Advertisement

ಸೊರಗುತ್ತಿದೆ ಆಕ್ಸಿಜನ್‌ ಪಾಯಿಂಟ್‌

04:26 PM Jan 04, 2018 | |

ಹಟ್ಟಿ ಚಿನ್ನದ ಗಣಿ: ಗೋಲಪಲ್ಲಿ ಸೇತುವೆ ಹತ್ತಿರ ರಾಷ್ಟೀಯ ಹೆದ್ದಾರಿಗೆ ಹೊಂದಿಕೊಂಡು ಅರಣ್ಯ ಇಲಾಖೆಯಿಂದ ನಿರ್ಮಿಸಿದ ಆಕ್ಸಿಜನ್‌ ಪಾಯಿಂಟ್‌ ಎಂಬ ಉದ್ಯಾನ ನಿರ್ವಹಣೆ ಕೊರತೆಯಿಂದ ಸೋರಗಿದೆ.

Advertisement

ಅರಣ್ಯ ಇಲಾಖೆ ಮೂರು ವರ್ಷದ ಹಿಂದೆ ಪ್ರವಾಸಿಗರ ವಿಶ್ರಾಂತಿಗಾಗಿ ಗೋಲಪಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಆಕ್ಸಿಜನ್‌ ಪಾಯಿಂಟ್‌ ಉದ್ಯಾನ ಆರಂಭಿಸಿದೆ. ಈ ಮಾರ್ಗದಲ್ಲಿ ಹಾದು ಹೋಗುವ ಪ್ರಯಾಣಿಕರು ಹಾಗೂ ಪ್ರವಾಸಿಗರು ವಿಶ್ರಮಿಸಿ ಶುದ್ಧಗಾಳಿ ಸೇವಿಸಲಿ ಎಂಬ ಉದ್ದೇಶದಿಂದ ಈ ಪಾಯಿಂಟ್‌ ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಕೊರತೆಯಿಂದ ಸಸಿಗಳು, ಗಿಡಗಳು ಒಣಗುತ್ತಿವೆ.

ಆಕ್ಸಿಜನ್‌ ಪಾಯಿಂಟ್‌ನಲ್ಲಿ ಎಲ್ಲ ರೀತಿಯ ಸಸಿಗಳನ್ನು ನೆಡಲಾಗಿದೆ. ಆದರೆ ಅರಣ್ಯ ಇಲಾಖೆ ಸಸಿಗಳ ಪಾಲನೆ ಪೋಷಣೆಗೆ ಗಮನಹರಿಸದ್ದರಿಂದ ಸಸಿಗಳು, ಗಿಡಗಳು ಒಣಗುತ್ತಿವೆ. ವನದ ಸುತ್ತುವರಿದ ಮುಳ್ಳಿನ ಗಿಡದಿಂದಲೇ ರಕ್ಷಣೆಗೆ ಕ್ರಮ ಕೈಗೊಂಡಿದ್ದಾರೆ. ಒಳ ಪ್ರವೇಶಿಸಲು ದ್ವಾರವೊಂದಕ್ಕೆ ಕಟ್ಟಿಗೆ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಅವು ಹಾಳಾಗಿವೆ. ಅರಣ್ಯ ಇಲಾಖೆಯಿಂದ ಸಮರ್ಪಕ
ನಿರ್ವಹಣೆ ನಡೆಯದ ಪರಿಣಾಮ ಕೆಲವು ಸಸಿಗಳು ಬೆಳದರೆ ಇನ್ನೂ ಕೆಲವು ಸಸಿಗಳು ಒಣಗಿವೆ.

