Advertisement
“ಬೊಂಬೆಗಳ ಲವ್’ ಚಿತ್ರದ ನಂತರ, “ಮೈಸೂರು ಡೈರೀಸ್’, “ರುದ್ರಿ’, “ಪ್ರಭುತ್ವ’ ಹೀಗೆ ಕೆಲವು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಪಾವನಾ, ಸದ್ಯ ರೋಜರ್ ನಾರಾಯಣ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಕಾರ್ಕಿ’ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
Related Articles
Advertisement
“ಕಾರ್ಕಿ’ ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಮೂವರ ಪಾತ್ರಗಳಿಗೂ ಅದರದ್ದೇಯಾದ ಪ್ರಾಮುಖ್ಯತೆ ಇದೆ. ಹಾಗಾಗಿ ಈ ಪಾತ್ರವನ್ನು ಒಪ್ಪಿಕೊಂಡೆ. ಬೋಲ್ಡ್ ಗರ್ಲ್ ಅಂದ ಕೂಡಲೇ ನಾನು ತೊಡುವ ಬಟ್ಟೆಯಲ್ಲಿ ಅಂತಲ್ಲ.
ಸ್ವಭಾವದಲ್ಲಿ ಬೋಲ್ಡ್ ಎನ್ನಬಹುದು. ತುಂಬಾ ಪ್ರಾಕ್ಟಿಕಲ್ ಆಗಿ ಯೋಚಿಸುವ ಹುಡುಗಿ ಏನೇನು ಮಾಡುತ್ತಾಳೆ ಅನ್ನೋದು ನನ್ನ ಪಾತ್ರ’ ಎಂದು ಪಾತ್ರದ ಬಗ್ಗೆ ವಿವರಣೆ ಕೊಡುತ್ತಾರೆ.
ಸದ್ಯ ಕನ್ನಡದ ಭರವಸೆಯ ನಾಯಕ ನಟಿಯರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿರುವ ಪಾವನಾಗೆ “ಕಾರ್ಕಿ’ ಚಿತ್ರದ, ಹೊಸ ಪಾತ್ರ ಸಿನಿಕೆರಿಯರ್ನಲ್ಲಿ ಎಷ್ಟರ ಮಟ್ಟಿಗೆ ಮೈಲೇಜ್ ತಂದುಕೊಡುತ್ತದೆ ಎಂಬುದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.