ಟೋಕಿಯೊ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಟೋಕಿಯೊ ಒಲಿಂಪಿಕ್ಸ್ ನ ಮೊದಲ ಪಂದ್ಯದಲ್ಲಿ ಗೆದ್ದು ಕೂಟದಲ್ಲಿ ಶುಭಾರಂಭ ಮಾಡಿದ್ದಾರೆ.
ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ‘ಜೆ’ ಗುಂಪಿನ ಮೊದಲ ಹಣಾಹಣಿಯಲ್ಲಿ ಆರನೇ ಶ್ರೇಯಾಂಕಿತೆ ಸಿಂಧು ಅವರು ಇಸ್ರೇಲ್‌ನ ಸೆನಿಯಾ ಪೊಲಿಕರ್ಪೂವಾ ವಿರುದ್ಧ 21-7 21-10ರ ಅಂತರದಲ್ಲಿ ಗೆಲುವು ದಾಖಲಿಸಿದರು.
ಪಿ.ವಿ.ಸಿಂಧು ಅವರು ಮುಂದಿನ ಸುತ್ತಿನಲ್ಲಿ ಹಾಂಕಾಂಗ್‌ನ 34ನೇ ರ‍್ಯಾಂಕ್ ಆಟಗಾರ್ತಿ ಚೆಯುಂಗ್ ಗಾನ್ ಯಿ ಸವಾಲನ್ನು ಎದುರಿಸಲಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು.
ಇದನ್ನೂ ಓದಿ:ದಿ ಹಂಡ್ರೆಡ್ ನಲ್ಲಿ ಜೆಮಿಮಾ ಮಿಂಚು: 43 ಎಸೆತಗಳಲ್ಲಿ 92 ರನ್ ಸಿಡಿಸಿದ ರೋಡ್ರಿಗಸ್
ಶನಿವಾರ ಭಾರತದ ಸಾತ್ವಿಕ್ ಸಾಯ್ ರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಅಮೋಘ ಆರಂಭ ಪಡೆದಿದ್ದರು. ಮೊದಲ ಸುತ್ತಿನ ಹಣಾಹಣಿಯಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ಚೈನೀಸ್ ತೈಪೆಯ ಲೀ ಯಾಂಗ್ – ವಾಂಗ್ ಚಿ ಲಿನ್ ಜೋಡಿಯನ್ನು ಸೋಲಿದ್ದರು.