ಮಂಡ್ಯ: ರಾಜ್ಯದಲ್ಲಿಯೇ ಮೊದಲ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಸಚಿವ ಕೆ.ಸಿ. ನಾರಾ ಯಣ ಗೌಡ ಹಾಗೂ ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ ಅವರು ಚಾಲನೆ ನೀಡಿದರು.
ನಗರದ ಮಿಮ್ಸ್ ಆವರಣದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದ್ದು, ರಾಜ್ಯ zದಲ್ಲಿಯೇ ಮೊದಲ ಪ್ಲಾಂಟ್ ಇದಾ ಗಿದ್ದು, ಗುದ್ದಲಿ ಪೂಜೆ ನೆರವೇರಿಸಲಾಯಿತು. ಮೊಟ್ಟ ಮೊದಲ ಆಕ್ಸಿಜನ್ ಪ್ಲಾಂಟ್: ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಮಂಡ್ಯದಲ್ಲಿ ಆಕ್ಸಿಜನ್ ಪ್ಲಾಂಟ್‌ಗೆ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಸರ್ಕಾರ ಮಂಡ್ಯ ಹಾಗೂ ಮಳವಳ್ಳಿಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಅವಕಾಶ ನೀಡಿದೆ ಎಂದರು.
ಎಲ್ಲ ತಾಲೂಕಿನಲ್ಲೂ ಪ್ಲಾಂಟ್: ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣವಾಗಬೇಕು. ಆಕ್ಸಿಜನ್ ಸಮಸ್ಯೆಗಳ ಸರಿದೂಗಿಸಬೇಕು. ಆಕ್ಸಿಜನ್ ಬೆಡ್ ಸಮಸ್ಯೆ ಉಂಟಾದಲ್ಲಿ ಬಸ್‌ನಲ್ಲಿ 6ರಿಂದ 8 ಜನಕ್ಕೆ ಆಕ್ಸಿಜನ್ ಕೊಡುವ ಹೊಸ ಪ್ಲಾನ್ ಮಾಡಲಾ ಗುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶ ದಲ್ಲಿ ಯಾರೂ ಸೋಂಕಿಗೆ ಒಳಗಾಗಿ ತುರ್ತು ಪರಿಸ್ಥಿತಿ ಇರುತ್ತದೆಯೋ ಅಂಥ ಸೋಂಕಿತ ರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುವ ಉದ್ದೇಶವಿದೆ. ಇದರ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಮಾತ ನಾಡಿ ಮನವಿ ಮಾಡಲಾಗಿದೆ ಎಂದರು.
ನಿಯಮ ಪಾಲನೆ ಮಾಡಿ: ಶೀಘ್ರವಾಗಿ ಈ ಯೋಜನೆ ಜಾರಿಗೆ ಬರುತ್ತದೆ. ನಮ್ಮಲ್ಲಿ ಆಕ್ಸಿಜನ್ ಪ್ಲಾಂಟ್ ಇರಲಿಲ್ಲ. ಬೇರೆ ಕಡೆ ಯಿಂದ ಆಕ್ಸಿಜನ್ ತರಿಸಬೇಕಾದ ಸಂಕಷ್ಟ ಇತ್ತು. ದಾನಿಗಳೂ ಆಕ್ಸಿಜನ್ ಪ್ಲಾಂಟ್ ನಿರ್ಮಾ ಣಕ್ಕೆ ಮುಂದಾಗಿದ್ದಾರೆ. ಇದನ್ನು ಉಪ ಯೋಗಿಸಿಕೊಂಡು ಜಿಲ್ಲೆಯ ಎಲ್ಲ ತಾಲೂಕು ಗಳಲ್ಲೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಚಾಮರಾಜನಗರ ದುರಂತ ಆಗಬಾರದು: ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಕೊರೊನಾ ಸೋಂಕಿನ ಹಾವಳಿ ಹೆಚ್ಚಾಗಿದೆ. ಆಕ್ಸಿ ಜನ್ ಕೊರತೆ ಇದೆ. ಮುಖ್ಯಮಂತ್ರಿಗಳು ಆಕ್ಸಿ ಜನ್ ಪ್ಲಾಂಟ್ ಮಂಜೂರು ಮಾಡುವ ಮೂಲಕ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ ಎಂದರು. ಕಳೆದ ರಾತ್ರಿ 10.30ರಲ್ಲಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ಇದರಿಂದ ನನಗೂ ನಿದ್ರೆ ಬಂದಿರಲಿಲ್ಲ. 10.30ರಲ್ಲಿ ಬೇರೆ ಕಡೆಯಿಂದ ಆಕ್ಸಿಜನ್ ಬರದಿದ್ದರೆ ಚಾಮರಾಜನಗರ ದುರಂತ ಮಂಡ್ಯದಲ್ಲೂ ಸಂಭವಿಸುವ ಸಾಧ್ಯತೆ ಇತ್ತು. ಆದ್ದರಿಂದ ಆಕ್ಸಿಜನ್ ಅಗತ್ಯ ವಿರುವ ಸೋಂಕಿತರಿಗೆ ನೀಡಲಾಗುತ್ತಿದ್ದು, ವೆಂಟಿಲೇಟರ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಹಿಂದೆಯೇ ಆಗ ಬೇಕಿತ್ತು. ಆದರೆ ಆಗಿರಲಿಲ್ಲ. ಆದರೂ ಸಾರ್ವ ಜನಿಕರು ಶಾಂತ ರೀತಿಯಿಂದ ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇ ಗೌಡ, ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು, ಮಿಮ್ಸ್ ನಿರ್ದೇಶಕ ಡಾ.ಎಂ.ಆರ್. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯ ಕುಮಾರ್. ತಹಶೀಲ್ದಾರ್ ಚಂದ್ರ ಶೇಖರ್ ಶಂ.ಗಾಳಿ ಇದ್ದರು.