾವತಿಸಬೇಕಾಗಿದ್ದು, ಹಣ ಪಾವತಿ ಮಾಡದಿದ್ದರೆ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಗೃಹ ಮಂಡಳಿಯು ಮಂಗಳೂರು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದೆ.
Related Articles
ತೆರವುಗೊಳಿಸಲು ಸೂಚನೆ
ಪಾಲಿಕೆಯು ಬಾಕಿ ಮೊತ್ತವನ್ನು ಪಾವತಿ ಮಾಡಬೇಕು. ಅಲ್ಲದೆ, ಫ್ಲ್ಯಾಟ್ ಗಳಲ್ಲಿ ವಾಸಿಸುತ್ತಿರುವ ನಿರಾಶ್ರಿತರನ್ನು ತೆರವುಗೊಳಿಸಿ ಫ್ಲಾ éಟ್‌ಗಳನ್ನು ಸುಸ್ಥಿತಿಯಲ್ಲಿ ಮಂಡಳಿಗೆ ಮರು ಹಸ್ತಾಂತರಿಸಲು ಈಗಾಗಲೇ ಸೂಚನೆಯನ್ನು ನೀಡಲಾಗಿದೆ. ಇದೇ ಕಾರಣಕ್ಕೆ ಪಚ್ಚನಾಡಿ ದುರಂತದಿಂದ ಸೂರು ಕಳೆದುಕೊಂಡವರು ಮುಂದೇನು? ಎಂಬ ಚಿಂತೆಯಲ್ಲಿದ್ದಾರೆ.
Advertisement
ಪಾಲಿಕೆ ಗಮನಕ್ಕೆ ತರಲಾಗಿತ್ತು“ಮಹಾನಗರ ಪಾಲಿಕೆ ಬಾಡಿಗೆ ಹಣ ಪಾವತಿ ಮಾಡಲಿಲ್ಲ. ಕೂಡಲೇ ಹಣ ಪಾವತಿ ಮಾಡುವಂತೆ ಏಳು ತಿಂಗಳುಗ ಳ ಹಿಂದೆ ನಮಗೆ ಗೃಹ ಮಂಡಳಿ ಸೂಚನೆ ನೀಡಿತ್ತು. ಆ ವೇಳೆ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದೆವು. ಈ ಕುರಿತು ಗಮನಹರಿಸುವ ಭರವಸೆ ನೀಡಿದ್ದರು. ಕೆಲವು ವಾರದ ಹಿಂದೆ ಗೃಹ ಮಂಡಳಿ ಅಧಿಕಾರಿಗಳು ನಮ್ಮ ವಸತಿ ಸಮುಚ್ಚಯದ ಎಲ್ಲ ಪ್ಲೋರ್‌ಗಳಿಗೆ, ಮುಖ್ಯದ್ವಾರಕ್ಕೆ ನೋಟಿಸ್ ಹಚ್ಚಿದ್ದಾರೆ.ಸಂತ್ರಸ್ತರಲ್ಲಿ ನಾವು ಬಹುತೇಕರು ಕೃಷಿಕರೇ ಇರುವುದು. ಕೆಲವು ವರ್ಷಗಳ ಹಿಂದೆ ನಮಗೆ ಮಧ್ಯಂತರ ಪರಿಹಾರ ಸಿಕ್ಕಿತ್ತು. ಬಳಿಕ ಪರಿಹಾರ ಮರೀಚಿಕೆಯಾಗಿದೆ’ ಎನ್ನುತ್ತಾರೆ ಪಚ್ಚನಾಡಿ ತ್ಯಾಜ್ಯ ದುರಂತ ಸಂತ್ರಸ್ತ ಶ್ರೀರಾಮ ಭಟ್. ಸೂಕ್ತ ಕ್ರಮ
ಪಚ್ಚನಾಡಿ ತ್ಯಾಜ್ಯ ದುರಂತದಿಂದ ಮನೆಕಳೆದುಕೊಂಡವರಿಗೆ ಕಲ್ಪಿಸಿದ ವಸತಿ ಸಮುಚ್ಚಯಕ್ಕೆ ಬಾಡಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ಗೃಹ ಮಂಡಳಿಯಿಂದ ನೋಟಿಸ್ ಬಂದಿದೆ. ಈ ವಿಚಾರದ ಕುರಿತಂತೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ಚನ್ನಬಸಪ್ಪ, ಪಾಲಿಕೆ ಆಯುಕ್ತರು ಸದ್ಯ ದಲ್ಲೇ ಮುಂದಿನ ಕ್ರಮ
ಕರ್ನಾಟಕ ಗೃಹ ಮಂಡಳಿಯ ವಸತಿ ಸಮುಚ್ಚಯಕ್ಕೆ ಮಹಾನಗರ ಪಾಲಿಕೆಯು ಸುಮಾರು 1.70 ಕೋಟಿ ರೂ. ಬಾಡಿಗೆ ಪಾವತಿಸಬೇಕಾಗಿದೆ. ಈ ಕುರಿತು ಪಾಲಿಕೆಗೆಈಗಾಗಲೇ ಮನವರಿಕೆ ಮಾಡಲಾಗಿದೆ. ಮನಪಾ ಆಯುಕ್ತರ ಬಳಿಯೂ ಚರ್ಚಿಸಲಾಗಿದೆ. ಸದ್ಯದಲ್ಲೇ ಮುಖ್ಯ ಕಚೇರಿಗೆ ಪತ್ರ ಬರೆದು ಅಲ್ಲಿನ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
– ವಿಜಯ ಕುಮಾರ್ ಭಂಡಾರಿ, ಕರ್ನಾಟಕ ಗೃಹ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನವೀನ್ ಭಟ್ ಇಳಂತಿಲ