Advertisement

ಇಸ್ರೇಲ್‌ನಿಂದ ಕೆಜಿಎಫ್‌ ಗೆ ಬಂತು ಆಕ್ಸಿಜನ್‌ ಘಟಕ

03:16 PM May 11, 2021 | Team Udayavani |

ಕೋಲಾರ/ಕೆಜಿಎಫ್: ಇಸ್ರೇಲ್‌ ದೇಶ ದಿಂದ ಕೊಡುಗೆಯಾಗಿ ನೀಡಿದ್ದ 500 ಎಲ್‌ಪಿಎಂ ಸಾಮರ್ಥ್ಯದ ಆಕ್ಸಿಜನ್‌ ಉತ್ಪಾದನಾ ಘಟಕ ರಾತ್ರೋರಾತ್ರಿ ಬೇರೆಗೆ ಸ್ಥಳಾಂತರವಾಗುವುದನ್ನು ತಪ್ಪಿಸಿ ಜಿಲ್ಲೆ ಯಲ್ಲೇ ಉಳಿಸಿಕೊಳ್ಳುವಲ್ಲಿ ಸಂಸದ ಮುನಿಸ್ವಾಮಿ ನಡೆಸಿದ ಪ್ರಯತ್ನ ಫಲ ನೀಡಿದೆ.

Advertisement

ಇಸ್ರೇಲ್‌ನಿಂದ ಭಾರತಕ್ಕೆ ಇಂತಹ ಮೂರು ಆಕ್ಸಿಜನ್‌ ಉತ್ಪಾದನಾ ಘಟಕಗಳನ್ನು ನೀಡಿದ್ದು, ಅದರಲ್ಲಿ ಒಂದು ಉತ್ತರ ಪ್ರದೇಶದ ವಾರಣಾಸಿ, ಮತ್ತೂಂದು ಮೈಸೂ ರಿನ ಎಚ್‌ಡಿಕೋಟೆ ಹಾಗೂ ಕೋಲಾರ ಜಿಲ್ಲೆಯ ಕೆಜಿಎಫ್‌ ನಗರದಲ್ಲಿ ಒಂದನ್ನುತೆರೆಯಲು ಆದೇಶ ನೀಡಲಾಗಿತ್ತು. ಈ ಸಂಬಂಧ ರಾಜ್ಯ ಸರ್ಕಾರದಿಂದ ಘಟಕ ಬರುತ್ತಿರುವ ಸೂಚನೆಗಳಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿತ್ತು. ಜತೆಗೆ ಆಕ್ಸಿಜನ್‌ ಕೊರತೆಎದುರಿಸುತ್ತಿದ್ದ ಜಿಲ್ಲೆಯ ಜನತೆಗೆ ಇದುಖುಷಿ ತಂದಿತ್ತು.

ಇದ್ದಕ್ಕಿದ್ದಂತೆ ಕೆಜಿಎಫ್‌ಗೆಮಂಜೂರಾಗಿದ್ದ ಆಕ್ಸಿಜನ್‌ ಪ್ಲಾಂಟ್‌ ತುಮಕೂರಿಗೆ ಸ್ಥಳಾಂತರವಾಗಿದೆ ಎಂಬ ಸುದ್ದಿ ಜಿಲ್ಲೆಯ ಜನರ ಆಕ್ರೋಶಕ್ಕೂ ಕಾರಣವಾಗಿ, ಕೋಲಾರ ನತದೃಷ್ಟ ಜಿಲ್ಲೆ ಎಂಬ ನೋವಿನ ಮಾತುಗಳು ಕೇಳಿ ಬಂದಿದ್ದವು ಮತ್ತು ಈ ಸಂಬಂಧ ಮುನಿಸ್ವಾಮಿ ಪ್ರತಿಕ್ರಿಯಿಸಿ ಕೊನೆ ಘಳಿಗೆಯಲ್ಲಿ ತುಮ ಕೂರಿಗೆ ಘಟಕ ಸ್ಥಳಾಂತರದ ಸುದ್ದಿಯಿಂದ ನನಗೂ ಅಸಮಾಧಾನವಾಗಿದೆ ಎಂದು ತಿಳಿಸಿದ್ದರು.

