Advertisement

ಧರ್ಮಸ್ಥಳ ಕ್ಷೇತ್ರದಿಂದ ಆಮ್ಲಜನಕ ಪೂರೈಕೆ

01:02 AM May 05, 2021 | Team Udayavani |

ಬೆಳ್ತಂಗಡಿ: ಕೋವಿಡ್ ಎರಡನೇ ಅಲೆಯಲ್ಲಿ ಹೆಚ್ಚಿನ ಪೀಡಿತರು ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದು, ಅನೇಕ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯನ್ನು ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ರಾಷ್ಟ್ರದ ಪ್ರಮುಖ ಆಮ್ಲಜನಕ ಉತ್ಪಾದನ ಸಂಸ್ಥೆ ಬಳ್ಳಾರಿಯ ಜಿಂದಾಲ್‌ ಸ್ಟೀಲ್‌ ಪ್ಲಾಂಟ್‌ನ ಅಧಿಕಾರಿಗಳೊಡನೆ ಚರ್ಚಿಸಿದ್ದು, ಅದರ ಪರಿಣಾಮವಾಗಿ ಮಂಗಳವಾರ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ 5.5 ಟನ್‌ ಆಮ್ಲಜನಕವನ್ನು ಒದಗಿಸಲಾಯಿತು.

Advertisement

ಬಳ್ಳಾರಿಯ ತೋರಣಗಲ್‌ನಿಂದ ಆಮ್ಲಜನಕ ತಂದ ಕ್ರಯೋ ಜನಿಕ್‌ ಟ್ಯಾಂಕರನ್ನು ಮಂಗಳೂರಿ ನಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ವೇದವ್ಯಾಸ ಕಾಮತ್‌ ಮತ್ತು ಜಿಲ್ಲಾ ಸಹಾಯಕ ಔಷಧ ನಿಯಂತ್ರಣಾಧಿಕಾರಿ ರಮಾಕಾಂತ್‌ ಕುಂಟೆ ಅವರ ಸಮ್ಮುಖದಲ್ಲಿ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್‌ ಕುಮಾರ್‌ ಅವರು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರ ಮೂಲಕ ಆಸ್ಪತ್ರೆಗೆ ವರ್ಗಾವಣೆ ಮಾಡಿದರು.

ಇದು ವೆನ್ಲಾಕ್‌ನ 3 ದಿನದ ಆಮ್ಲಜನಕದ ಬೇಡಿಕೆ ಯನ್ನು ಪೂರೈಸಲಿದೆ. ಕ್ರಯೋಜನಿಕ್‌ ಟ್ಯಾಂಕರ್‌ಗಳ ಕೊರತೆ ಯಿರುವ ಸಂದರ್ಭ ಹೆಗ್ಗಡೆ ಅವರ ಬೇಡಿಕೆಗೆ ತುರ್ತಾಗಿ ಸ್ಪಂದಿಸಿದ ಏರ್‌ವಾಟರ್‌ ಇಂಡಿಯಾ ಪ್ರೈವೇಟ್‌ನ ದಕ್ಷಿಣ ಭಾರತದ ಮಾರಾಟ ಅಧಿಕಾರಿ ತ್ರಿದೇವ್‌ ಬ್ಯಾನರ್ಜಿ ಅವರು ಮತ್ತು ಹರೀಶ್‌ ಪ್ರಭು ಅವರು ಸಾಗಾಟ ವ್ಯವಸ್ಥೆಯನ್ನು ಅಲ್ಪ ಸಮಯದಲ್ಲಿಯೇ ಮಾಡಿದ್ದಾರೆ. ಸಾಗಾಟದಲ್ಲಿ ಬೆಂಗಳೂರಿನ ಹೊಸ ಕೋಟೆಯ ಸ್ಪೆಕ್‌ ಆ್ಯಂಡ್‌ ಕಾಲ್‌ ಗ್ಯಾಸಸ್‌ ಕಂಪೆನಿಯವರು ಸಹಕಾರ ನೀಡಿದ್ದರು ಎಂದು ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌.ಮಂಜುನಾಥ್‌ ತಿಳಿಸಿದ್ದಾರೆ.

ಆಮ್ಲಜನಕ ಖರೀದಿ ಮತ್ತು ಸಾಗಾಟದ ಸಂಪೂರ್ಣ ವೆಚ್ಚವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭರಿಸಿದೆ. ಮುಂದಿನ ದಿನಗಳಲ್ಲಿ ಸುಮಾರು 100 ಟನ್‌ ಆಮ್ಲಜನಕವನ್ನು ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಡಾ| ಎಲ್‌.ಎಚ್‌. ಮಂಜುನಾಥ್‌, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ

 

Advertisement
Advertisement

Udayavani is now on Telegram. Click here to join our channel and stay updated with the latest news.

Next