ಸಿಂದಗಿ: ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಂಡಿತ. ಅತ್ಯಂತ ಬಹುಮತದಿಂದ ಚುನಾಯಿತರಾಗುತ್ತಾರೆ ಎಂದು ಕುಡಚಿ ಶಾಸಕ, ಬಂಜಾರಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿನ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದಿಂದ ದೇಶದ ಗಡಿ ಭಾಗ ಸುರಕ್ಷಿತವಾಗಿವೆ. ಯಾವುದೇ ಒಂದು ಭಯೋತ್ಪಾದಕ ಚಟುವಟಿಕೆಗಳು ನಡೆದಿಲ್ಲ. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ, ಅವರು ಅಧಿ ಕಾರ ವಹಿಸಿಕೊಂಡ ನಂತರ ಮೊದಲಿಗೆ ಕೇಂದ್ರ ಸರಕಾರದ ಕಿಸಾನ್ ಸಮ್ಮಾನ ಯೋಜನೆಗೆ 4 ಸಾವಿರ ರೂ. ನೀಡುವ ಮೂಲಕ ರೈತರ ಹಿತ ಕಾಪಾಡಿದ್ದಾರೆ. ಹೀಗೆ ಬಿಜೆಪಿ ಪಕ್ಷದ ಸರಕಾರಗಳ ಕಾರ್ಯಗಳಿಗೆ ಜನ ಮನ ಸೋತು ಎಲ್ಲರೂ ಬಿಜೆಪಿಯತ್ತ ವಾಲುತ್ತಿದ್ದಾರೆ. ಆದ್ದರಿಂದ ಈ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಹೇಳಿದರು.
ರಾಜ್ಯ ಸೇರಿದಂತೆ ದೇಶದೆಲ್ಲೆಡೆಯಲ್ಲಿ ಕಾಂಗ್ರೆಸ್ ಪಕ್ಷ ಮುಳುಗುವ ಹಡಗಾಗಿದೆ. ರಾಜ್ಯ ಸೇರಿದಂತೆ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಆಳ್ವಿಕೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಕೇವಲ ಕಪ್ಪು ಹಣ ಮಾಡುವಲ್ಲಿ ತಲ್ಲೀನರಾಗಿದ್ದರು. ಅಧಿ ಕಾರವಿಲ್ಲದ ಸಂದರ್ಭದಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯ ಮಾಡುವ ಮೂಲಕ ನೈತಿಕವಾಗಿ ಕೆಳಗಿಳಿದಿದ್ದಾರೆ. ಹೀಗಾಗಿ ಜನತೆ ಕಾಂಗ್ರೆಸ್ ಪಕ್ಷ ನಂಬುತ್ತಿಲ್ಲ. ಸಿಂದಗಿ ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ತಿರಸ್ಕರಿಸುತ್ತಾರೆ ಎಂದು ಹೇಳಿದರು. ಸಿಂದಗಿ ಮತಕ್ಷೇತ್ರದಲ್ಲಿ ರಮೇಶ ಭೂಸನೂರ ಅವರು ತಮ್ಮ ಅ ಧಿಕಾರದ ಅವ ಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪಕ್ಷದ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸಂಘಟನೆ ಮಾಡಿದ್ದಾರೆ. ಕ್ಷೇ
ತ್ರದಲ್ಲಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಪ್ರತಿ ತಾಂಡಾಗಳಲ್ಲಿ ಮತ್ತು ಹಳ್ಳಿಗಳಲ್ಲಿ ಕಾಣುತ್ತೇವೆ. ತಾಲೂಕಿನ ರಾಂಪೂರ, ಬೆನಕೊಟಗಿ, ಗಣಿಹಾರ ಗ್ರಾಮಗಳ ತಾಂಡಾಗಳಲ್ಲಿ ಅವರು ಚಾಲನೆ ನೀಡಿದ ಕಾಮಗಾರಿಗಳನ್ನು ಮುಂದೆ ಬಂದ ಶಾಸಕರು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅರ್ಧಕ್ಕಷ್ಟೇ ನಿಂತ ಕಾಮಗಾರಿಗಳನ್ನು ಬಂಜಾರಾ ಅಭಿವೃದ್ಧಿ ನಿಗಮದಿಂದ ಪೂರ್ಣಗೊಳಿಸಲು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. ಬಿಜೆಪಿ ಶಿಸ್ತಿನ ಪಕ್ಷ, ಒಬ್ಬರ ಹತೋಟಿಯಲ್ಲಿ ಇರಲಾರದ ಪಕ್ಷ, ಕಾರ್ಯಕರ್ತರಿಂದ ಬೆಳೆದ ಪಕ್ಷವಾಗಿದ್ದು, ತತ್ವ ಸಿದ್ಧಾಂತದ ತಳಹದಿಯ ಮೇಲೆ ನಿಂತಿದೆ. ಕೊರೊನಾ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿಯೂ ಕೂಡಾ ಪ್ರವಾಹ, ಕೊವಿಡ್‌ನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದೆ ಎಂದು ಹೇಳಿದರು.
