Advertisement

ಕೆಎಂಎಫ್‌ನಿಂದ 200 ಹಾಸಿಗೆಗೆ ಆಕ್ಸಿಜನ್‌ ವ್ಯವಸ್ಥೆ

02:47 PM May 05, 2021 | Team Udayavani |

ಬೆಳಗಾವಿ: ರೈತರ ಜೀವನಾಡಿ ಆಗಿರುವ ಕರ್ನಾಟಕಹಾಲು ಮಹಾಮಂಡಳಿ ಸುಮಾರು ಒಂದು ಕೋಟಿರೂ. ವೆಚ್ಚದಲ್ಲಿ 200 ಹಾಸಿಗೆಗಳಿಗೆ ಆಕ್ಸಿಜನ್‌ಪೂರೈಸುವ ನಿರ್ಧಾರ ತೆಗೆದುಕೊಂಡಿದೆ ಎಂದುಕೆಎಂಎಫ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿತಿಳಿಸಿದರು.
ಬೆಂಗಳೂರಿನ ಕೆಎಂಎಫ್‌ ಪ್ರಧಾನ ಕಚೇರಿಯಲ್ಲಿಮಂಗಳವಾರ ನಡೆದ ಅ ಧಿಕಾರಿಗಳ ಸಭೆಯಲ್ಲಿ ಈವಿಷಯ ತಿಳಿಸಿ, ಆಕ್ಸಿಜನ್‌ ಕೊರತೆಯಿಂದ ಬಹಳಷ್ಟು ಕೊರೊನಾ ಸೋಂಕಿತರು ಸಾವಿಗೀಡಾಗುತ್ತಿರುವಹಿನ್ನೆಲೆಯಲ್ಲಿ ಸೋಂಕಿತರ ಅನುಕೂಲಕ್ಕಾಗಿ 200ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಲಾಗುತ್ತಿದೆ.

Advertisement

ಬೆಡ್‌,ಸಿಲಿಂಡರ್‌ ಮತ್ತು ಆಕ್ಸಿಜನ್‌ ಉತ್ಪಾದಿಸಲುಸಾಮರ್ಥ್ಯವಿರುವ ಕಂಪನಿಯೊಂದಕ್ಕೆ ಟೆಂಡರ್‌ನೀಡಲಾಗುತ್ತಿದೆ. ಸೋಂಕಿತರಿಗೆ ಆಕ್ಸಿಜನ್‌ ಉಚಿñವಾಗಿ ‌ನೀಡಲು ಯೋಜಿಸಿದ್ದು, ಸರ್ಕಾರಿ ಆಸ್ಪತ್ರೆ ಯೊಂದನ್ನುಗುರುತಿಸಿ ಅಲ್ಲಿ ಆಕ್ಸಿಜನ್‌ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು. ಸೋಂಕಿತರಿಗೆ ಈ ಸೌಲಭ್ಯ ಸಂಪೂರ್ಣಉಚಿತವಾಗಿದ್ದು, ಕೊರೊನಾ ಸೋಂಕಿತರಿಗೆ ತಿಂಗಳೊಳಗೆ ಆಕ್ಸಿಜನ್‌ ಪೂರೈಲಾಗುವುದು ಎಂದರು.

ಕೆಎಂಎಫ್‌ ಪ್ರಸಕ್ತ 2020-21ನೇ ಸಾಲಿನಲ್ಲಿ 170ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ದಿನನಿತ್ಯ 81.50ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಕೋವಿಡ್‌ಸಂದರ್ಭ 28ಲಕ್ಷ ಲೀಟರ್‌ ಹಾಲನ್ನು ಹಾಲಿನಪೌಡರ್‌ ಆಗಿ ಪರಿವರ್ತಿಸಲಾಗುತ್ತಿದೆ. 52 ಲಕ್ಷಲೀಟರ್‌ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನುಮಾರಾಟ ಮಾಡಲಾಗುತ್ತಿದೆ.

ಕೋವಿಡ್‌ನ‌ಂತಹಸಂದಿಗ್ಧ ಸಂದರ್ಭದಲ್ಲೂ ರೈತರಿಂದ ಹಾಲನ್ನು ತಪ್ಪದೇಸಂಗ್ರಹಿಸಲಾಗುತ್ತಿದೆ. ರೈತರಿಗೆ ಯಾವುದೇತೊಂದರೆಯಾಗದಂತೆ ನಮ್ಮ ಸಿಬ್ಬಂದಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಕೆಎಂಎಫ್‌ನ ಎಲ್ಲ ನೌಕರವರ್ಗದವರಿಗೆ ವಿಮೆ ಸೌಲಭ್ಯ ಕಲ್ಪಿಸಿಕೊಡಲಾಗಿದೆಎಂದರು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರ್ಕಾರದಆದೇಶದನ್ವಯ ಹಾಲು-ಹಾಲಿನ ಉತ್ಪನ್ನಗಳ ನಂದಿನಿಮಾರಾಟ ಮಳಿಗೆಗಳನ್ನು ದಿನಪೂರ್ತಿ ತೆರೆಯಲುಅವಕಾಶ ಕಲ್ಪಿಸಲಾಗಿದೆ. ಗ್ರಾಹಕರು-ಸಾರ್ವಜನಿಕರುಇದರ ಸದುಪಯೋಗ ಪಡೆಯಬೇಕು. ಮಾರಾಟಮಳಿಗೆಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದರಜತೆಗೆ ಮಾಸ್ಕ್ ಧರಿಸಬೇಕು.

Advertisement

ಕೋವಿಡ್‌ ನಿಯಮಗಳನ್ನುಕಡ್ಡಾಯವಾಗಿ ಪಾಲಿಸಿ ಸಹಕರಿಸುವಂತೆ ಕೆಎಂಎಫ್‌ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ರೈತರಲ್ಲಿ-ಗ್ರಾಹಕರಲ್ಲಿಮನವಿ ಮಾಡಿದ್ದಾರೆ. ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ, ಪಶು ಸಂಗೋಪನೆ, ಮಾರುಕಟ್ಟೆ, ಗುಣನಿಯಂತ್ರಣ, ಅಭಿಯಂತರ, ಖರೀದಿ ವಿಭಾಗದಮುಖ್ಯಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next