ಜತೆಗೆ ತುಮಕೂರಿನಲ್ಲಿ ಕೋವಿಡ್‌ ಸೋಂಕು ತೀವ್ರವಾಗಿದೆ ಮತ್ತು ಸಾವುನೋವಿನ ಪ್ರಮಾಣ ಅಲ್ಲಿ ಹೆಚ್ಚಾಗಿರುವುದರಿಂದ ಕೋಲಾರದಿಂದ ಆಕ್ಸಿಜನ್‌ ಘಟಕಅಲ್ಲಿಗೆ ಸ್ಥಳಾಂತರಿಸಲಾಗಿದೆ ಎಂಬ ಸಮ ಜಾಯಿಷಿಯೂ ಉನ್ನತ ಮೂಲಗಳಿಂದಸಿಕ್ಕಿತು.

ಮುನಿಸ್ವಾಮಿ ಪ್ರಯತಕ್ಕೆ ಕೊನೆಗೂ ಫಲಿಸಿತು: ಕೂಡಲೇ ಕಾರ್ಯೋನ್ಮುಖ ರಾದ ಸಂಸದ ಮುನಿಸ್ವಾಮಿ ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌,ಕೇಂದ್ರ ಸಚಿವ ಪ್ರಹ್ಲಾದ್‌ಜೋಷಿಅವರನ್ನು ಸಂಪರ್ಕಿಸಿ ಅವರಿಗೆ ಸಮಸ್ಯೆಯ ಮನದಟ್ಟು ಮಾಡಿ ಘಟಕಕೋಲಾರ ಜಿಲ್ಲೆಗೆ ನೀಡುವಂತೆಮನವೊಲಿಸಿದರು. ಈ ಸಂಬಂಧಮುಖ್ಯಮಂತ್ರಿ ಯಡಿಯೂರಪ್ಪ, ಡಿಸಿಎಂಅಶ್ವತ್ಥನಾರಾಯಣ, ರಾಜ್ಯ ಆರೋಗ್ಯಸಚಿವ ಡಾ.ಸುಧಾಕರ್‌, ರಾಜ್ಯದ ಮುಖ್ಯಕಾರ್ಯ ದರ್ಶಿ ರವಿಕುಮಾರ್‌ ಅವರಿಗೂಪತ್ರ, ದೂರವಾಣಿ ಮೂಲಕ ಮಾತನಾಡಿಒತ್ತಡ ಹಾಕಿದರು. ಕೊನೆಗೂ ಸಂಸದಮುನಿಸ್ವಾಮಿ ಅವರ ಎಲ್ಲಾ ಪ್ರಯತ್ನ ಗಳಿಗೂ ಫಲ ಸಿಕ್ಕಿದ್ದು, ಇಸ್ರೇಲ್‌ ಕೊಡುಗೆ ಯಾಗಿ ನೀಡಿರುವ ಆಕ್ಸಿಜನ್‌ ಘಟಕ ಮತ್ತೆ ಕೋಲಾರಕ್ಕೆ ಬರುವಂತಾಯಿತು.

Advertisement

ಆಕ್ಸಿಜನ್‌ ಘಟಕದೊಂದಿಗೆ ಬಂದಕೇಂದ್ರದ ಅಧಿಕಾರಿಗಳು ಸಂಸದ ಮುನಿಸ್ವಾಮಿ ಸಮ್ಮುಖದಲ್ಲಿ ಕೆಜಿಎಫ್‌ ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರಿಸಿದರು.

ಪ್ರಧಾನಿಗೆ ಸಂಸದರ ಧನ್ಯವಾದ: ಜಿಲ್ಲೆಯಲ್ಲಿ ಕೋವಿಡ್‌-19 ಹೆಚ್ಚುತ್ತಿರುವುದರಿಂದ ಜನರ ಕ್ರಮಗಳನ್ನು ಸ್ಪಂದಿಸಿ ಇಸ್ರೇಲ್‌ನಿಂದ ಮೊಟ್ಟ ಮೊದಲ ಬಾರಿಗೆಬಂದ ಆಕ್ಸಿಜನ್‌ ಪ್ಲಾಂಟ್‌ಅನ್ನು ಕೆಜಿಎಫ್‌ ನಲ್ಲಿ ಸ್ಥಾಪನೆ ಮಾಡಲು ಅವಕಾಶಮಾಡಿಕೊಟ್ಟ ಪ್ರಧಾನಿ ಮೋದಿ, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌, ಸಿಎಂ ಯಡಿಯೂರಪ್ಪಗೆ ಸಂಸದ ಮುನಿಸ್ವಾಮಿ ಧನ್ಯವಾದ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next