ದಾವಣಗೆರೆ: ಜಿಲ್ಲಾಸ್ಪತ್ರೆಯಲ್ಲಿ ಗುರುವಾರಆಕ್ಸಿಜನ್ ಕೊರತೆಯಾಗುವ ಪರಿಸ್ಥಿತಿ ನಿರ್ಮಾಣವಾಗಿ ಎಲ್ಲರಲ್ಲಿ ಆತಂಕಸೃಷ್ಟಿಯಾಗಲು ದಾವಣಗೆರೆ ಜಿಲ್ಲೆಯಿಂದ ಹೊರ ಜಿಲ್ಲೆಗೆ ಆಕ್ಸಿಜನ್ ಕಳುಹಿಸಿದ್ದೇ ಕಾರಣ ಎಂದು ಕಾಂಗ್ರೆಸ್ ಮುಖಂಡ ಎಂ.ಟಿ. ಸುಭಾಶ್ಚಂದ್ರ ಆರೋಪಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತು ಅಗತ್ಯವಿರುವ ಕಾರಣಕ್ಕಾಗಿ ದಕ್ಷಿಣಕನ್ನಡ, ಉಡುಪಿಗೆ ಆಕ್ಸಿಜನ್ ಕಳುಹಿಸಿದ್ದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗುವ ಸಾಧ್ಯತೆ ಬಗ್ಗೆ ಜಿಲ್ಲಾಧಿಕಾರಿಯವರು ಆಕ್ಸಿಜನ್ ಕಳುಹಿಸಲು ಸೂಚಿಸಿದ ಮುಖ್ಯಕಾರ್ಯದರ್ಶಿಯವರಿಗೆ ಮನವರಿಕೆ ಮಾಡಬೇಕಿತ್ತು. ಇನ್ನು ವಿದೇಶದಿಂದ ಮಂಗಳೂರು ಬಂದರಿಗೆ ದೊಡ್ಡಪ್ರಮಾಣದಲ್ಲಿ ಆಕ್ಸಿಜನ್ ಬಂದಿದ್ದುಅಲ್ಲಿಯೇ ಆಕ್ಸಿಜನ್ ಲಭ್ಯವಿರುವ ಬಗ್ಗೆಯೂ ತಿಳಿಸಬೇಕಿತ್ತು. ಏಕಾಏಕಿದಕ್ಷಿಣಕನ್ನಡ ಹಾಗೂ ಉಡುಪಿಗೆ ಆಕ್ಸಿಜನ್ ಕಳುಹಿಸಿದ್ದು ಸರಿಯಲ್ಲ ಎಂದರು.
ಸಿಎಂ ಕೆಳಗಿಳಿಸಲು ಷಡ್ಯಂತ್ರ: ಕೋವಿಡ್ ಪರಿಸ್ಥಿತಿ ಸರಿಯಾಗಿ ನಿಭಾಯಿಸಿಲ್ಲ ಎಂಬಹಣೆಪಟ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಟ್ಟಿ ಅವರನ್ನುಸಿಎಂ ಕುರ್ಚಿಯಿಂದ ಕೆಳಗಿಳಿಸುವಷಡ್ಯಂತ್ರ ಬಿಜೆಪಿಯವರಿಂದಲೇ ನಡೆದಿದೆ ಎಂದರು.
ಕಡತಿ ತಿಪ್ಪೇಶ್, ನ್ಯಾಯವಾದಿಗಳಾದ ಬಿ.ಜಿ. ಚಂದ್ರಶೇಖರ್, ನಿಟುವಳ್ಳಿನಾಗರಾಜ್, ಯಳವಟ್ಟಿ ಕೃಷ್ಣ ನಾಯಕ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಹೊಂದಾಣಿಕೆ ಅವಶ್ಯ. ತುರ್ತು ಆಗತ್ಯಎನಿಸಿದ ಆಮ್ಲಜನಕ ಸರಬರಾಜು ವಿಚಾರದಲ್ಲಂತೂ ಆಕ್ಷೇಪ ಮಾಡಲು ಆಗುವುದಿಲ್ಲ. ಕೇಂದ್ರ ಸರ್ಕಾರದ ನೀತಿಯಂತೆ ಅಗತ್ಯವಿದ್ದವರಿಗೆಯಾರೇಆದರೂ ಆಮ್ಲಜನಕ ಸರಬರಾಜು ಮಾಡಲೇಬೇಕಾಗುತ್ತದೆ. ಆದ್ದರಿಂದದಕ್ಷಿಣಕನ್ನಡ, ಉಡುಪಿಗೆ ಆಕ್ಸಿಜನ್ ಸರಬರಾಜು ಮಾಡಿದ್ದರಲ್ಲಿ ತಪ್ಪಿಲ್ಲ.ಇಲ್ಲಿಯೂ ಕೊರತೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
– ಭೈರತಿ ಬಸವರಾಜ್, ಜಿಲ್ಲಾ ಉಸ್ತುವಾರಿ ಸಚಿವರು