Advertisement
ʼಓಯೋʼ ತನ್ನ ಪಾಲುದಾರ ಹೋಟೆಲ್‌ಗಳಿಗಾಗಿ ಹೊಸ ಚೆಕ್-ಇನ್ ನೀತಿಯನ್ನು ʼಓಯೋʼ ಮಾಡಿರುವುದು ವರದಿಯಾಗಿದೆ.
Related Articles
Advertisement
ಪರಿಷ್ಕೃತ ನೀತಿಯ ಅಡಿಯಲ್ಲಿ, ಆನ್‌ಲೈನ್‌ನಲ್ಲಿ ಮಾಡಿದ ಬುಕಿಂಗ್‌ಗಳು ಸೇರಿದಂತೆ ಚೆಕ್-ಇನ್ ಸಮಯದಲ್ಲಿ ಸಂಬಂಧದ ಮಾನ್ಯ ಪುರಾವೆಗಳನ್ನು ಪ್ರಸ್ತುತಪಡಿಸಲು ಎಲ್ಲಾ ದಂಪತಿಗಳನ್ನು ಕೇಳಲಾಗುತ್ತದೆ ಎಂದು ವರದಿ ತಿಳಿಸಿದೆ.
ಈ ಹಿಂದೆ ʼಓಯೋʼಗೆ ಕೆಲ ಸಂಸ್ಥೆಗಳು ಹೊಟೇಲ್ ರೂಮ್‌ಗಳಲ್ಲಿ ಮದುವೆಯಾಗದ ಜೋಡಿಗಳನ್ನು ಚೆಕ್ ಇನ್ ಮಾಡಲು ಅವಕಾಶ ನೀಡಬಾರದೆನ್ನುವ ಅರ್ಜಿಗಳು ಬಂದಿದ್ದವು. ಮೀರತ್‌ನಲ್ಲಿ ಮದುವೆಯಾಗದ ಕೆಲ ಜೋಡಿಗಳು ಹೊಟೇಲ್ ರೂಮ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ʼಓಯೋʼ ಚೆಕ್ ಇನ್ ಮಾಡಲು ಹೊಟೇಲ್‌ನಲ್ಲಿ ನೀಡಬಾರದೆಂದು ಕೆಲ ನಾಗರಿಕ ಸಮಾಜದ ಗುಂಪುಗಳು ಕಂಪೆನಿಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ಬಂದ ಬಳಿಕ ಎಚ್ಚೆತ್ತುಕೊಂಡ ʼಓಯೋʼ ತನ್ನ ನೀತಿಯಲ್ಲಿ ಪರಿಷ್ಕರಣೆ ಮಾಡಲು ಮುಂದಾಗಿದೆ.
ಈ ನಿಯಮಗಳು ಆರಂಭಿಕವಾಗಿ ಮೀರತ್‌ನಲ್ಲಿ ಜಾರಿಯಾಗಲಿದೆ ಎಂದು ಮೀರತ್‌ನಲ್ಲಿರುವ ತನ್ನ ಪಾಲುದಾರ ಹೋಟೆಲ್‌ಗಳಿಗೆ ನಿರ್ದೇಶನವನ್ನು ನೀಡಿದೆ. ಮುಂದಿನ ದಿನಗಳಲ್ಲಿ ಕಂಪನಿಯು ಇದನ್ನು ಹೆಚ್ಚಿನ ನಗರಗಳಿಗೆ ವಿಸ್ತರಿಸಬಹುದು ಎಂದು ವರದಿ ತಿಳಿಸಿದೆ.
“ಓಯೋ ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಪದ್ಧತಿಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ. ನಾವು ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ನಾವು ಕಾರ್ಯನಿರ್ವಹಿಸುವ ಮೈಕ್ರೋ ಮಾರುಕಟ್ಟೆಗಳಲ್ಲಿ ಕಾನೂನು ಜಾರಿ ಮಾಡುವುದರ ಜತೆ ನಾಗರಿಕ ಸಮಾಜದ ಗುಂಪುಗಳನ್ನು ಆಲಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ನಾವು ಈ ನೀತಿ ಮತ್ತು ಅದರ ಪರಿಣಾಮವನ್ನು ನಿಯತಕಾಲಿಕವಾಗಿ ಪರಿಶೀಲಿಸುವುದನ್ನು ಮುಂದುವರಿಸುತ್ತೇವೆ.” ಎಂದು ಓಯೋ ಉತ್ತರ ಭಾರತದ ಪ್ರಾದೇಶಿಕ ಮುಖ್ಯಸ್ಥ ಪವಾಸ್ ಶರ್ಮಾ ಹೇಳಿದ್ದಾರೆ.
ಕಂಪನಿಯು ದೀರ್ಘಾವಧಿಯ ವಾಸ್ತವ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ನೀತಿ ಪರಿಷ್ಕರಣೆಯಲ್ಲಿ ʼಓಯೋʼ ಹೇಳಿದೆ.