ಕಂದಾಯ ಗ್ರಾಮದಿಂದ ವಂಚಿತವಾದ ತಾಂಡಾಗಳಿಗೆ ಮೂಲ ಸೌಕರ್ಯಗಳ ಒದಗಿಸಿಕೊಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಲಾಗುವುದು. ರಾಂಪುರ ತಾಂಡಾಕ್ಕೆ ಸಂಪರ್ಕಿಸುವ ರಸ್ತೆ ಸುಧಾರೀಕರಣ, ಬೆನಕೊಟಗಿಯಲ್ಲಿ ಹನುಮಾನ ದೇವಸ್ಥಾನ ಜೀರ್ಣೋದ್ಧಾರ ಸೇರಿದಂತೆ ತಾಂಡಾಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ನಿಗಮ ಸನ್ನದ್ಧವಾಗಿದೆ. ಅವರು ವಲಸೆ ಹೋಗುತ್ತಿರುವುದನ್ನು ತಡೆಗಟ್ಟಲು ಕಸೂತಿ ಅಭಿವೃದ್ಧಿ ಕೇಂದ್ರಗಳನ್ನು ಪ್ರಾರಂಭಿಸಿ ಉಧ್ದೋಗ ಸೃಷ್ಟಿಸುವುದು ಅಲ್ಲದೆ ಬಂಜಾರಾ ರೈತರಿಗಾಗಿ ಮೂಲಭೂತ ಪರಿಕರಗಳ ವಿತರಣೆ, ಜಮೀನುಗಳಿಗೆ ನೀರಾವರಿ ಸೌಲಭ್ಯ, ಬೀಜಗೊಬ್ಬರ ವಿತರಣೆ ಮಾಡುವುದರಿಂದ ಉದ್ಯೋಗಗಳನ್ನು ಹುಡುಕುತ್ತ ವಲಸೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಯಡಿಯೂರಪ್ಪನವರ ಸರಕಾರ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅದಕ್ಕಾಗಿ ಬಿಜೆಪಿ ನುಡಿದಂತೆ ನಡೆಯುತ್ತಿರುವ ಪಕ್ಷವಾಗಿ ಹೊರಹೊಮ್ಮಿದೆ ಎಂದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಸಿಂದಗಿ ಉಪ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು. ಮಂಡಲ ಅಧ್ಯಕ್ಷ ಈರಣ್ಣಾ ಬಿ.ಎಚ್.ಬಿರಾದಾರ, ಬಿ.ಆರ್.ಯಂಟಮಾನ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಪುಂಡಲೀಕ ರಾಠೊಡ, ಸುದರ್ಶನ ಜಿಂಗಾಣಿ, ಶಿವು ಬಿರಾದಾರ, ಶೈಲಜಾ ಸ್ಥಾವರಮಠ, ಸುನಂದಾ ಯಂಪೂರೆ, ಅನಸೂಬಾಯಿ ಪರಗೊಂಡ, ಜ್ಯೋತಿ ಗುಡಿಮನಿ ಇದ್ದರು.