ನವದೆಹಲಿ: ದೇಶದ್ರೋಹದ ಕಾಯ್ದೆ ರದ್ದು ಮಾಡುವುದಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಶುಕ್ರವಾರ ಹೇಳಿದ್ದ ಅಂಶ ಈಗ ಟ್ವೀಟ್ ಸಮರಕ್ಕೆ ಕಾರಣವಾಗಿದೆ.
ಈ ಬಗ್ಗೆ ಶನಿವಾರ ಟ್ವೀಟ್ ಮಾಡಿದ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, “ಕೇಂದ್ರ ಕಾನೂನು ಸಚಿವರು ಇನ್ನೆಷ್ಟು ಮಂದಿ ಮುಗ್ಧರ ವಿರುದ್ಧ ದೇಶದ್ರೋಹ ಕಾಯ್ದೆಯ ಅನ್ವಯ ಕೇಸು ದಾಖಲಿಸಬೇಕು ಎಂಬ ಬಗ್ಗೆ ಲೋಕಸಭೆ ಮಾಹಿತಿ ನೀಡಿರಲಿಲ್ಲ. ಇದರ ಜತೆಗೆ ಕಾಯ್ದೆ ಬಗ್ಗೆ ಸುಪ್ರೀಂಕೋರ್ಟ್ ಹಿಂದಿನ ಸಂದರ್ಭಗಳಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ’ ಎಂದು ಲೇವಡಿ ಮಾಡಿದ್ದಾರೆ.
ಅದಕ್ಕೆ ತಿರುಗೇಟು ನೀಡಿರುವ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು “ಕೇಂದ್ರ ಕಾನೂನು ಸಚಿವರು ಪತ್ರಿಕೆಗಳನ್ನು ಓದದೇ ಇರಬಹುದು. ಆದರೆ ಮಾಧ್ಯಮಗಳಲ್ಲಿನ ವರದಿಗಳು ಕಾನೂನು ಸಚಿವರಿಗೆ ಅಧಿಕೃತ ದಾಖಲೆಗಳಾಗಬೇಕಾಗಿಲ್ಲ.
ಇದನ್ನೂ ಓದಿ:ಬಾಲಿವುಡ್ ನಟ ವಿಕ್ಕಿ-ಕ್ಯಾಟ್ ಹಳದಿ ಶಾಸ್ತ್ರದ ಫೋಟೋ ವೈರಲ್
ಸುಪ್ರೀಂಕೋರ್ಟ್‌ಗೆ ಯಾವ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಬೇಕು ಮತ್ತು ಆದೇಶ ನೀಡಬೇಕು ಎಂಬ ಬಗ್ಗೆ ಅರಿವು ಇದೆ’ ಎಂದು ತಿರುಗೇಟು ನೀಡಿದ್ದಾರೆ. ಜತೆಗೆ ಕಾಂಗ್ರೆಸ್ ಅವಧಿಯಲ್ಲಿ ಎಷ್ಟು ದುರುಪಯೋಗವಾಗಿದೆ ಎಂಬುದರ ಬಗ್ಗೆ ಟ್ವಿಟರ್‌ನಲ್ಲಿ ರಿಜಿಜು ಪ್ರಶ್ನಿಸಿದ್ದಾರೆ.