ಸರಿಯಾದ ಪಾಲನೆ ಪೋಷಣೆ ನಡೆದಿದ್ದರೆ ಈ ಆಕ್ಷಿಜನ್‌ ಪಾಯಿಂಟ್‌ ಉದ್ಯಾನ ಪ್ರವಾಸಿಗರ ಆಕರ್ಷಣೆಯ ತಾಣವಾಗುತ್ತಿತ್ತು. ಅರಣ್ಯ ಇಲಾಖೆಯಲ್ಲಿ ಯೋಜನೆ ಇದೆ ಎಂದು ಹೆಸರಿಗೆ ಮಾತ್ರ ಎಂಬಂತೆ ಆಕ್ಸಿಜನ್‌ ಪಾಯಿಂಟ್‌ ಉದ್ಯಾನವನ ಆರಂಭಿಸಿದಂತಿದೆ.

ದನ-ಕುರಿಗಳಿಗೆ ಮೇಯುವ ತಾಣ: ಸಸಿಗಳು ಬೆಳೆದು ನೆರಳು ಕೊಡುವವರೆಗೂ ಸಂರಕ್ಷಣೆ ಮಾಡಿದರೆ ಮಾತ್ರ ಆಕ್ಸಿಜನ್‌
ಪಾಯಿಂಟ್‌ ಪ್ರವಾಸಿಗರನ್ನು ಸೆಳೆಯಲಿದೆ. ಇಲ್ಲವಾದರೆ ಹಾಳಾಗಿ ಹೋಗುವುದರಲ್ಲಿ ಅನುಮಾನವಿಲ್ಲ. ಸುತ್ತಮುತ್ತಲಿನ ದೊಡ್ಡಿಗಳ ದನ, ಕುರಿಗಳು ಇಲ್ಲಿಗೆ ಮೇಯಲು ಬರುತ್ತಿವೆ. ಇವುಗಳ ಬಾಯಿಗೆ ಸಿಕ್ಕು ಸಸಿಗಳು ನಾಶವಾಗುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಂರಕ್ಷಣೆಗೆ ಮುಂದಾಗಬೇಕಾಗಿದೆ.

Advertisement

ಗುರುಗುಂಟಾ ಹಾಗೂ ಗೋಲಪಲ್ಲಿ ಮಧ್ಯದಲ್ಲಿ ಅರಣ್ಯ ಇಲಾಖೆಯವರು ಸ್ಥಾಪಿಸಿರುವ ಆಕ್ಸಿಜನ್‌ ಪಾಯಿಂಟ್‌ ಉದ್ಯಾನದಲ್ಲಿ ನಿರ್ವಹಣೆ ಇಲ್ಲದೆ ಸಸಿಗಳು ಹಾಳಾಗಿವೆ. ರಾಷ್ಟೀಯ ಹೆದ್ದಾರಿಗೆ ಹೊಂದಿಕೊಂಡು ಇದನ್ನು ನಿರ್ಮಿಸಲಾಗಿದೆ. ಆದರೆ ಇಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ.  ದುರುಗಪ್ಪ, ಗುರುಗುಂಟಾ ನಿವಾಸಿ

ಗೋಲಪಲ್ಲಿ ಸೇತುವೆ ಹತ್ತಿರದಲ್ಲಿರುವ ಆಕ್ಸಿಜನ್‌ ಪಾಯಿಟ್‌ನಲ್ಲಿ ಸಸಿಗಳನ್ನು ನೆಡಲಾಗಿದೆ. ಅವುಗಳ ಸಂರಕ್ಷಣೆಗಾಗಿ ಪ್ರತ್ಯೇಕ ಸಿಬ್ಬಂದಿ ಇಲ್ಲ. ನಮ್ಮ ಸಿಬ್ಬಂದಿ ನಿರ್ವಹಣೆ ಮಾಡುತ್ತಿದ್ದಾರೆ. ಆಕ್ಸಿಜನ್‌ ಪಾಯಿಂಟ್‌ನ್ನು ನಿರ್ಲಕ್ಷಿಸಿಲ್ಲ.  ಎಸ್‌.ಕೆ. ಕಾಂಬ್ಳೆ, ವಲಯ ಅರಣ್ಯಾಧಿಕಾರಿ
ಲಿಂಗಸುಗೂರು.

Advertisement

Udayavani is now on Telegram. Click here to join our channel and stay updated with the latest news.

Next