Advertisement
ಮುಂಬರುವ ದಿನದಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಆಕ್ಸಿಜನ್ ಕೊರತೆ ಆಗಬಾರದು ಎಂಬ ನಿಟ್ಟಿನಲ್ಲಿ ಮಂಗಳೂರಿನ ವೆನ್ಲಾಕ್, ಲೇಡಿಗೋಶನ್ ಸಹಿತ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರದಲ್ಲಿ ಆಮ್ಲಜನಕ ಉತ್ಪಾದನ ಘಟಕಗಳನ್ನು ವಿವಿಧ ಕಂಪೆನಿಗಳ ಪ್ರಾಯೋಜಕತ್ವದೊಂದಿಗೆ ತೆರೆಯಲು ನಿರ್ಧರಿಸಲಾಗಿತ್ತು.
Related Articles
Advertisement
ಕಡಬ ಸಮುದಾಯ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆ, ವಿಟ್ಲ ಸಮುದಾಯ ಆಸ್ಪತ್ರೆ, ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗಳಲ್ಲಿ ತಲಾ 81 ಎಲ್‌ಪಿಎಂ ಸಾಮರ್ಥ್ಯದ ಘಟಕಗಳನ್ನು ಎಸ್‌ಬಿಐ, ಎಂಸಿಎಫ್, ಕೆನರಾ ಬ್ಯಾಂಕ್ ನಿರ್ಮಿಸಿಕೊಟ್ಟಿವೆ. ಮೂಲ್ಕಿ ಸಮುದಾಯ ಆಸ್ಪತ್ರೆಯಲ್ಲಿ 200 ಎಲ್‌ಪಿಎಂ ಹಾಗೂ ವಾಮದಪದವು ಸಮುದಾಯ ಆಸ್ಪತ್ರೆಯಲ್ಲಿ 50 ಎಲ್‌ಪಿಎಂ ಘಟಕಗಳು ನಿರ್ಮಾಣವಾಗುತ್ತಿದೆ.
ಆಕ್ಸಿಜನ್ ಬೇಡಿಕೆ; 30 ಕಿ.ಲೀ.ನಿಂದ 13 ಕಿ.ಲೀ.ಗೆ ಇಳಿಕೆ :
ಪ್ರಸಕ್ತ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಹೀಗಾಗಿ ದೈನಂದಿನ ಆಕ್ಸಿಜನ್ ಬೇಡಿಕೆ ಪ್ರಮಾಣ ಕೂಡ (ಕೊರೊನಾ ಉಲ್ಬಣವಿದ್ದ ಕಾಲ) 28-30 ಕಿಲೋ ಲೀಟರ್‌ನಿಂದ ಸದ್ಯ 12-13 ಕಿ.ಲೀಗೆ ಇಳಿದಿದೆ. ಲಿಕ್ವಿಡ್ ಆಕ್ಸಿಜನ್ ಅನ್ನು ಬಳ್ಳಾರಿ, ಕೇರಳದಿಂದ ತಂದು ರೀಪಿಲ್ಲಿಂಗ್ ಮಾಡುವ ಒಂದು ಘಟಕ ಹಾಗೂ “ನ್ಯಾಚುರಲ್ ಏರ್’ ಅನ್ನು ಕಂಪ್ರಸ್ ಮಾಡಿ ಪ್ರತ್ಯೇಕಿಸಿ ಆಕ್ಸಿಜನ್ ತಯಾರಿಸುವ, ರೀಫಿಲ್ಲಿಂಗ್ ಮಾಡುವ ಎರಡು ಉತ್ಪಾದನ ಘಟಕಗಳು ದ.ಕ. ಜಿಲ್ಲೆಯಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿವೆ. ದ.ಕ./ಉಡುಪಿ ಜಿಲ್ಲೆಯ ಬಹುತೇಕ ಎಲ್ಲ ಆಸ್ಪತ್ರೆಗಳಿಗೆ ಇಲ್ಲಿಂದಲೇ ಆಕ್ಸಿಜನ್ ಸರಬರಾಜು ಮಾಡಲಾಗುತ್ತಿತ್ತು. ಜತೆಗೆ ಖಾಸಗಿ ಆಸ್ಪತ್ರೆಗೆ ಬಳ್ಳಾರಿಯಿಂದ ಆಕ್ಸಿಜನ್ ತರಿಸಲಾಗುತ್ತಿದೆ.
ದ.ಕ. ಜಿಲ್ಲೆಯಲ್ಲಿ ಕೊರೊನಾ ಆತಂಕ ಮತ್ತೆ ಎದುರಾದರೂ ಆಕ್ಸಿಜನ್ ಸಮಸ್ಯೆ ಈ ಬಾರಿ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ವಿವಿಧ ಕಂಪೆನಿಗಳ ನೆರವಿನಿಂದ ಜಿಲ್ಲಾ/ತಾಲೂಕು ಆಸ್ಪತ್ರೆ ಗಳಲ್ಲಿ ಆಕ್ಸಿಜನ್ ಘಟಕ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಬಹು ತೇಕ ಪೂರ್ಣವಾಗಿದೆ. ಉಳಿದ ಘಟಕ ಶೀಘ್ರ ಪೂರ್ಣವಾಗಲಿದೆ. –ಡಾ| ಕಿಶೋರ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.